* 2022ರ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅಯೋಧ್ಯ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ* ‘ಆದಿತ್ಯನಾಥ್‌ ನನ್ನ ಕ್ಷೇತ್ರದಿಂದ ಸ್ಪರ್ಧಿಸುವುದಾದರೆ ಸ್ಥಾನ ಬಿಟ್ಟುಕೊಡುವೆ. ಸ್ಪರ್ಧಿ ಯಾರು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ ಎಂದ ಶಾಸಕ* ಆದಿತ್ಯನಾಥ್‌ ಇಲ್ಲಿಂದ ಸ್ಪರ್ಧಿಸುವುದು ಜನರ ಅದೃಷ್ಟ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ

ಅಯೋಧ್ಯೆ(ಜು.26): 2022ರ ಉತ್ತರ ಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅಯೋಧ್ಯ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಇದನ್ನು ಪುಷ್ಟೀಕರಿಸುವಂತೆ ಅಯೋಧ್ಯೆ ವಿಧಾನಸಭಾ ಕ್ಷೇತ್ರದ ಶಾಸಕ ವೇದ ಪ್ರಕಾಶ್‌ ಗುಪ್ತಾ, ‘ಆದಿತ್ಯನಾಥ್‌ ನನ್ನ ಕ್ಷೇತ್ರದಿಂದ ಸ್ಪರ್ಧಿಸುವುದಾದರೆ ಸ್ಥಾನ ಬಿಟ್ಟುಕೊಡುವೆ. ಸ್ಪರ್ಧಿ ಯಾರು ಎಂಬುದನ್ನು ಹೈಕಮಾಂಡ್‌ ನಿರ್ಧರಿಸುತ್ತದೆ. ಆದರೆ ಆದಿತ್ಯನಾಥ್‌ ಇಲ್ಲಿಂದ ಸ್ಪರ್ಧಿಸುವುದು ಜನರ ಅದೃಷ್ಟ, ಅವರ ಪರವಾಗಿ ನಾನು ಪ್ರಚಾರ ಮಾಡುತ್ತೇನೆ’ ಎಂದಿದ್ದಾರೆ.

ಕಾಂಗ್ರೆಸ್‌ ಪಕ್ಷದ ಪ್ರತಿಕ್ರಿಯೆ:

ಯೋಗಿ ಅಯೋಧ್ಯ ಕ್ಷೇತ್ರದಿಂದ ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ವಕ್ತಾರ ಸುರೇಂದ್ರ ರಜಪೂತ್‌, ಕಳೆದ 4 ವರ್ಷದಲ್ಲಿ ಕ್ಷೇತ್ರಕ್ಕೆ ಅವರು ಏನು ಕೊಡುಗೆ ಕೊಟ್ಟಿದ್ದಾರೆ. ಎಷ್ಟುಜನರಿಗೆ ಅವರ ಆಡಳಿತದಲ್ಲಿ ಉದ್ಯೋಗ ಸಿಕ್ಕಿದೆ. ಮಹಿಳೆಯರ ಮೇಲೆ ನಡೆದ ದೌರ್ಜನ್ಯಗಳ ಪೈಕಿ ಎಷ್ಟುಆರೋಪಿಗಳಿಗೆ ಶಿಕ್ಷೆಯಾಗಿದೆ. ಗುಪ್ತಾ ಅವರು ಸುಮ್ಮನೆ ಯೋಗಿಯನ್ನು ಹೊಗಳುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.