Asianet Suvarna News Asianet Suvarna News

ಮಣಿಪುರ ಹಿಂಸಾಚಾರ ಬಗ್ಗೆ ನ್ಯಾಯಾಂಗ, ಸಿಬಿಐ ತನಿಖೆ: ರಾಜೀವ್‌ಸಿಂಗ್‌ ನೂತನ ಡಿಜಿಪಿ

ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಮಾಡಲಾಗುವುದು  ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ  ಹೇಳಿದ್ದಾರೆ.

Union Home Minister Amit Shah told Judicial CBI probe into Manipur violence, Peace Committee formed headed by Governor akb
Author
First Published Jun 2, 2023, 8:30 AM IST

ಇಂಫಾಲ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಮಾಡಲಾಗುವುದು. ಕ್ರಿಮಿನಲ್‌ ಹಾಗೂ ಸಾಮಾನ್ಯ ಸಂಚಿನ ಕುರಿತು ತನಿಖೆ ನಡೆಸಲು ಸಿಬಿಐ ತನಿಖೆ ಕೂಡ ಆರಂಭಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ (Union Home Minister Amit Shah) ಅವರು ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯಪಾಲರಾದ ಅನುಸೂಯ ಉಯಿಕೆ ಅವರ ನೇತೃತ್ವದಲ್ಲಿ ಶಾಂತಿ ಸಮಿತಿಯೊಂದನ್ನು ರಚನೆ ಮಾಡಲಾಗುತ್ತದೆ. ಈ ಸಮಿತಿಯಲ್ಲಿ ಕುಕಿ ಹಾಗೂ ಮೈತೇಯಿ ಸಮುದಾಯದ ಪ್ರತಿನಿಧಿಗಳು, ಸಾಮಾಜಿಕ ಸಂಘಟನೆಗಳು ಮತ್ತು ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಇರುತ್ತಾರೆ. ಮಾತುಕತೆಯೊಂದೇ ಮಣಿಪುರದಲ್ಲಿನ ಬಿಕ್ಕಟ್ಟಿಗೆ ಏಕೈಕ ಪರಿಹಾರ ಎಂದು ವಿವರಿಸಿದರು.

ಹಿಂಸೆ ಎಂಬುದು ತಾತ್ಕಾಲಿಕ ಘಟ್ಟ(temporary phenomenon) ಅಪನಂಬಿಕೆ ದೂರವಾಗುತ್ತದೆ. ಪರಿಸ್ಥಿತಿ ಸಾಮಾನ್ಯವಾಗಲಿದೆ. ಭಾರತ- ಮ್ಯಾನ್ಮಾರ್‌ ಗಡಿ ವಿಷಯಕ್ಕೆ (India-Myanmar border issue) ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎನಿಸಿದೆ. ಎರಡೂ ದೇಶಗಳ ನಡುವಣ ಗಡಿಗೆ ಬೇಲಿ ಹಾಕುವ ಕಾರ್ಯ ಮುಗಿಸಬೇಕಾಗಿದೆ ಎಂದು ತಿಳಿಸಿದರು. ಮೇ ಆರಂಭದಲ್ಲಿ ಕುಕಿ ಹಾಗೂ ಮೈತೇಯಿ ಸಮುದಾಯಗಳ ನಡುವೆ ಘರ್ಷಣೆ ನಡೆದು 70ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಮಣಿಪುರ ಈಗಲೂ ಬೂದಿ ಮುಚ್ಚಿದ ಕೆಂಡದಂತೆ ಇದೆ.

ಮಣಿಪುರದಲ್ಲಿ ಅಮಿತ್‌ ಶಾ ಶಾಂತಿ ಮಂತ್ರ: ಮೀಟಿ, ಕುಕಿ ಸಮುದಾಯದ ನಾಯಕರ ಜತೆ ಶಾಂತಿ ಸಭೆ

ಕುಕಿ ಉಗ್ರರ ದಾಳಿಗೆ 3 ಪೊಲೀಸರಿಗೆ ಗಾಯ

ಮಣಿಪುರದಲ್ಲಿ (Manipur) ಕುಕಿ ಸಮುದಾಯದ ಉಗ್ರಗಾಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಪೊಲೀಸರು ಗಾಯಗೊಂಡಿದ್ದಾರೆ. ಬಿಷ್ಣುಪು (Bishnupu) ಜಿಲ್ಲೆಯ ತಂಗ್‌ಜಂಗ್‌ ಪ್ರದೇಶದಲ್ಲಿ ಕುಕಿ ಉಗ್ರರಿಂದ ಶಸ್ತ್ರಾಸ್ತ್ರ ವಶಕ್ಕೆ ನಡೆದ ಕಾರ್ಯಾಚರಣೆ ವೇಳೆ ಉಗ್ರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

