Asianet Suvarna News Asianet Suvarna News

ಶೀಘ್ರ ಲಸಿಕೆ ಪರಿಣಾಮದ ಟ್ರ್ಯಾಕರ್‌ ಬಿಡು​ಗ​ಡೆ!

* ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ನೀಡಲಾಗುತ್ತಿರುವ ಕೋವಿಡ್‌ ಲಸಿಕೆ

* ಶೀಘ್ರ ಲಸಿಕೆ ಪರಿಣಾಮದ ಟ್ರ್ಯಾಕರ್‌ ಬಿಡು​ಗ​ಡೆ

* ಲಸಿಕೆಯ ಪರಿ​ಣಾಮ ತಿಳಿ​ಯಲು ಸಹ​ಕಾ​ರಿ

* ಟ್ರ್ಯಾಕರ್‌ ವಾರಕ್ಕೊಮ್ಮೆ ಪರಿಷ್ಕರಣೆ

Union health ministry launches vaccine tracker to monitor breakthrough Covid 19 infections efficacy of jabs pod
Author
Bangalore, First Published Sep 10, 2021, 8:46 AM IST

 

ನವದೆಹಲಿ(ಸೆ.10): ದೇಶದಲ್ಲಿ ಕೊರೋನಾ ನಿಯಂತ್ರಣಕ್ಕೆ ನೀಡಲಾಗುತ್ತಿರುವ ಕೋವಿಡ್‌ ಲಸಿಕೆಗಳು ಎಷ್ಟುಪರಿಣಾಮಕಾರಿ ಎಂದು ಲೆಕ್ಕಾಚಾರ ಮಾಡಬಹುದಾದ ವೆಬ್‌ಸೈಟ್‌ ಚಾಲನೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ.

ಕೊರೋನಾ ಲಸಿಕೆ ಎಷ್ಟುಪರಿಣಾಮಕಾರಿ ಹಾಗೂ ಲಸಿಕೆ ಪಡೆದಿದ್ದಾಗ್ಯೂ, ಎಷ್ಟುಮಂದಿ ಸಾವಿಗೀಡಾಗಿದ್ದಾರೆ, ಎಷ್ಟುಜನ​ರಿಗೆ ಸೋಂಕು ತಗು​ಲಿದೆ ಎಂಬುದು ಸೇರಿದಂತೆ ಇನ್ನಿತರ ವಿಚಾರಗಳು ವಾರಕ್ಕೊಮ್ಮೆ ಪರಿಷ್ಕರಣೆಯಾಗುವ ‘ಕೋವಿಡ್‌ ವ್ಯಾಕ್ಸಿನ್‌ ಟ್ರ್ಯಾಕರ್‌’ ಅನ್ನು ಶೀಘ್ರ ಬಿಡುಗಡೆ ಮಾಡಲಾಗುತ್ತದೆ ಎಂದು ಐಸಿ​ಎಂಆರ್‌ ಪ್ರಧಾನ ನಿರ್ದೇ​ಶಕ ಬಲರಾಂ ಭಾರ್ಗವ ಹೇಳಿ​ದ್ದಾ​ರೆ.

ಕೋವಿಡ್‌ನಿಂದ ಸಾವಿಗೀಡಾದವರನ್ನು ಲಸಿಕೆ ಪಡೆಯದವರು, ಒಂದು ಡೋಸ್‌ ಲಸಿಕೆ ಪಡೆದವರು ಮತ್ತು 2 ಡೋಸ್‌ ಲಸಿಕೆ ಪಡೆದವರು ಎಂಬ 3 ವಿಭಾಗದಲ್ಲಿ ವಿಭಾಗಿಸುತ್ತದೆ. ಇದರಿಂದಾಗಿ ಲಸಿಕೆ ಪಡೆದಿದ್ದಾಗ್ಯೂ ಎಷ್ಟುಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ ಎಂಬ ಸ್ಪಷ್ಟಮಾಹಿತಿ ನೀಡುತ್ತದೆ. ಇದರಿಂದ ಲಸಿಕೆಗಳು ಎಷ್ಟುಪರಿಣಾಮಕಾರಿ ಎಂಬುದನ್ನು ಜನರೇ ತಿಳಿಯಬಹುದು.

‘ಕೋವಿನ್‌(ಲಸಿಕೆಯ ಬುಕ್ಕಿಂಗ್‌ಗಾಗಿ ಇರುವ ವೆಬ್‌ಸೈಟ್‌), ಐಸಿಎಂಆರ್‌ನ ರಾಷ್ಟ್ರೀಯ ಕೋವಿಡ್‌ ಪರೀಕ್ಷಾ ದತ್ತಾಂಶ ಮತ್ತು ಕೋವಿಡ್‌-19 ಇಂಡಿಯಾ ಪೋರ್ಟಲ್‌ನಲ್ಲಿರುವ ಅಂಶಗಳನ್ನು ಕ್ರೋಡೀಕರಿಸಿ ಕೋವಿಡ್‌ ವ್ಯಾಕ್ಸಿನ್‌ ಟ್ರ್ಯಾಕರ್‌ ಕಾರ್ಯ ನಿರ್ವಹಿಸಲಿದೆ’ ಎಂದಿದ್ದಾರೆ.

Follow Us:
Download App:
  • android
  • ios