ದೆಹಲಿಯಲ್ಲಿ ಸೆ.9 ಮತ್ತು 10ರಂದು ನಿಗದಿಯಾಗಿರುವ ಜಿ20 ಸಭೆ ನಡೆಯುವ ಸ್ಥಳದಲ್ಲಿ ಹೆಚ್ಚಾಗಿ ಮಂಗಗಳ ಹಾವಳಿ ಇದ್ದು, ಇದನ್ನು ತಡೆಯಲು ಸರ್ಕಾರವು ಅಲ್ಲಲ್ಲಿ ಮಂಗಗಳದ್ದೇ ಕಟೌಟ್‌ಗಳನ್ನು ಹಾಕಿದೆ.
ನವದೆಹಲಿ: ದೆಹಲಿಯಲ್ಲಿ ಸೆ.9 ಮತ್ತು 10ರಂದು ನಿಗದಿಯಾಗಿರುವ ಜಿ20 ಸಭೆ ನಡೆಯುವ ಸ್ಥಳದಲ್ಲಿ ಹೆಚ್ಚಾಗಿ ಮಂಗಗಳ ಹಾವಳಿ ಇದ್ದು, ಇದನ್ನು ತಡೆಯಲು ಸರ್ಕಾರವು ಅಲ್ಲಲ್ಲಿ ಮಂಗಗಳದ್ದೇ ಕಟೌಟ್‌ಗಳನ್ನು ಹಾಕಿದೆ. ಇದು ಮಾತ್ರವಲ್ಲದೇ ಮಂಗಗಳಂತೆ ಕೂಗಬಲ್ಲ ತರಬೇತಿ ಪಡೆದ 40 ಜನರನ್ನು ನಿಯೋಜನೆ ಮಾಡಲಾಗಿದೆ. ಜಿ20 ಸಭೆ ನಡೆಯುವ ಪ್ರದೇಶದ ಮುಖ್ಯ ಪ್ರದೇಶದಲ್ಲಿ ಈಗ ಮಂಗಗಳ ಕಾಟ ಹೆಚ್ಚಿದೆ. ಇಲ್ಲಿ ಮಂಗಗಳನ್ನೇ ಹೋಲುವ ಕಟೌಟ್ ಹಾಕುವುದರಿಂದ ಹಾಗೂ ಅವುಗಳ ರೀತಿ ಕೂಗುವುದರಿಂದ ಅವು ಹೆದರಿ ಇಲ್ಲಿ ಬರುವುದಿಲ್ಲ ಎಂಬುದು ಅಧಿಕಾರಿ ಲೆಕ್ಕಾಚಾರ. ಹೀಗಾಗಿ ಬೆದರುಗೊಂಬೆ ರೀತಿಯಲ್ಲಿ ಕಟೌಟ್ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ.
ಜಿ20 ಸಭೆಗೆ ಬರುವ ವಿದೇಶಿ ಗಣ್ಯರು ಉಳಿದುಕೊಳ್ಳುವ ಹೋಟೆಲ್ ಮತ್ತು ಇತರೆಡೆ ಮಂಗಗಳಂತೆ ಕೂಗುವ ಪ್ರತಿನಿಧಿಗಳನ್ನು ನಿಯೋಜಿಸಲಾಗಿದೆ. ಅಲ್ಲದೇ ಮಂಗಗಳು ಆಹಾರ ಅರಸುತ್ತ ಬಂದು ಹೆಚ್ಚು ಸಮಯ ಕಾಲಹರಣ ಮಾಡುತ್ತವೆಯಾದ್ದರಿಂದ, ಬೇರೆಡೆ ಅಲ್ಲಲ್ಲಿ ಅವುಗಳಿಗೆ ಆಹಾರದ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಆಹಾರ ಸೇವಿಸಿದ ಬಳಿಕ ಜಿ20 ಸ್ಥಳಕ್ಕೆ ಅವು ಬರುವುದಿಲ್ಲ ಎಂಬುದು ಅಧಿಕಾರಿಗಳ ಇನ್ನೊಂದು ಆಶಾವಾದ.
ಜಿ 20 ಸಭೆಗೆ ಬರುತ್ತಿರುವ ಬೈಡನ್ ಭದ್ರತಾ ಪಡೆಗೆ 400 ಕೊಠಡಿ ಮೀಸಲು!
ಜಿ-20 ಗಾಗಿ ಈಗಾಗಲೇ ರಾಷ್ಟ್ರ ರಾಜಧಾನಿ ಸಂಪೂರ್ಣ ಸಿದ್ದಗೊಂಡಿದ್ದು, ನಗರದ ಪ್ರಮುಖ ಪ್ರತಿಷ್ಠಿತ ಹೊಟೇಲ್‌ಗಳು ಜಿ-20 ಗಣ್ಯರಿಗಾಗಿ ಬುಕ್ ಆಗಿವೆ.
ಇನ್ನೊಂದೆಡೆ ಈ ಜಿ20 ಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಭಾಗಿಯಾಗುವುದಿಲ್ಲ, ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಜಿ-20 ಸಮಾವೇಶ ಸನಿಹದಲ್ಲಿರುವಾಗಲೇ ಚೀನಾ ಭಾರತದ ಪ್ರಮುಖ ಪ್ರದೇಶಗಳನ್ನು ತನ್ನ ಭೂ ಪ್ರದೇಶವೆಂದು ತೋರಿಸಿಕೊಂಡು ಹೊಸ ನಕಾಶೆಯೊಂದನ್ನು ಬಿಡುಗಡೆ ಮಾಡಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ವೈಮನಸ್ಸು ಮೂಡಿದ್ದು, ಈ ಹಿನ್ನೆಲೆಯಲ್ಲಿ ಕ್ಸಿ ಜಿಂಪಿಂಗ್ ಗೈರು ಹಾಜರು ಸುದ್ದಿ ಮಹತ್ವ ಪಡೆದಿದೆ. ಇನ್ನೊಂದೆಡೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಕೂಡ ಜಿ-20 ಸಭೆಯಲ್ಲಿ ಭಾಗವಹಿಸುತ್ತಿಲ್ಲ, ಉಕ್ರೇನ್ ಮೇಲಿನ ಯುದ್ಧದ ನಂತರ ಅಂತಾರಾಷ್ಟ್ರೀಯ ನ್ಯಾಯಾಲಯ ಪುಟಿನ್ ವಿರುದ್ಧ ವಾರೆಂಟ್ ಹೊರಡಿಸಿದ್ದು, ಬಂಧನವಾಗುವ ಭೀತಿ ಹಿನ್ನೆಲೆಯಲ್ಲಿ ಪುಟಿನ್ ಈ ಸಮಾವೇಶದಲ್ಲಿ ಭಾಗವಹಿಸುತ್ತಿಲ್ಲ.
ವಿಜಯನಗರ ಭವ್ಯ ಚರಿತ್ರೆಗೆ ಜಿ-20 ಪ್ರತಿನಿಧಿಗಳು ಫಿದಾ!