ಕೇಂದ್ರ ಸರ್ಕಾರ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ 3 ಯೂಟ್ಯೂಬ್‌ ಚಾನಲ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. 

ನವದೆಹಲಿ: ಕೇಂದ್ರ ಸರ್ಕಾರ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದ 3 ಯೂಟ್ಯೂಬ್‌ ಚಾನಲ್‌ಗಳನ್ನು ಮಾಧ್ಯಮ ಮಾಹಿತಿಯ ಫ್ಯಾಕ್ಟ್ ಚೆಕ್‌ ಘಟಕ ಗುರುತಿಸಿದೆ. ಅಲ್ಲದೆ, ನ್ಯೂಸ್‌ ಹೆಡ್‌ಲೈನ್ಸ್‌, ಸರ್ಕಾರಿ ಅಪ್ಡೇಟ್‌ ಹಾಗೂ ಆಜ್‌ ತಕ್‌ ಲೈವ್‌ ಎಂಬ ಹೆಸರಿನ ಈ ಮೂರು ಯೂಟ್ಯೂಬ್ ಚಾನೆಲ್‌ಗಳಿಗೆ ಛೀಮಾರಿ ಹಾಕಲಾಗಿದೆ. ಇವು ಕೆಲವು ಸುದ್ದಿ ವಾಹಿನಿಗಳ ಹೆಸರು ಹಾಗೂ ಅವುಗಳ ನಿರೂಪಕರ ಚಿತ್ರವನ್ನು ವೀಡಿಯೋದ ಮುಖಪುಟದಲ್ಲಿ ಬಳಸಿಕೊಂಡು ಜನರು ನಂಬುವಂತೆ ಬಿಂಬಿಸುತ್ತಿದ್ದವು ಈ ಮೂಲಕ ಹೆಚ್ಚು ವೀಕ್ಷಣೆಯಿಂದ ಹಣ ಗಳಿಸುತ್ತಿದ್ದವು ಎಂದು ವರದಿಯಾಗಿದೆ. ಮೂರು ಚಾನಲುಗಳು ಒಟ್ಟಾಗಿ 33 ಲಕ್ಷ ಚಂದಾದಾರರನ್ನು ಹೊಂದಿದ್ದು ಕೃಷಿ ಸಾಲ ಮನ್ನಾ, ಸುಪ್ರೀಂ ಕೋರ್ಟ್, ಸರ್ಕಾರದ ಯೋಜನೆಗಳ ಬಗ್ಗೆ ಇಲ್ಲಸಲ್ಲದ ತಪ್ಪು ಮಾಹಿತಿ ಹಾಗೂ ಬ್ಯಾಂಕ್‌ ಖಾತೆ ಆಧಾರ್‌ ಕಾರ್ಡ್‌, ಪಾನ್‌ ಕಾರ್ಡ್‌ ಇರುವ ಜನರಿಗೆ ಸರ್ಕಾರ ಹಣ ನೀಡುತ್ತಿದೆ ಎಂಬ ಸುಳ್ಳು ಮಾಹಿತಿ ಹರಡುತ್ತಿದ್ದವು ಎಂದು ಸರ್ಕಾರ ಹೇಳಿದೆ.

YouTube Courses ಇದು ಯುಟ್ಯೂಬ್‌ನ ಹೊಸ ಹಣ ಗಳಿಕೆಯ ದಾರಿ, ಏನು ಲಾಭ?

Dr Bro: ಡಾ ಬ್ರೋಗೆ ಅನ್ಯಾಯ, ಕ್ಷಮೆ ಕೇಳಿದ ಯೂಟ್ಯೂಬರ್ ಲೋಹಿತ್, ಇಷ್ಟಕ್ಕೂ ನಡೆದದ್ದೇನು?