ಉತ್ತರ ಪ್ರದೇಶ(ಮೇ.15); ಅಝಾನ್ ಇಸ್ಲಾಂನ ಭಾಗ. ಪ್ರಾರ್ಥನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಪ್ರಾರ್ಥನೆ ವೇಳೆ ಲೌಡ್ ಸ್ಪೀಕರ್ ಅಥವಾ ಇತರ ಮೈಕ್ ಬಳಸುವಂತಿಲ್ಲ. ಮಾನವನ ಧ್ವನಿಗೆ ಮಾತ್ರ ಅವಕಾಶ ಎಂದು ಉತ್ತರ ಪ್ರದೇಶದ ಅಲಹಬಾದ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ರೈಲು ಓಡಿಸಲು ಮುಖ್ಯಮಂತ್ರಿಗಳ ವಿರೋಧ

ಆರ್ಟಿಕಲ್ 25ರಲ್ಲಿ ಹೇಳಿರುವ ಮೂಲಭೂತ ಹಕ್ಕುಗಳ ಪ್ರಕಾರ, ಎಲ್ಲರಿಗೂ ಪ್ರಾರ್ಥನೆ ಮಾಡುವ ಹಕ್ಕಿದೆ. ಅದರಲ್ಲೂ ಇಸ್ಲಾಂ ಧರ್ಮದ ಅನುಸಾರ ಅಝಾನ್‌ಗೂ ಅವಕಾಶವಿದೆ. ಆದರೆ ಅಝಾನ್ ವೇಳೆ ಲೌಡ್‌ಸ್ಪೀಕರ್ ಬಳಸುವಂತಿಲ್ಲ ಎಂದು ಕೋರ್ಟ್ ಆದೇಶಿಸಿದೆ.  ಸ್ಥಳೀಯ ಜಿಲ್ಲಾಧಿಕಾರಿ ಪರವಾನಗೆ ಇಲ್ಲದೆ ಒಂದು ಸಮುದಾಯ ಪ್ರಾರ್ಥನೆಗಾಗಿ ಲೌಡ್ ಸ್ಪೀಕರ್ ಬಳಸುವುದು ಸರಿಯಲ್ಲ ಎಂದು ಕೋರ್ಟ್ ಹೇಳಿದೆ.

ಈ ಆದೇಶದೊಂದಿಗೆ ಕೊರೋನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಹಾಗೂ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇದಕ್ಕೆ ಯಾವುದೇ ಸಮುದಾಯಕ್ಕೆ ಸಡಿಲಿಕೆ ಇಲ್ಲ ಎಂದು ಕೋರ್ಟ್ ಹೇಳಿದೆ.  

ಭಾರತದ ಜೈಲಲ್ಲಿ ಇಲಿ ಇವೆ, ಗಡೀಪಾರು ಮಾಡಬೇಡಿ: ನೀರವ್‌ ಮೋದಿ ಮನವಿ

ಘಾಝಿಯಾಪುರ್ ಮಸೀದಿಯಲ್ಲಿ ಅಝಾನ್ ಬಳಕೆಗೆ ಸ್ಪೀಕರ್ ನಿಷೇಧ ತೆರವು ಮಾಡುವಂತೆ ಬಿಎಸ್‌ಪಿ ಎಂಪಿ ಅಫ್ಜಲ್ ಅನ್ಸಾರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಜಸ್ಟೀಸ್ ಶಶಿಕಾಂತ್ ಗುಪ್ತ ಹಾಗೂ ಅಜಿತ್ ಕುಮಾರ್ ದ್ವಿಸದಸ್ಯ ಪೀಠ, ಮಹತ್ವದ ಆದೇಶ ನೀಡಿದೆ. ಲಾಕ್‌ಡೌನ್ ವೇಳೆ ಜಿಲ್ಲಾಧಿಕಾರಿ ಅಝಾನ್‌ಗೆ ನಿರ್ಬಂಧ ಹೇರಿದ್ದರು. ಈ ಕುರಿತು ಪಿಐಎಲ್ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಘಾಝಿಯಾಪುರ್ ಕೊರೋನಾ ಹಾಟ್ ಸ್ಪಾಟ್ ಕೇಂದ್ರವಾಗಿ ಗುರುತಿಸಲಾಗಿತ್ತು.