ರಾಜೀವ್‌ಸಿಂಗ್‌ ಮಣಿಪುರದ ನೂತನ ಡಿಜಿಪಿ

ಸಂಘರ್ಷ ಸಿಕ್ತ ಮಣಿಪುರದ ನೂತನ ಪೊಲೀಸ್‌ ಮಹಾ ನಿರ್ದೇಶಕರಾಗಿ (Manipur DGP) ಹಿರಿಯ ಐಪಿಎಸ್‌ ಅಧಿಕಾರಿ ರಾಜೀವ್‌ ಸಿಂಗ್‌ (Rajeev Singh) ನೇಮಕಗೊಂಡಿದ್ದಾರೆ. ಇವರು ಮೂರು ವರ್ಷದ ಅವಧಿಗೆ ವಿಶೇಷ ಕಾರ್ಯಕ್ಕೆ ನೇಮಕವಾಗಿದ್ದಾರೆ. ಇವರು 1993ನೇ ಸಾಲಿನ ಐಪಿಎಸ್‌ ಅಧಿಕಾರಿಯಾಗಿದ್ದು, ಈ ಮೊದಲು ಸಿಆರ್‌ಪಿಎಫ್‌ನಲ್ಲಿ ಇನ್ಸ್‌ಪೆಕ್ಟರ್‌ ಜನರಲ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದಕ್ಕೂ ಮೊದಲು ಮಣಿಪುರ ಡಿಜಿಪಿಯಾಗಿ ಹಿರಿಯ ಅಧಿಕಾರಿ ಸಿ.ಡೋಂಗೆಲ್‌ ಅವರು ಕಾರ್ಯನಿರ್ವಹಿಸಿದ್ದರು.

4 ದಿನ ಮಣಿಪುರ ಪ್ರವಾಸದಲ್ಲಿ ಅಮಿತ್‌ ಶಾ: ಶಾಂತವಾಯ್ತು ಜನಾಂಗೀಯ ಸಂಘರ್ಷ

ಮ್ಯಾನ್ಮಾರ್‌ ಗಡಿಗೆ ತೆರಳಿ ಕುಕಿ ಸಮುದಾಯ ಭೇಟಿ ಮಾಡಿದ ಶಾ

ಜನಾಂಗೀಯ ದ್ವೇಷದಿಂದ ಹೊತ್ತಿ ಉರಿಯುತ್ತಿರುವ ಮಣಿಪುರ ಪ್ರವಾಸದಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಭಾರತ ಮತ್ತು ಮ್ಯಾನ್ಮಾರ್‌ ಗಡಿಯಲ್ಲಿರುವ ಮೋರೆ ಪಟ್ಟಣಕ್ಕೆ ಭೇಟಿ ನೀಡಿ ಅಲ್ಲಿನ ಕುಕ್ಕಿ ಮತ್ತು ಇತರ ಸಮುದಾಯದ ಮುಖ್ಯಸ್ಥರೊಂದಿಗೆ ಸಭೆ ನಡೆಸಿದರು. ಬಳಿಕ ಸ್ಥಳೀಯ ಭದ್ರತೆಯನ್ನು ಪರಿಶೀಲಿಸಿದರು. ಇದಾದ ಬಳಿಕ ಕಾಂಗ್‌ಪೊಕ್ಪಿ ಜಿಲ್ಲೆಗೆ ತೆರಳಿದ ಶಾ ಅಲ್ಲಿಯೂ ವಿವಿಧ ಸಮುದಾಯಗಳ ಮುಖ್ಯಸ್ಥರನ್ನು ಭೇಟಿ ಮಾಡಿದರು.

ಮಣಿಪುರ ಸಹಜ ಸ್ಥಿತಿಗೆ ಮರಳುವತ್ತ ಅನೇಕ ಪ್ರಯತ್ನಗಳನ್ನು ಮಾಡುತ್ತಿರುವ ಸರ್ಕಾರದ ಭಾಗವಾಗಿ ಅಮಿತ್‌ ಶಾ (Amit Shah) (ಸೋಮವಾರ ಮೇ.29) ಮಣಿಪುರಕ್ಕೆ ಆಗಮಿಸಿದ್ದರು. ಘರ್ಷಣೆಯಲ್ಲಿ ತೊಡಗಿದ್ದ ಕುಕಿ ಮತ್ತು ಮೈತೇಯಿ ಸಮುದಾಯಗಳ ನಾಯಕರ ಜತೆ ಮಾತುಕತೆ ನಡೆಸಿದ್ದರು. ಮೈತೇಯಿ ಸಮುದಾಯವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುವ ನಿರ್ಧಾರವನ್ನು ವಿರೋಧಿಸಿ ಕುಕಿ ಸಮುದಾಯ ಮಣಿಪುರದಾದ್ಯಂತ ಉಗ್ರ ಪ್ರತಿಭಟನೆ ನಡೆಸಿತ್ತು. ರಾಜ್ಯದಲ್ಲಿ ಬೃಹತ್‌ ಸೇನೆ ನಿಯೋಜಿಸಲಾಗಿದ್ದು ಸದ್ಯ ಮಣಿಪುರ ಶಾಂತವಾಗಿದೆ.
 

Follow Us:
Download App:
  • android
  • ios