ಕೊರೋನಾ ಲಾಕ್ ಡೌನ್ ಕೊನೆ ಹಂತದ ಸಡಿಲಿಕೆ/ ಕೇಂದ್ರ ಸರ್ಕಾರದಿಂದ ಅಧಿಕೃತ ಮಾಹಿತಿ/ ಯಾವುದಕ್ಕೆಲ್ಲ ವಿನಾಯಿತಿ?/ ಶಾಲಾ ಕಾಲೇಜು ಆರಂಭ ಇದೆಯೇ?

ನವದೆಹಲಿ, (ಸೆ.30): ಕೇಂದ್ರ ಗೃಹ ಸಚಿವಾಲಯ ಇಂದು (ಬುಧವಾರ) ಅನ್ ಲಾಕ್ 5.0 ಮಾರ್ಗಸೂಚಿಯನ್ನು ಬಿಡುಗಡೆಗೊಳಿಸಿದೆ. 

ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದರೂ ಆರ್ಥಿಕತೆ ದೃಷ್ಟಿಯಿಂದ ಕೇಂದ್ರ ಸರ್ಕಾರ ಹಂತ-ಹಂತವಾಗಿ ಚಟುವಟಿಕೆಗಳ ಪ್ರಾರಂಭಕ್ಕೆ ಅನುಮತಿ ನೀಡುತ್ತಿದೆ. 

ಅನ್ ಲಾಕ್ 5.0 ಮಾರ್ಗಸೂಚಿಯಂತೆ ಅಕ್ಟೋಬರ್ 15ರಿಂದ ಸಿನಿಮಾ ಥಿಯೇಟರ್, ಮಲ್ಟಿಫ್ಲೆಕ್ಸ್ ಥಿಯೇಟರ್, ಚಿತ್ರ ಮಂದಿರಗಳನ್ನು ಶೇ.50ರಷ್ಟು ಆಸನ ವ್ಯವಸ್ಥೆಯೊಂದಿಗೆ ಆರಂಭಿಸಲು ಅನುಮತಿಸಿದೆ. ಅಲ್ಲದೇ ಸ್ವಿಮ್ಮಿಂಗ್ ಪೂಲ್ ಗಳನ್ನು ಸಹ ತೆರೆಯಲು ಅನುಮತಿಸಿದೆ. ಆದ್ರೇ ಕೊರೋನಾ ನಿಯಂತ್ರಣ ಮಾರ್ಗಸೂಚಿ ಕ್ರಮಗಳನ್ನು ಪಾಲಿಸುವುದು ಕಡ್ಡಾಯಗೊಳಿಸಿದೆ.

ಮಾರ್ಗಸೂಚಿ ಮುರಿದರೆ ಬೀಳುತ್ತೆ ಭಾರೀ ದಂಡ

ಇಲ್ಲಿದೆ ಅನ್​ಲಾಕ್​-5ರ ಮಾರ್ಗಸೂಚಿ:

* ಸಿನಿಮಾ ಹಾಲ್​ಗಳು, ಥಿಯೇಟರ್​ಗಳು, ಮಲ್ಟಿಪ್ಲೆಕ್ಸ್​ಗಳನ್ನು ಪ್ರಾರಂಭಿಸಬಹುದು. ಆದರೆ ಶೇ.50ರಷ್ಟು ಮಾತ್ರ ಆಸನ ವ್ಯವಸ್ಥೆ ಇರುವುದು ಕಡ್ಡಾಯ. ಈ ಸಂಬಂಧ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಶೀಘ್ರವೇ ಎಸ್​ಒಪಿ ಬಿಡುಗಡೆಯಾಗಲಿದೆ.

* ಬ್ಯುಸಿನೆಸ್​ ಟು ಬ್ಯುಸಿನೆಸ್​(ಬಿ2ಬಿ-ಎರಡು ವ್ಯವಹಾರಗಳ ಮಧ್ಯೆ ನಡೆಯುವ ಉತ್ಪನ್ನಗಳ ವಹಿವಾಟು) ಎಕ್ಸಿಬಿಷನ್​ಗಳನ್ನು ಪ್ರಾರಂಭಿಸಬಹುದು. ಇದಕ್ಕೆ ಸಂಬಂಧಪಟ್ಟ ಎಸ್​ಒಪಿಯನ್ನು ವಾಣಿಜ್ಯ ಇಲಾಖೆ ಶೀಘ್ರವೇ ಬಿಡುಗಡೆ ಮಾಡುತ್ತದೆ.

* ಕ್ರೀಡಾಪಟುಗಳ ತರಬೇತಿಗಾಗಿ ಸ್ವಿಮ್ಮಿಂಗ್​ ಪೂಲ್​​ಗಳನ್ನು ಬಳಕೆ ಮಾಡಬಹುದಾಗಿದೆ. ಇದರ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್​ಒಪಿ)ಯನ್ನು ಕ್ರೀಡಾ ಸಚಿವಾಲಯ ನೀಡಲಿದೆ.

* ಮನರಂಜನಾ ಉದ್ಯಾನಗಳು​ ಮತ್ತು ಅದನ್ನು ಹೋಲುವ ಎಲ್ಲ ಸ್ಥಳಗಳನ್ನೂ ತೆರೆಯಲು ಅನುಮತಿ ನೀಡಲಾಗಿದೆ. ಎಸ್​ಒಪಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಶೀಘ್ರದಲ್ಲೇ ಬಿಡುಗಡೆ ಮಾಡಲಿದೆ.

* ಶಾಲೆಗಳು, ಕಾಲೇಜು, ಶೈಕ್ಷಣಿಕ, ಕೋಚಿಂಗ್​ ಸಂಸ್ಥೆಗಳನ್ನು ಪ್ರಾರಂಭಿಸುವ ಬಗ್ಗೆಯೂ ಅನ್​ಲಾಕ್​-5ರಲ್ಲಿ ಉಲ್ಲೇಖಿಸಲಾಗಿದೆ. (ಶಾಲಾ-ಕಾಲೇಜುಗಳ ಪ್ರಾರಂಭಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಅದರ ನಿರ್ಣಯ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿದೆ).