ಒಂದು ದೇಶ ಒಂದು ಚುನಾವಣೆಗೆ ಮೋದಿ ಸರ್ಕಾರ ಅಸ್ತು: 2029ರಿಂದ ಏಕಕಾಲಕ್ಕೆ ಎಲೆಕ್ಷನ್?
ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ಈ ವರದಿಯನ್ನು ಅಂಗೀಕರಿಸುವುದಾಗಿ ಕಾನೂನು ಸಚಿವಾಲಯ ಹೇಳಿತ್ತು. ಅದರಂತೆ, ಬುಧವಾರ ವರದಿಯನ್ನು ಅಂಗೀಕರಿಸಲಾಗಿದೆ.
ನವದೆಹಲಿ(ಸೆ.19): ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ 'ಒಂದು ದೇಶ ಒಂದು ಚುನಾವಣೆ' ಪ್ರಸ್ತಾವಕ್ಕೆ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ತನ್ನ ಅನುಮೋದನೆಯನ್ನು ನೀಡಿದೆ. ಈ ಪ್ರಸ್ತಾಪವನ್ನು ಬಿಜೆಪಿ ಯಾದಿಯಾಗಿ ಎನ್‌ಡಿಎ ಮಿತ್ರ ಪಕ್ಷಗಳು ಸ್ವಾಗತಿಸಿದ್ದರೆ, ಇದು ಪ್ರಾಯೋಗಿಕವಾಗಿ ಅಸಾಧ್ಯ ಎಂದು ವಿಪಕ್ಷಗಳು ಟೀಕಿಸಿವೆ.
ಲೋಕಸಭೆಯ ಸಾರ್ವತ್ರಿಕ ಚುನಾವಣೆಗೂ ಮುನ್ನ ಅಂದರೆ, ಮಾರ್ಚ್‌ನಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧ್ಯಕ್ಷತೆಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತಿತರರು ಸದಸ್ಯರಾಗಿರುವ ಅತ್ಯುನ್ನತ ಸಮಿತಿ ವರದಿಯೊಂದನ್ನು ಸಲ್ಲಿಕೆ ಮಾಡಿತ್ತು. ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ 100 ದಿನಗಳಲ್ಲಿ ಈ ವರದಿಯನ್ನು ಅಂಗೀಕರಿಸುವುದಾಗಿ ಕಾನೂನು ಸಚಿವಾಲಯ ಹೇಳಿತ್ತು. ಅದರಂತೆ, ಬುಧವಾರ ವರದಿಯನ್ನು ಅಂಗೀಕರಿಸಲಾಗಿದೆ.
ಕೇಂದ್ರ ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ನೀಟ್ ಸೇರಿದಂತೆ 4 ನಿರ್ಣಯ ಪಾಸ್
ಲೋಕಸಭೆಹಾಗೂ ವಿಧಾನಸಭೆ ಚುನಾವಣೆಗಳನ್ನು ಏಕಕಾಲಕ್ಕೆ ನಡೆಸಬೇಕು. ಈ ಚುನಾವಣೆಗಳು ನಡೆದ 100 ದಿನಗಳೊಳಗೆ ನಗರ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯಿತಿ ಚುನಾವಣೆಗಳನ್ನು ನಡೆಸಬೇಕು ಎಂಬ ಅಂಶ ವರದಿಯಲ್ಲಿದೆ. 2029ರಿಂದ ಇದು ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಅದಕ್ಕೂ ಮುನ್ನ ಸಂವಿಧಾನಕ್ಕೆ ಹಲವು ತಿದ್ದುಪಡಿಗಳು ಆಗಬೇಕಿವೆ. ಬಿಜೆಪಿಯೇತರ ಪಕ್ಷಗಳ ವಿರೋಧ ಇರುವುದರಿಂದ ಆಸವಾಲನ್ನು ಸರ್ಕಾರದಾಟಬೇಕಿದೆ.
