ಅಕ್ರಮ ಪ್ರದೇಶವಾದ ಸ್ಮಶಾನದ ಮೇಲೆ ಮನೆ ಕಟ್ಟಿದ್ದೇನೆ, ಬುಲ್ಡೋಜರ್ ಬಳಸಿ ಕೆಡವಿ ಯೋಗಿ ಸರ್ಕಾರಕ್ಕೆ ಪತ್ರ ಬರೆದ ವ್ಯಕ್ತಿ!

ಬತ್ತಿಹೋದ ಕೊಳ ಮತ್ತು ಸ್ಮಶಾನದ ಮೇಲೆ ನಿರ್ಮಿಸಿರುವ ಅವರ ಅಕ್ರಮ ನಿವಾಸವನ್ನು ನೆಲಸಮ ಮಾಡುವಂತೆ ಯೋಗಿ ಆದಿತ್ಯನಾಥ್ ಸರ್ಕಾರಕ್ಕೆ ಯುಪಿ ನಿವಾಸಿ ಎಹ್ಸಾನ್ ಮಿಯಾನ್ ಮನವಿ ಮಾಡಿದ್ದಾರೆ.
 

UP resident Ehsan Mian requests Yogi Adityanath govt to raze his illegal residence built on pond and graveyard san

ಲಕ್ನೋ (ಏ. 3): ಯೋಗಿ ಆದಿತ್ಯನಾಥ್ (Yogi Adityanath) ಅವರು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಗಳ ಬಗ್ಗೆ ವಿಶೇಷ ಗಮನ ನೀಡಿದ್ದರಿಂದ ಅಕ್ರಮ ಆಸ್ತಿಗಳನ್ನು (Illegal Properties) ಬುಲ್ಡೋಜರ್ (Bulldozer) ಮೂಲಕ ಕೆಡವೋದು ಹೊಸ ಗುರುತಾಗಿ ಪರಿಣಮಿಸಿತು. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲೂ ಇದನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗಿತ್ತು.

ಬುಲ್ಡೋಜರ್ ಗಳ ಹೆದರಿಕೆಯಿಂದ ಕ್ರಿಮಿನಲ್‌ಗಳು ಪೊಲೀಸ್ ಠಾಣೆಗಳಲ್ಲಿ ಎನ್ ಕೌಂಟರ್ ಮಾಡಬೇಡಿ ಎನ್ನುವ ಫಲಕಗಳನ್ನು ಹಿಡಿದುಕೊಂಡು ಶರಣಾದಂತೆಯೇ, ಅಕ್ರಮ ಆಸ್ತಿ ಹೊಂದಿರುವವರು ಈಗ ತಮ್ಮ ಅಕ್ರಮ ಆಸ್ತಿಯನ್ನು ನೆಲಸಮ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡುತ್ತಿದ್ದಾರೆ. ರಾಂಪುರ (Rampur) ಜಿಲ್ಲೆಯ ತಹಸಿಲ್ ಶಹಾಬಾದ್‌ನ (Shahabad) ಮಿತ್ರಾಪುರ್ ಎಹ್ರೋಲಾ (Mitrapur Ehrola) ಗ್ರಾಮದಲ್ಲಿ ಅಂತಹ ಒಂದು ಪ್ರಕರಣ ವರದಿಯಾಗಿದೆ. ಸ್ಥಳೀಯ ನಾಗರಿಕರಾದ ಎಹ್ಸಾನ್ ಮಿಯಾನ್ (Ehsan Mian) ಸ್ವತಃ ಈ ಅರ್ಜಿಯನ್ನು ಸಲ್ಲಿಸಲಾಗಿದೆ. ಸರ್ಕಾರದ ಬುಲ್ಡೋಜಿಂಗ್ ಕ್ರಮಕ್ಕೆ ಹೆದರಿ ಅಕ್ರಮವಾಗಿ ನಿರ್ಮಿಸಿದ ಸ್ವಂತ ಮನೆಯನ್ನು ಕೆಡವಲು ಎಸ್‌ಡಿಎಂ ಅಶೋಕ್ ಚೌಧರಿ ಅವರಿಗೆ ಮನವಿ ಮಾಡಿದ್ದಾರೆ.

