ವಿವಿಧ ರಾಜ್ಯಗಳ ನಾಗರಿಕರು ಪರಸ್ಪರ ಸಂವಹನ ನಡೆಸುವ ವೇಳೆ, ಅವರು ಭಾರತದ ಭಾಷೆಯಲ್ಲಿಯೇ ಮಾತನಾಡಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ. 

ನವದೆಹಲಿ (ಏ.8): ಭಾರತದಲ್ಲಿ (India) ಭಿನ್ನ ರಾಜ್ಯಗಳ ನಾಗರೀಕರು ಪರಸ್ಪರ ಸಂವಹನ ನಡೆಸುವ ವೇಳೆ ಅವರು ಹಿಂದಿಯಲ್ಲೇ (Hindi) ಮಾತನಾಡಬೇಕು. ಇಂಗ್ಲೀಷ್ (English) ಭಾಷೆಯ ಬಳಕೆ ಇಲ್ಲಿ ಬೇಡ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ (Union Home Minister Amit Shah) ಹೇಳಿದ್ದಾರೆ.

ಸಂಸದೀಯ ಅಧಿಕೃತ ಭಾಷಾ ಸಮಿತಿಯ ( Parliamentary Official Language Committee) 37 ನೇ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾ, ವಿವಿಧ ರಾಜ್ಯಗಳ ನಾಗರಿಕರು ಪರಸ್ಪರ ಸಂವಹನ ನಡೆಸಿದಾಗ ಅವರು ಬಳಸುವ ಭಾಷೆ ಭಾರತೀಯರದ್ದಾಗಿರಬೇಕು ಎಂದು ಹೇಳಿದ್ದಾರೆ. ಹಿಂದಿಯನ್ನು ಇಂಗ್ಲಿಷ್‌ಗೆ ಪರ್ಯಾಯವಾಗಿ ಸ್ವೀಕರಿಸಬೇಕೇ ಹೊರತು ಸ್ಥಳೀಯ ಭಾಷೆಗಳಿಗೆ ಅಲ್ಲ ಎಂದು ಹೇಳಿದ ಕೇಂದ್ರ ಸಚಿವರು, ನಾವು ಇತರ ಸ್ಥಳೀಯ ಭಾಷೆಗಳ ಪದಗಳನ್ನು ಸ್ವೀಕರಿಸಿ ಹಿಂದಿಯನ್ನು ಸುಲಭ ಮಾಡುತ್ತೇವೆಯೇ ಹೊರತು ಅದನ್ನು ಪ್ರಚಾರ ಮಾಡುವುದಿಲ್ಲ' ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ. ಈಗ ಅಧಿಕೃತ ಭಾಷೆಯನ್ನು ದೇಶದ ಏಕತೆಯ ಪ್ರಮುಖ ಭಾಗವಾಗಿಸುವ ಸಮಯ ಬಂದಿದೆ ಎಂದು ಹೇಳಿದರು. 

ಸರ್ಕಾರ ನಡೆಸುವ ಮಾಧ್ಯಮವೇ ಅಧಿಕೃತ ಭಾಷೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ನಿರ್ಧರಿಸಿದ್ದಾರೆ ಮತ್ತು ಇದು ಹಿಂದಿಯ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ ಎಂದು ಅಮಿತ್ ಷಾ ಹೇಳಿರುವ ಮಾತು ಸಭೆಯಲ್ಲಿ ಗಮನಸೆಳೆದಿದೆ. ಅಧಿಕೃತ ಭಾಷಾ ಸಮಿತಿಯ ಅಧ್ಯಕ್ಷರಾಗಿರುವ ಕೇಂದ್ರ ಸಚಿವರು, ಸಚಿವ ಸಂಪುಟದ ಶೇ 70 ರಷ್ಟು ಕಾರ್ಯಸೂಚಿಯನ್ನು ಹಿಂದಿ ಭಾಷೆಯಲ್ಲಿ ಸಿದ್ಧಪಡಿಸಲಾಗಿದೆ ಎಂದು ಸದಸ್ಯರಿಗೆ ತಿಳಿಸಿದರು.

