Asianet Suvarna News Asianet Suvarna News

ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಅಯೋಧ್ಯೆ ವಿಮಾನ ನಿಲ್ದಾಣದ ಭೂಮಿ ಹಸ್ತಾಂತರಿಸಿದ ಉತ್ತರ ಪ್ರದೇಶ!

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ಅಯೋಧ್ಯೆಯ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
 

UP government Signs Agreement For Transfer Of 318 Acre Land For Maryada Purushottam Shriram International Airport in Ayodhya san
Author
Bengaluru, First Published Apr 7, 2022, 5:04 PM IST | Last Updated Apr 7, 2022, 5:04 PM IST

ಲಕ್ನೋ (ಏ.7): ಅಯೋಧ್ಯೆಯ ಮರ್ಯಾದಾ ಪುರುಷೋತ್ತಮ ಶ್ರೀರಾಮ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ (Maryada Purushottam Shri Ram International Airport) 317.855 ಎಕರೆ ಭೂಮಿಯನ್ನು ವರ್ಗಾಯಿಸುವ ಕುರಿತು ಉತ್ತರ ಪ್ರದೇಶ (Uttar Pradesh) ಸರ್ಕಾರದ ನಾಗರಿಕ ವಿಮಾನಯಾನ ಇಲಾಖೆಯು ಭಾರತೀಯ ವಿಮಾನ ನಿಲ್ದಾಣಗಳ (Airport Authority of India) ಪ್ರಾಧಿಕಾರದೊಂದಿಗೆ (ಎಎಐ) ಗುರುವಾರ ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರ ಸಮ್ಮುಖದಲ್ಲಿ ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭದಲ್ಲಿ ಮಾತನಾಡಿದ ಅವರು, ಉತ್ತರ ಪ್ರದೇಶವು ವಿಮಾನ ಸೇವೆಯೊಂದಿಗೆ ಸಂಪರ್ಕ ಹೊಂದಿದ ದೇಶದ ಅತಿದೊಡ್ಡ ರಾಜ್ಯವಾಗಲಿದೆ ಎಂದಿದ್ದಾರೆ.

"ಮುಂದಿನ ವರ್ಷದ ವೇಳೆಗೆ, ನಾವು ದೇಶಕ್ಕೆ ಐದು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಒದಗಿಸುವ ಸ್ಥಿತಿಯಲ್ಲಿರುತ್ತೇವೆ. ಅದರೊಂದಿಗೆ 10 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಿದ ನಂತರ, ಉತ್ತರ ಪ್ರದೇಶದಲ್ಲಿ ಇದುವರೆಗೆ 19 ವಿಮಾನ ನಿಲ್ದಾಣಗಳನ್ನು ಕಾರ್ಯಗತಗೊಳಿಸಲಾದಂತಾಗಲಿದೆ" ಎಂದು ಅವರು ಹೇಳಿದರು. ದೇಶದೊಳಗೆ ಕಳೆದ ಐದು ವರ್ಷಗಳಲ್ಲಿ ಯಾವುದೇ ರಾಜ್ಯವು ಅತ್ಯುತ್ತಮ ವಿಮಾನ ಸೇವೆ ಸಂಪರ್ಕಕ್ಕಾಗಿ ಉತ್ತಮ ಪ್ರಗತಿಯನ್ನು ಸಾಧಿಸಿದ್ದರೆ ಅದರಲ್ಲಿ ಉತ್ತರ ಪ್ರದೇಶವೂ ಒಂದಾಗಿದೆ. ಪ್ರಧಾನಿ ಮೋದಿಯವರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ ಎಂದು ಹೇಳಿದರು.

ರಾಮಮಂದಿರದ (Ram Mandir ) ಕಾಮಗಾರಿಯು ಈಗಾಗಲೇ ಪ್ರಾರಂಭವಾಗಿರುವ ಕಾರಣ ಕೇಂದ್ರ ಮತ್ತು ಯುಪಿ ಸರ್ಕಾರಗಳು ಅಯೋಧ್ಯೆಯನ್ನು ಅಂತರರಾಷ್ಟ್ರೀಯ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲು ಆಶಿಸುತ್ತಿವೆ. ಪ್ರವಾಸೋದ್ಯಮವನ್ನು (Tourism) ಹೆಚ್ಚಿಸಲು ಮತ್ತು ಪಕ್ಕದ ಪ್ರದೇಶಗಳಿಗೆ ವಾಯು ಸಂಪರ್ಕವನ್ನು (air-connectivity) ಒದಗಿಸಲು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಆ ದಿಕ್ಕಿನಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ.

ಬುಲ್ಡೋಜರ್ ಬಳಸಿ ಸಮಾಜವಾದಿ ಪಕ್ಷದ ಶಾಸಕನ ಪೆಟ್ರೋಲ್ ಪಂಪ್ ಕೆಡವಿದ ಯೋಗಿ ಸರ್ಕಾರ!

ಅಸ್ತಿತ್ವದಲ್ಲಿರುವ ವಿಮಾನ ನಿಲ್ದಾಣವನ್ನು ನವೀಕರಿಸಲು AAI ಯೊಂದಿಗೆ 2014 ರಲ್ಲಿ MOU ಗೆ ಸಹಿ ಹಾಕಿದ್ದರೂ, ಯೋಜನೆಯು ಪ್ರಾರಂಭವಾಗಲಿಲ್ಲ. 2019 ರಲ್ಲಿ, ರಾಜ್ಯ ಸರ್ಕಾರವು 178 ಎಕರೆ ಪ್ರದೇಶದಲ್ಲಿ ಫ್ಲೈಯಿಂಗ್ ಕ್ಲಬ್ ಚಟುವಟಿಕೆಗಳಿಗೆ ಮತ್ತು ಸಣ್ಣ ವಿಮಾನಗಳ ಮೂಲಕ ನಿಗದಿತವಲ್ಲದ ವಿಮಾನಗಳ ಕುರಿತು ಕಾರ್ಯಸಾಧ್ಯತೆಯ ಅಧ್ಯಯನವನ್ನು ನಡೆಸಿತ್ತು.
ಕಳೆದ ವರ್ಷ ರಾಜ್ಯದ ವಾರ್ಷಿಕ ಬಜೆಟ್‌ನಲ್ಲಿ ( State Budget ) ವಿಮಾನ ನಿಲ್ದಾಣದ ಅಭಿವೃದ್ಧಿಗೆ 101 ಕೋಟಿ ರೂಪಾಯಿಯನ್ನು ಉತ್ತರ ಪ್ರದೇಶ ಸರ್ಕಾರ ಮೀಸಲಿಟ್ಟಿದೆ. ಕಳೆದ ವರ್ಷದ ಆರಂಭದಲ್ಲಿ ಯುಪಿ ವಿಧಾನಸಭೆಯು ಅಯೋಧ್ಯೆ ವಿಮಾನ ನಿಲ್ದಾಣವನ್ನು ಮರ್ಯಾದಾ ಪುರುಷೋತ್ತಮ್ ಶ್ರೀರಾಮ ವಿಮಾನ ನಿಲ್ದಾಣ, ಅಯೋಧ್ಯೆ ಎಂದು ಮರುನಾಮಕರಣ ಮಾಡಲು ನಿರ್ಣಯವನ್ನು ಅಂಗೀಕರಿಸಿತ್ತು. ಆರ್‌ಸಿಎಸ್ ಯೋಜನೆಯಡಿ ಅಯೋಧ್ಯೆ-ಹಿಂಡೋನ್ ವಾಯು ಮಾರ್ಗಕ್ಕಾಗಿ ಕೇಂದ್ರವು ಅಯೋಧ್ಯೆ ಏರ್‌ಸ್ಟ್ರಿಪ್ ಅನ್ನು ಆಯ್ಕೆ ಮಾಡಿತ್ತು.

ಅಕ್ರಮ ಪ್ರದೇಶವಾದ ಸ್ಮಶಾನದ ಮೇಲೆ ಮನೆ ಕಟ್ಟಿದ್ದೇನೆ, ಬುಲ್ಡೋಜರ್ ಬಳಸಿ ಕೆಡವಿ ಯೋಗಿ ಸರ್ಕಾರಕ್ಕೆ ಪತ್ರ ಬರೆದ ವ್ಯಕ್ತಿ!

ಅಯೋಧ್ಯೆಯ ಅಂತಾರಾಷ್ಟ್ರೀಯ ಮಟ್ಟದ ವಿಮಾನ ಸಂಪರ್ಕಕ್ಕೆ ಕ್ರಿಯಾ ಯೋಜನೆ ರೂಪಿಸುವಂತೆ ಸಿಎಂ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಈ ವೇಳೆ ಸೂಚಿಸಿದ್ದರು. ಎ 320 ಮತ್ತು ಬೋಯಿಂಗ್ 737 ನಂತಹ ದೊಡ್ಡ ವಿಮಾನಗಳಿಗಾಗಿ, ಅಯೋಧ್ಯೆಯಲ್ಲಿ ಏರ್‌ಸ್ಟ್ರಿಪ್ ಅಭಿವೃದ್ಧಿ ಮತ್ತು ಸೂಕ್ತವಾದ ರನ್‌ವೇ ಮತ್ತು ಟರ್ಮಿನಲ್ ಕಟ್ಟಡವನ್ನು ನಿರ್ಮಿಸುವುದಾಗಿ ಸಿಎಂ ಘೋಷಿಸಿದ್ದರು. ವಿಮಾನ ನಿಲ್ದಾಣವನ್ನು ಪ್ರಸ್ತಾಪಿಸಿದ ಸ್ಥಳದಲ್ಲಿ ಎರಡು ಡಜನ್‌ಗಿಂತಲೂ ಹೆಚ್ಚು ಕಟ್ಟಡಗಳಿವೆ ಎಂದು ವರದಿಗಳು ಹೇಳಿವೆ. ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾನಿಲಯಕ್ಕೆ ಸೇರಿದ ಭೂಮಿಯ ಭಾಗವೂ ವಿಮಾನ ನಿಲ್ದಾಣದ ವ್ಯಾಪ್ತಿಗೆ ಬರುತ್ತದೆ ಎಂದು ವರದಿಯಾಗಿತ್ತು.

Latest Videos
Follow Us:
Download App:
  • android
  • ios