ಎಹ್ಸಾನ್ ಮಿಯಾನ್ ಅವರ ಹೇಳಿಕೆ ನಿಜವೆಂದು ಪ್ರಾಥಮಿಕ ತನಿಖೆಗಳು ಬಹಿರಂಗಪಡಿಸಿವೆ. ಆತನ ಮನೆಯನ್ನು ಭಾಗಶಃ ಒಣಗಿದ ಕೊಳದ ಮೇಲೆ ಮತ್ತು ಭಾಗಶಃ ಸ್ಮಶಾನದ ಮೇಲೆ ನಿರ್ಮಿಸಲಾಗಿದೆ. ಈ ಎರಡೂ ಆಸ್ತಿಗಳು ಕ್ರಮವಾಗಿ ಸರ್ಕಾರ ಮತ್ತು ವಕ್ಫ್ ಮಂಡಳಿಗೆ ಸೇರಿವೆ. ಪತ್ರಿಕೆಗಳ ವರದಿಯ ಪ್ರಕಾರ,  “ನಾವು ಸುಮಾರು ಎರಡು ತಲೆಮಾರುಗಳಿಂದ ಮನೆಯಲ್ಲಿಯೇ ಇದ್ದೇವೆ. ನಮ್ಮ ಪ್ಲಾಟ್ ಮ್ಯಾಪ್‌ನಲ್ಲಿ ಇತ್ತೀಚೆಗೆ ವಕ್ಫ್ ಮತ್ತು ಸರ್ಕಾರದ ಆಸ್ತಿಯಲ್ಲಿ ಅಕ್ರಮವಾಗಿ ಮನೆ ಕಟ್ಟಿರುವುದು ಕಂಡುಬಂದಿದೆ. ಹಾಗಾಗಿ ಅದನ್ನು ಕೆಡವಲು ಅರ್ಜಿ ಸಲ್ಲಿಸಲು ನಿರ್ಧರಿಸಿದ್ದೇನೆ' ಎಂದು ಎಹ್ಸಾನ್ ಮಿಯಾನ್ ಹೇಳಿದ್ದಾರೆ.

ಎಸ್‌ಡಿಎಂ ಅಶೋಕ್ ಚೌಧರಿ ಮಾತನಾಡಿ, “ರಾಂಪುರ ಜಿಲ್ಲೆಯ ತಹಸಿಲ್ ಶಹಾಬಾದ್‌ನ ಮಿತ್ರಾಪುರ ಎಹ್ರೋಲಾ ಗ್ರಾಮದಲ್ಲಿ ಹಲವಾರು ಮನೆಗಳನ್ನು ಬತ್ತಿದ ಕೊಳಗಳು ಮತ್ತು ಸ್ಮಶಾನಗಳ ಮೇಲೆ ನಿರ್ಮಿಸಲಾಗಿದೆ. ಗ್ರಾಮದ ಸರ್ವೆ ಮಾಡಿದ ನಂತರ, ಅಂತಹ ಭೂಮಿಯನ್ನು ಹಾಗೆಯೇ ಬಿಡಲು ಸಾಧ್ಯವಿಲ್ಲ ಎಂದು ಆಡಳಿತವು ಅಭಿಪ್ರಾಯಕ್ಕೆ ಬಂದಿದೆ. ನಾವು ಈಗ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಶೀಘ್ರದಲ್ಲೇ ಅವರಿಗೆ ಅಧಿಕೃತ ಸೂಚನೆಗಳನ್ನು ಕಳುಹಿಸಲಾಗುವುದು' ಎಂದಿದ್ದಾರೆ.

