ನವದೆಹಲಿ(ಜ.05): ಪೌರತ್ವ ತಿದ್ದುಪಡಿ ಕಾಯ್ದೆ ಯಾರ ಹಕ್ಕನ್ನೂ ಕಸಿಯುವುದಿಲ್ಲ. ಅಲ್ಪಸಂಖ್ಯಾತರಿಗೆ ಕಾಯ್ದೆಯಿಂದ ಅನುಕೂಲವಾಗಲಿದೆ ಎಂದು ಕೇಂದ್ರ ಸಚಿವ ಹಾಗೂ ನಿವೃತ್ತ ಸೇನಾ ಜನರಲ್ ವಿಕೆ.ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೋಟ್ ಬ್ಯಾಂಕ್‌ ರಾಜಕಾರಣ ಮಾಡುವ ಕೆಲವು ಪಕ್ಷಗಳು ಕಾಯ್ದೆ ಕುರಿತು ಜನರಿಗೆ ತಪ್ಪು ಮಾಹಿತಿ ನೀಡುತ್ತಿವೆ ಎಂದು ಹರಿಹಾಯ್ದರು.

ಚಿಕಾಗೋದಲ್ಲಿ ಮೊಳಗಿದ ಸಿಎಎ ಪರ ಧ್ವನಿ: ಅನಿವಾಸಿ ಭಾರತೀಯರಿಂದ ಮೆರವಣಿಗೆ!

ಕಾಯ್ದೆಯು ಯಾರ ಹಕ್ಕನ್ನೂ ಕಸಿದುಕೊಳ್ಳುವುದಿಲ್ಲ. ಅಲ್ಪಸಂಖ್ಯಾತರಿಗೆ ಸಹಾಯ ಮಾಡುವ ಸಲುವಾಗಿಯೇ ಇದನ್ನು ಜಾರಿಗೆ ತರಲಾಗಿದೆ. ಜನರು ಸಹಬಾಳ್ವೆಯ ಜೀವನ ನಡೆಸುವ ಉದ್ದೇಶವನ್ನು ಕಾಯ್ದೆ ಹೊಂದಿದೆ ಎಂದು ವಿಕೆ ಸಿಂಗ್ ಹೇಳಿದ್ದಾರೆ. 

ಜನರಿಗೆ ಸಹಾಯ ಮಾಡಲು ಬಿಜೆಪಿ ಕಾಯ್ದೆ ಜಾರಿಗೆ ತಂದಿದ್ದು, ವಿರೋಧ ಪಕ್ಷಗಳು ಸುಖಾಸುಮ್ಮನೆ ಗೊಂದಲ ಸೃಷ್ಟಿಸುತ್ತಿದೆ ಎಂದು ವಿಕೆ ಸಿಂಗ್ ಹರಿಹಾಯ್ದರು.

ವಿಭಜನೆಯ ಗಾಯಕ್ಕೆ ಸಿಎಎ ಮುಲಾಮು: ಓವರ್ ಟು ರಾಜೀವ್ ಚಂದ್ರಶೇಖರ್!

ಇದೇ ವೇಳೆ ಪಾಕ್‌ನ ಗುರುದ್ವಾರ ದಾಳಿ ಕುರಿತಂತೆ ಪ್ರತಿಕ್ರಿಯಿಸಿದ ವಿಕೆ ಸಿಂಗ್, ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಸುರಕ್ಷಿತಾವಗಿಲ್ಲ ಎಂಬುದನ್ನು ಈ ಘಟನೆ ಸಾಬೀತುಪಡಿಸುತ್ತದೆ ಎಂದು ಹೇಳಿದರು.