Asianet Suvarna News Asianet Suvarna News

ಮಹಿಳೆಯರ ಮೇಲೆ ಕಣ್ಣು ಹಾಕುವ​ವರ ವಿನಾ​ಶ: ಸಿಎಂ ಯೋಗಿ ಶಪಥ!

ಮಹಿಳೆಯರ ಮೇಲೆ ಕಣ್ಣು ಹಾಕುವ​ವರ ವಿನಾ​ಶ: ಯೋಗಿ|| ದುರು​ಳ​ರಿಗೆ ನೀಡುವ ಶಿಕ್ಷೆ ಉದಾ​ಹ​ರಣೆ ಆಗ​ಲಿ​ದೆ| ಎಲ್ಲ ತಾಯಂದಿರು, ಸೋದ​ರಿ​ಯರ ರಕ್ಷ​ಣೆಗೆ ಬದ್ಧ

UP Government Committed To Safety Security Of All Women Yogi Adityanath pod
Author
Bangalore, First Published Oct 3, 2020, 12:15 PM IST
  • Facebook
  • Twitter
  • Whatsapp

ಲಖ​ನೌ(ಅ.03): ಉತ್ತರ ಪ್ರದೇ​ಶದ ಹಾಥ್ರ​ಸ್‌​ನಲ್ಲಿ ಸಂಭ​ವಿ​ಸಿದ ಅತ್ಯಾ​ಚಾರ ಪ್ರಕ​ರ​ಣದ ಬಗ್ಗೆ ದೇಶ​ವ್ಯಾಪಿ ಆಕ್ರೋಶ ವ್ಯಕ್ತ​ವಾ​ಗು​ತ್ತಿ​ರು​ವ ನಡು​ವೆಯೇ, ಮುಖ್ಯ​ಮಂತ್ರಿ ಯೋಗಿ ಆದಿ​ತ್ಯ​ನಾಥ್‌ ಅವರು ‘ಮ​ಹಿ​ಳೆ​ಯರ ಮೇಲೆ ಕಣ್ಣು ಹಾಕಿ​ದ​ವರ ವಿನಾಶ ಮಾಡ​ಲಾ​ಗು​ವು​ದು’ ಎಂದು ಗುಡು​ಗಿ​ದ್ದಾ​ರೆ.

ಈ ಬಗ್ಗೆ ಶುಕ್ರ​ವಾರ ಸಂಜೆ ಟ್ವೀಟ್‌ ಮಾಡಿ​ರುವ ಅವರು, ‘ಉ​ತ್ತರ ಪ್ರದೇ​ಶ​ದ​ದಲ್ಲಿ ತಾಯಂದಿ​ರು-ಸೋದ​ರಿ​ಯರ ಗೌರವ ಹಾಗೂ ಸ್ವಾಭಿ​ಮಾನಕ್ಕೆ ಚ್ಯುತಿ ತರುವಂಥ ಯೋಚನೆ ಮಾಡು​ವ​ವರ ಸಂಪೂರ್ಣ ವಿನಾಶ ಆಗು​ವಂತೆ ನೋಡಿ​ಕೊ​ಳ್ಳ​ಲಾ​ಗು​ವುದು. ಇವ​ರಿಗೆ ಎಂಥ ಶಿಕ್ಷೆ ಆಗ​ಲಿದೆ ಎಂದರೆ, ಭವಿ​ಷ್ಯ​ದಲ್ಲಿ ಈ ಶಿಕ್ಷೆ ಒಂದು ಉದಾ​ಹ​ರ​ಣೆ​ಯಾಗಿ ಉಳಿ​ಯ​ಲಿ​ದೆ’ ಎಂದಿ​ದ್ದಾ​ರೆ.

‘ನಿಮ್ಮ ಉತ್ತರ ಪ್ರದೇಶ ಸರ್ಕಾರ ಎಲ್ಲ ತಾಯಂದಿರು ಹಾಗೂ ಸೋದ​ರಿ​ಯರ ಸುರ​ಕ್ಷ​ತೆ ಹಾಗೂ ಅಭಿ​ವೃ​ದ್ಧಿ​ಗೆ ಸಂಕ​ಲ್ಪಬದ್ಧ​ವಾ​ಗಿದೆ. ಇದು ನಮ್ಮ ಸಂಕಲ್ಪ ಹಾಗೂ ವಚ​ನ’ ಎಂದು ಟ್ವೀಟ್‌ ಮಾಡಿ​ದ್ದಾ​ರೆ.

Follow Us:
Download App:
  • android
  • ios