ಸಾಮೂಹಿಕ ವಿವಾಹದಲ್ಲಿ ನವದಂಪತಿಗೆ ಆಟಿಕೆ 'ಬುಲ್ಡೋಜರ್' ಗಿಫ್ಟ್, ಯೋಗಿಗೆ ಥ್ಯಾಂಕ್ಸ್‌ ಎಂದ ಹೆಣ್ಮಕ್ಕಳು!

ಶಹಾಬಾದ್  ತಹಶೀಲ್ದಾರ್ ದಿನೇಶ್ ಕುಮಾರ್ ಹೇಳುವ ಪ್ರಕಾರ, ಈ ಗ್ರಾಮವು ಸುಮಾರು 200 ಹೆಕ್ಟೇರ್‌ ಪ್ರದೇಶದಲ್ಲಿ ಹರಡಿಕೊಂಡಿದೆ. ಇಲ್ಲಿ 50 ವರ್ಷಕ್ಕೂ ಹೆಚ್ಚು ಕಾಲದಿಂದ ಜನರು ವಾಸಿಸುತ್ತಿದ್ದಾರೆ. ಎಸ್‌ಡಿಎಂ ನಮ್ಮೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದು, ಸರ್ಕಾರಿ ಭೂಮಿಯನ್ನು ತೆರವುಗೊಳಿಸಲು ಆಡಳಿತವು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಪ್ರಕ್ರಿಯೆಯಲ್ಲಿ ಸುಮಾರು 50 ಕುಟುಂಬಗಳು ತೊಂದರೆಗೊಳಗಾಗಬಹುದು. ಕೆಲವು ಬಡ ಕುಟುಂಬಗಳಿಗೆ ಸ್ವಂತ ಮನೆ ಮಾಡಲು ಭೂಮಿ ನೀಡಲು ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ.

Uttar Pradesh ಮನೆ ಮುಂದೆ ಪೊಲೀಸರು ಬುಲ್ಡೋಜರ್ ನಿಲ್ಸಿದ್ದೇ ತಡ, ತಲೆಮರೆಸಿಕೊಂಡಿದ್ದ ಅತ್ಯಾಚಾರ ಆರೋಪಿ ಶರಣಾಗತಿ!

ಇನ್ನೊಂದೆಡೆ, ಎಹ್ಸಾನ್ ಮಿಯಾನ್ ತಮ್ಮ ಅಕ್ರಮ ಮನೆಯನ್ನು ಕೆಡವಲು ಆಡಳಿತಕ್ಕೆ ಮನವಿ ಮಾಡುವ ಸ್ವಯಂಪ್ರೇರಿತ ಹೆಜ್ಜೆಯು ಅಂತಹ ಅಕ್ರಮ ಮನೆಗಳನ್ನು ಹೊಂದಿರುವ ಗ್ರಾಮದ ಅನೇಕರನ್ನು ಕೆರಳಿಸಿದೆ. ತಮ್ಮ ಮೇಲೆ ಆಕ್ರಮಣ ಮಾಡಬಹುದು ಎನ್ನುವ ಭಯದಿಂದ ಸರ್ಕಾರದಿಂದ ರಕ್ಷಣೆಯನ್ನೂ ಕೋರಿದ್ದಾರೆ. ಯೋಗಿ ಆದಿತ್ಯನಾಥ್ ಅವರು ಇತ್ತೀಚೆಗೆ ನಡೆದ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ ತಮ್ಮ ಭಾಷಣಗಳಲ್ಲಿ ದುಷ್ಕರ್ಮಿಗಳ ವಿರುದ್ಧದ ದೃಢವಾದ ಕ್ರಮಗಳನ್ನು ಮತ್ತು ಅಕ್ರಮವಾಗಿ ನಿರ್ಮಿಸಿದ ಆಸ್ತಿಗಳನ್ನು ಬುಲ್ಡೋಜರ್ ಬಳಸಿ ಕೆಡವಲಾಗುವುದು ಎಂದು ಪದೇ ಪದೇ ನೆನಪಿಸಿದ್ದರು.

Latest Videos
Follow Us:
Download App:
  • android
  • ios