Asianet Suvarna News Asianet Suvarna News

ಗೆಲುವಿನತ್ತ ಅಮಿತ್ ಶಾ; ಗಾಂಧಿನಗರದಲ್ಲಿ ಬಿಜೆಪಿ ಸಂಭ್ರಮಾಚರಣೆ

ಕೇಂದ್ರ ಗೃಹಸಚಿವ ಅಮಿತ್ ಶಾ (Union Minister Amit Shah) ಗಾಂಧಿನಗರ ಲೋಕಸಭಾ (Gandhi Nagara Loksabha Seat) ಕ್ಷೇತ್ರದಲ್ಲಿ ಗೆಲುವಿನ ಹೆಜ್ಜೆ ಇರಿಸಿದ್ದಾರೆ.

Union Minister Amit Shah leading in Gandhinagar by morethan 2 lakh votes mrq
Author
First Published Jun 4, 2024, 11:56 AM IST

ಗಾಂಧಿನಗರ: ಕೇಂದ್ರ ಗೃಹಸಚಿವ ಅಮಿತ್ ಶಾ (Union Minister Amit Shah) ಗಾಂಧಿನಗರ ಲೋಕಸಭಾ (Gandhi Nagara Loksabha Seat) ಕ್ಷೇತ್ರದಲ್ಲಿ ಗೆಲುವಿನ ಹೆಜ್ಜೆ ಇರಿಸಿದ್ದಾರೆ. ಮಧ್ಯಾಹ್ನ 12 ಗಂಟೆಯ ಟ್ರೆಂಡ್ ಪ್ರಕಾರ, ಅಮಿತ್ ಶಾ 2 ಲಕ್ಷಕ್ಕೂ ಮತಗಳ ಮುನ್ನಡೆಯಲ್ಲಿದ್ದಾರೆ. ಇಂದು ಗುಜರಾತಿನ 26ರ ಪೈಕಿ 25 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ನಡೆಯುತ್ತಿದೆ. ಸೂರತ್ ಕ್ಷೇತ್ರದಲ್ಲಿ (Surat Loksabha Seat) ಕಾಂಗ್ರೆಸ್ ಅಭ್ಯರ್ಥಿ ನಿಲೇಶ್ ಕುಂಭಾನಿ (Congress candidate Nilesh Kumbhani) ನಾಮಪತ್ರ ತಿರಸ್ಕೃತವಾದ ಹಿನ್ನೆಲೆ ಬಿಜೆಪಿಯ ಮುಖೇಶ್ ದಲಾಲ್ (Mukesh Dalal) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗಾಂಧಿನಗರ ಲೋಕಸಭಾ ಕ್ಷೇತ್ರದ ಮೊದಲ ಸುತ್ತಿನಿಂದಲೂ ಅಮಿತ್ ಶಾ ಮುನ್ನಡೆ ಕಾಯ್ದುಕೊಂಡು ಬಂದಿದ್ರು. 

ಇತ್ತ ಪೋರಬಂದರ್ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಸಹ ಭಾರೀ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಂಗ್ರೆಸ್ 2-3 ಕ್ಷೇತ್ರಗಳನ್ನು ಮುನ್ನಡೆಯನ್ನು ಹೊಂದಿದೆ.

ಕಲಬುರಗಿ: ಫಲಿತಾಂಶಕ್ಕೆ ಮುನ್ನವೇ ಲಾಡು ತಯಾರಿಸಿದ ಕಾಂಗ್ರೆಸ್ ಕಾರ್ಯಕಕರ್ತರು!

ಏಪ್ರಿಲ್‌ 19 ರಿಂದ ಆರಂಭವಾಗಿದ್ದ 18ನೇ ಲೋಕಸಭೆ ಚುನಾವಣೆ ಏಳು ಹಂತಗಳಲ್ಲಿ ನಡೆದು ಜೂನ್‌ 1 ರಂದು ಮುಕ್ತಾಯವಾಗಿತ್ತು. ಇಂದು ಲೋಕಕದನದ ಮಹಾತೀರ್ಪು ಇಂದು ಹೊರಬೀಳಲಿದೆ.  ಜಿದ್ದಾಜಿದ್ದಿಯ ಚುನಾವಣೆಯ ಫಲಿತಾಂಶ ದೇಶದ ಕುತೂಹಲ ಕೆರಳಿಸಿದೆ. ಬಿಜೆಪಿಯ ಚಾರ್‌ ಸೌ ಪಾರ್‌ ಎನ್ನುವ ಟಾರ್ಗೆಟ್‌ ನಿಜವಾಗಲಿದೆಯೇ? ಅಥವಾ ಇಂಡಿಯಾ ಮೈತ್ರಿಯ ಅಧಿಕಾರದ ಆಸೆ ಈಡರೇಲಿದೆಯೇ ಅನ್ನೋದು  ತಿಳಿಯಲಿದೆ. 

ಮಧ್ಯಪ್ರದೇಶದಲ್ಲಿ ಕ್ವೀನ್‌ ಸ್ವೀಪ್‌ನತ್ತ ಬಿಜೆಪಿ? ಎಲ್ಲಾ 29 ಕ್ಷೇತ್ರಗಳಲ್ಲಿ ಕಮಲ ಕಲಿಗಳ ಮುನ್ನಡೆ 

ದೇಶದ 543 ಲೋಕಸಭಾ ಕ್ಷೇತ್ರಕ್ಕೆ ಶೇ. 66.33 ರಷ್ಟು ಮತದಾನವಾಗಿದೆ. ಬಿಜೆಪಿ ಒಟ್ಟು 441 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೆ, ಕಾಂಗ್ರೆಸ್‌ 328 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದೆ. ಚುನಾವಣಾ ಆರಂಭಕ್ಕೂ ಮುನ್ನವೇ ಸೂರತ್‌ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ವಯನಾಡ್‌, ರಾಯ್‌ಬರೇಲಿ ಕ್ಷೇತ್ರದಲ್ಲಿ ರಾಹುಲ್‌ ಗಾಂಧಿ, ಗುಜರಾತ್‌ನ ಗಾಂಧಿನಗರದಲ್ಲಿ ಅಮಿತ್‌ ಶಾ, ತಮಿಳುನಾಡಿನ ಕೊಯಮತ್ತೂರಿನಲ್ಲಿ ಅಣ್ಣಾಮಲೈ ಅವರ ರಿಸಲ್ಟ್‌ ಬಗ್ಗೆ ಹೆಚ್ಚಿನ ನಿರೀಕ್ಷ ಗರಿಗೆದರಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಪ್ರಾಬಲ್ಯ ಹೇಗಿರಲಿದೆ, ಉತ್ತರ ಭಾರತದ ಮತದಾರರನ್ನು ಸೆಳೆಯಲು ಇಂಡಿಯಾ ಮೈತ್ರಿ ಯಶಸ್ವಿಯಾಗಿದ್ಯಾ ಅನ್ನೋದು ಇಂದು ತೀರ್ಮಾನವಾಗಲಿದೆ.
 

Latest Videos
Follow Us:
Download App:
  • android
  • ios