ಹೇಳಿಕೆಗೆ ಪ್ರತಿಕ್ರಿಯಿಸಿದ ಜೆಡಿಎಸ್ ನಾಯಕ (JDS Leader)ಎಚ್‌ಡಿ ಕುಮಾರಸ್ವಾಮಿ (HD Kumaraswamy), "ಕೇಂದ್ರ ಸರ್ಕಾರ ಮತ್ತು ಕೇಂದ್ರ ಗೃಹ ಸಚಿವರು ತಮ್ಮ ವೈಯಕ್ತಿಕ ಅಜೆಂಡಾಗಳನ್ನು ಬಲವಂತವಾಗಿ ಚಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರು ಯಶಸ್ವಿಯಾಗುವುದಿಲ್ಲ. ಜನರು ಅವರಿಗೆ ಪಾಠ ಕಲಿಸುತ್ತಾರೆ" ಎಂದು ಹೇಳಿದ್ದಾರೆ.ಹಿಂದಿಯನ್ನು ಭಾರತದ ಭಾಷಾ ಭಾಷೆಯಾಗಿ ಪ್ರತಿಪಾದಿಸುವ ಷಾ ಅವರ ಹೇಳಿಕೆಗಳು ಈ ಹಿಂದೆಯೂ ಖಂಡನೆಗೆ ಕಾರಣವಾಗಿತ್ತು.

ಹಿಂದಿ ಅಧಿಕಾರಿ ‘ಹೇರಿಕೆ’ಗೆ ಮಿಜೋರಂ ಸಿಎಂ ವಿರೋಧ!

2019 ರ ಹಿಂದಿ ದಿವಸ್‌ನಲ್ಲಿ ಮಾತನಾಡಿದ್ದ ಅಮಿತ್ ಷಾ, "ಇಡೀ ದೇಶವನ್ನು ಒಂದೇ ಭಾಷೆಯ ಅಡಿಯಲ್ಲಿ ಕಟ್ಟುವ ಯಾವುದಾದರೂ ಭಾಷೆ ಇದ್ದರೆ ಅದು ಹಿಂದಿ ಮಾತ್ರ. ಭಾರತದಲ್ಲಿ ಹಿಂದಿಯೇ ಹೆಚ್ಚು ಮಾತನಾಡುವ ಭಾಷೆ' ಎಂದಿದ್ದರು. ದಕ್ಷಿಣ ಭಾರತದ ಬಹುತೇಕ ರಾಜ್ಯಗಳ ರಾಜಕೀಯ ನಾಯಕರು, ಅಮಿತ್ ಷಾ ಅವರ ಹೇಳಿಕೆ ದೇಶದಲ್ಲಿ ಹಿಂದಿ ಭಾಷೆಯ ಹೇರಿಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹಿಂದಿ ಹೇರಿಕೆ ವಿರುದ್ಧ ಗುಡುಗಿದ ಎಚ್‌ಡಿಕೆ: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ

ಹಿಂದಿ ಶಿಕ್ಷಣವನ್ನು ಉತ್ತೇಜಿಸುವ ಬಗ್ಗೆ ಕ್ರಮ:
ಒಂಬತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹಿಂದಿಯ ಪ್ರಾಥಮಿಕ ಜ್ಞಾನವನ್ನು ನೀಡುವ ಮತ್ತು ಹಿಂದಿ ಬೋಧನಾ ಪರೀಕ್ಷೆಗಳಿಗೆ ಹೆಚ್ಚಿನ ಗಮನ ನೀಡುವ ಅಗತ್ಯವನ್ನು ಗೃಹ ಸಚಿವರು ಈ ಹಿಂದೆ ಒತ್ತಿ ಹೇಳಿದ್ದರು. ಈಶಾನ್ಯದ ಎಂಟು ರಾಜ್ಯಗಳಲ್ಲಿ 22,000 ಹಿಂದಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದ್ದು, ಈ ಪ್ರದೇಶದ ಒಂಬತ್ತು ಬುಡಕಟ್ಟು ಸಮುದಾಯಗಳು ತಮ್ಮ ಉಪಭಾಷೆಗಳ ಲಿಪಿಗಳನ್ನು ದೇವನಾಗರಿಗೆ ಪರಿವರ್ತಿಸಿದ್ದಾರೆ ಎಂದು ಅವರು ಹೇಳಿದರು. ಇದಲ್ಲದೆ, ಗೃಹ ಸಚಿವಾಲಯದ ಪ್ರಕಾರ, ಈಶಾನ್ಯದಲ್ಲಿರುವ ಎಲ್ಲಾ ಎಂಟು ರಾಜ್ಯಗಳು 10 ನೇ ತರಗತಿಯವರೆಗೆ ಶಾಲೆಗಳಲ್ಲಿ ಹಿಂದಿಯನ್ನು ಕಡ್ಡಾಯಗೊಳಿಸಲು ಒಪ್ಪಿಕೊಂಡಿವೆ ಎಂದು ತಿಳಿಸಿದ್ದಾರೆ.