ನವದೆಹಲಿ(ಡಿ.18): ಬಿಜೆಪಿ ಫೈಯರ್‌ಬ್ರಾಂಡ್ ಲೀಡರ್ ಎಂದೇ ಗುರುತಿಸಿಕೊಂಡಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಮತ್ತೊಮ್ಮೆ ಜನಸಂಖ್ಯಾ ನಿಯಂತ್ರ ಕುರಿತು ಮಾತನಾಡಿದ್ದಾರೆ. ದೇಶದಲ್ಲಿ ಸಾಮಾಜಿಕ ಸಾಮರಸ್ಯ ನೆಲೆಸುವಂತೆ ಮಾಡುವುದು ಅತೀ ಮುಖ್ಯ. ಹೀಗಾಗಿ ಜನಸಂಖ್ಯಾ ನಿಯಂತ್ರಣ ಕೂಡ ಅಷ್ಟೇ ಮುಖ್ಯವಾಗಿದೆ. ಆದರೆ ಜನಸಂಖ್ಯಾ ನಿಯಂತ್ರಣವನ್ನು ಧರ್ಮದ ಆಧಾರದಲ್ಲಿ ಅಥವಾ ವೋಟ್ ಬ್ಯಾಂಕ್ ಆಧಾರದಲ್ಲಿ ನೋಡಬಾರದು ಎಂದು ಗಿರಿರಾಜ್ ಸಿಂಗ್ ಹೇಳಿದ್ದಾರೆ.

ನೂತ ಕೃಷಿ ಮಸೂದೆ ಒಂದೇ ರಾತ್ರಿಯಲ್ಲಿ ಜಾರಿಗೆ ಬಂದಿಲ್ಲ; ರೈತರ ಹಾದಿ ತಪ್ಪಿಸಬೇಡಿ; ಮೋದಿ

ದೇಶದ ಅಭಿವೃದ್ಧಿ ಹಾಗೂ ಸಾಮಾಜಿಕ ಸಾಮರಸ್ಯಕ್ಕೆ ಜನಸಂಖ್ಯಾ ನಿಯಂತ್ರಣದಲ್ಲಿ ಕಠಿಣ ಕಾನೂನು ಅಗತ್ಯವಿದೆ ಎಂದಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಳಿ ಲವ್ ಜಿಹಾದ್ ಹಾಗೂ ಜನಸಂಖ್ಯಾ ನಿಯಂತ್ರಣ ಕಾನೂನು ತರಲು ಆಗ್ರಹಿಸಿದ ಒಂದೇ ವಾರದಲ್ಲಿ ಗಿರಿರಾಜ್ ಸಿಂಗ್ ಇದೀಗ ಭಾರತದಲ್ಲಿ ಜನಸಂಖ್ಯಾ ನಿಯಂತ್ರಣದ ಕಠಿಣ ಕಾನೂನು ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.

ಡಿಸೆಂಬರ್ ಆರಂಭದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ನಡೆದ ಜನಸಂಖ್ಯಾ ನಿಯಂತ್ರಣ ಕುರಿತು ವಿಚಾರಣೆಯಲ್ಲಿ ಕೇಂದ್ರ ತನ್ನ ನಿಲುವುಗಳನ್ನು ಸ್ಪಷ್ಟಪಡಿಸಿತ್ತು. ಕೇಂದ್ರ ಸರ್ಕಾರ ಬಲವಂತವಾಗಿ ಜನಸಂಖ್ಯಾ ನಿಯಂತ್ರಣ ಮಾಡುವ ಪ್ರಯತ್ನ ಮಾಡುವುದಿಲ್ಲ ಎಂದಿತ್ತು. ಕಾರಣ ಚೀನಾ ಮಾಡೆಲ್ ನಮ್ಮ ದೇಶದಲ್ಲಿ ಅನುಸರಿಸಲು ಸಾಧ್ಯವಿಲ್ಲ. ಇಷ್ಟೇ ಈ ರೀತಿಯ ಮಾಡೆಲ್‌ಗಳಿಂದ ಹೆಣ್ಣು-ಗಂಡಿನ ಅನುಪಾತದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚು ಎಂದು ಕೇಂದ್ರ ಹೇಳಿತ್ತು.