Asianet Suvarna News Asianet Suvarna News

ಹಂಪಿ ಅಭಿವೃದ್ಧಿಗೆ ಕೇಂದ್ರ ಸಂಪುಟ ನಿರ್ಧಾರ

ಕೇಂದ್ರ ಸಚಿವ ಸಂಪುಟ ಸಭೆಯು ಹಂಪಿಯನ್ನು ಒಳಗೊಂಡ ‘ರಾಮಾಯಣ ಸರ್ಕೀಟ್‌’ ಯೋಜನೆ ಸೇರಿದಂತೆ 10 ಪ್ರವಾಸೋದ್ಯಮ ಯೋಜನೆಗಳಿಗೆ ಸುಮಾರು 2400 ಕೋಟಿ ರು.ಗಳ ಬಿಡುಗಡೆಗೆ ಒಪ್ಪಿಗೆ ನೀಡಿದೆ.

Union Cabinet approves release of over 2400 crore for improving tourism
Author
Bengaluru, First Published Dec 25, 2019, 10:49 AM IST

ನವದೆಹಲಿ (ಡಿ. 25): ಕೇಂದ್ರ ಸಚಿವ ಸಂಪುಟ ಸಭೆಯು ಹಂಪಿಯನ್ನು ಒಳಗೊಂಡ ‘ರಾಮಾಯಣ ಸರ್ಕೀಟ್‌’ ಯೋಜನೆ ಸೇರಿದಂತೆ 10 ಪ್ರವಾಸೋದ್ಯಮ ಯೋಜನೆಗಳಿಗೆ ಸುಮಾರು 2400 ಕೋಟಿ ರು.ಗಳ ಬಿಡುಗಡೆಗೆ ಒಪ್ಪಿಗೆ ನೀಡಿದೆ.

ಇದರಲ್ಲಿ 627 ಕೋಟಿ ರು.ಗಳು 2018-19ರಲ್ಲೇ ಮಂಜೂರಾಗಿತ್ತು. ಇದರ ಜತೆಗೆ 1854 ಕೋಟಿ ರು.ಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ.

7 ಲಕ್ಷ ಮನೆ ಮಂಜೂರಾತಿ ವಾಪಸ್‌: ಸಚಿವ ಸೋಮಣ್ಣ

ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿಪಡಿಸುತ್ತಿರುವ 10 ಯೋಜನೆಗಳಲ್ಲಿ ರಾಮಾಯಣ ಸರ್ಕೀಟ್‌ ಕೂಡ ಒಂದು. ಇದರಲ್ಲಿ ಕರ್ನಾಟಕದ ಹಂಪಿ ಇದೆ. ಹಂಪಿ ಸಮೀಪದ ಕಿಷ್ಕಿಂದೆಯನ್ನು ಹನುಮ ಜನ್ಮಸ್ಥಳ ಎನ್ನಲಾಗುತ್ತದೆ. ಪ್ರವಾಸಿಗರನ್ನು ರಾಮಾಯಣ ನಡೆದ ಇಂತಹ ಸ್ಥಳಗಳಿಗೆ ಕರೆದೊಯ್ಯುವುದೇ ಇದರ ಉದ್ದೇಶ.

ಸರ್ಕಾರಿ ನೌಕರರ ರಜೆ ಪಡೆಯುವ ವಿಧಾನವಿನ್ನು ಸುಲಭ

ಯೋಜನೆಯ ಅನುಸಾರ ಹಂಪಿ, ಕಿಷ್ಕಿಂದೆ ಸೇರಿದಂತೆ ರಾಮಾಯಣ ಸರ್ಕೀಟ್‌ ಅಡಿ ಬರುವ ಸ್ಥಳಗಳ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುತ್ತದೆ. ಪ್ರವಾಸಿಗರಿಗೆ ತಂಗಲು ಉತ್ತಮ ವಸತಿ ವ್ಯವಸ್ಥೆ, ಕುಡಿಯುವ ನೀರು- ಮೊದಲಾದ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ.

Follow Us:
Download App:
  • android
  • ios