ಕೋಲ್ಕತ್ತಾ(ಜ.02): ಗಣರಾಜ್ಯೋತ್ಸವ ಪರೇಡ್‌ಗಾಗಿ ಪ.ಬಂಗಾಳ ಸಲ್ಲಿಸಿದ್ದ ಸ್ತಬ್ಧಚಿತ್ರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.  ಕೇಂದ್ರ ರಕ್ಷಣಾ ಇಲಾಖೆಯ ಸಮಿತಿ ಪ.ಬಂಗಾಳದ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಪ.ಬಂಗಾಳ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯನ್ನು ವಿರೋಧಿಸಿದ್ದರಿಂದ ಸ್ತಬ್ಧಚಿತ್ರ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ ಎಂದು ಟಿಎಂಸಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದೆ.

ಪೌರತ್ವ ಕಾಯ್ದೆ: ಗೊಂದಲ ನಿವಾರಿಸಲು ದೀದಿ ನಾಡಿಗೆ 30000 ಕಾರ್ಯಕರ್ತರು!

ಸಿಎಎ ವಿರುದ್ಧ ಪ್ರತಿಭಟನೆ ಮಾಡಿದ ಕಾರಣಕ್ಕೆ ಕೇಂದ್ರ ಸರ್ಕಾರ ಪ. ಬಂಗಾಳದ ವಿರುದ್ಧ ಮಲತಾಯಿ ಧೋರಣೆ ತಳೆಯುತ್ತಿರುವುದು ಸರಿಯಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ತಪಸ್ ರಾಯ್ ಹರಿಹಾಯ್ದಿದ್ದಾರೆ. 

ಜನ ವಿರೋಧಿ ಕಾಯ್ದೆಯಾದ ಸಿಎಎಯನ್ನು ವಿರೋಧಿಸುತ್ತಿರುವುದರಿಂದ ಕೇಂದ್ರ  ಸರ್ಕಾರ ನಮ್ಮ ಸ್ತಬ್ಧಚಿತ್ರ ಪ್ರಸ್ತಾವನೆಯನ್ನು ತಿರಸ್ಕರಿಸಿದೆ ಎಂದು  ತಪಸ್ ರಾಯ್  ಗಂಭೀರ ಆರೋಪ ಮಾಡಿದ್ದಾರೆ. 

ಪೌರತ್ವ ಕಾಯ್ದೆ: ಯುಎನ್ ಜನಾಭಿಪ್ರಾಯ ಸಂಗ್ರಹಕ್ಕೆ ಮಮತಾ ಆಗ್ರಹ!

ಕೇಂದ್ರ ಸರ್ಕಾರದ ಕ್ಷುಲ್ಲಕ ರಾಜಕಾರಣ ನಮ್ಮನ್ನು ದೃತಿಗೆಡಿಸುವುದಿಲ್ಲ. ಬಿಜೆಪಿ ಸರ್ಕಾರ ಪಶ್ಚಿಮ ಬಂಗಾಳ ಜನರಿಗೆ ಅವಮಾನಿಸಿದ್ದು, ಸದ್ಯದಲ್ಲಿಯೇ ಇದಕ್ಕೆ ಸರಿಯಾದ ಉತ್ತರ ಸಿಗಲಿದೆ ಎಂದು ಟಿಎಂಸಿ ಕಿಡಿಕಾರಿದೆ. 

ಜನವರಿ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