ವರದಿಯಲ್ಲೇನಿದೆ?:
ತಾನು ಮಾಡಿರುವ ಶಿಫಾರಸುಗಳ ಬಗ್ಗೆ ಗಮನಹರಿಸಲು ಅನುಷ್ಠಾನ ಸಮಿತಿಯೊಂದನ್ನು ರಚನೆ ಮಾಡಬೇಕು. ರಾಜ್ಯ ಚುನಾವಣಾ ಆಯೋಗಗಳ ಜತೆಗೂಡಿ ಕೇಂದ್ರ ಚುನಾವಣಾ ಆಯೋಗವು ಏಕರೂಪದ ಮತದಾರರ ಪಟ್ಟಿ ಹಾಗೂ ಗುರುತಿನ ಚೀಟಿ ವಿತರಣೆ ಮಾಡಬೇಕು. ಒಂದು ದೇಶ ಒಂದು ಚುನಾವಣೆ ಅನುಷ್ಠಾನಕ್ಕೆ 18 ಸಾಂವಿಧಾನಿಕ ತಿದ್ದುಪಡಿಗಳು ಅವಶ್ಯ ಇವೆ. ಇವುಗಳಲ್ಲಿ ಬಹುತೇಕ ತಿದ್ದುಪಡಿಗಳಿಗೆ ರಾಜ್ಯಗಳ ವಿಧಾನಸಭೆಯ ಒಪ್ಪಿಗೆಯೇನೂ ಬೇಕಾಗಿಲ್ಲ. ಆದರೆ ಏಕರೂಪದ ಮತದಾರರ ಪಟ್ಟಿ ಹಾಗೂ ಮತದಾರರ ಗುರುತಿನ ಚೀಟಿನಿರ್ಧಾರಗಳಿಗೆಅರ್ಧದಷ್ಟು ರಾಜ್ಯ ಗಳಸಹಮತಿ ಅಗತ್ಯ ಎಂದು ವರದಿ ಹೇಳುತ್ತದೆ. ಬಿಜೆಪಿಯಅಜೆಂಡಾ:ಒಂದು ದೇಶಒಂದುಚುನಾವಣೆ ಬಗ್ಗೆ ಈ ಹಿಂದೆ ಸಾಕಷ್ಟು ಚರ್ಚೆ ನಡೆದದ್ದು ಇದೆ. 2019 ಹಾಗೂ 2024ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಈ ಕುರಿತು ಭರವಸೆ ನೀಡಿತ್ತು. ಕಳೆದಸ್ವಾತಂತ್ರ್ಯ ದಿನಾಚರಣೆ ಭಾಷಣದಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರು ಈ ಬಗ್ಗೆ ಬದ್ಧತೆ ವ್ಯಕ್ತಪಡಿಸಿದ್ದರು.
ಮಹತ್ತರ ಹೆಜ್ಜೆ ಲೋಕಸಭೆ ಮತ್ತು ವಿಧಾನ ಸಭೆ ಚುನಾವಣೆಗಳನ್ನು ಏಕ ಕಾಲದಲ್ಲಿ ನಡೆಸಲು ಮಾಜಿ ರಾಷ್ಟಪತಿ ರಾಮನಾಥ್ ಕೋವಿಂದ್ ಅವರ ನೇತೃತ್ವದ ಸಮಿತಿಯ ಶಿಫಾರಸನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿರುವುದು ಭಾರತದ ಪ್ರಜಾಪ್ರ ಪ್ರಭುತ್ವವನ್ನು ಇನ್ನಷ್ಟು ಶಕ್ತಿಶಾಲಿಯನ್ನಾಗಿ ಮಾಡುವತ್ತ ಇಟ್ಟ ಮಹತ್ತರ ಹೆಜ್ಜೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಸಂಸತ್ತಲ್ಲಿ ಕಾಯ್ದೆ ಪಾಸು ಕಷ್ಟ ಕಷ್ಟ!
ಒಂದು ದೇಶ ಒಂದು ಚುನಾವಣೆ ಸಾಕಾರಕ್ಕೆ ಸಂವಿಧಾನದಲ್ಲಿ 18 ತಿದ್ದುಪಡಿಗಳನ್ನು ಮಾಡಬೇಕು. ಆ ಪೈಕಿ 8 ತಿದ್ದುಪಡಿಗಳಿಗೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಅನುಮತಿ ಬೇಕು, ಸಂವಿಧಾನ ತಿದ್ದುಪಡಿಗೆ ಸಂಸತ್ತಿನಲ್ಲಿ ಎನ್‌ಡಿಗೆ 2/3 ಬಹುಮತ ಬೇಕು. ಅಷ್ಟು ಬಹುಮತಕ್ಕೆ ಲೋಕಸಭೆಯಲ್ಲಿ 72 ಹಾಗೂ ರಾಜ್ಯಸಭೆಯಲ್ಲಿ 52 ಸ್ಥಾನಗಳ ಕೊರತೆಯನ್ನು ಎನ್‌ಡಿಎ ಎದುರಿಸುತ್ತಿದೆ.
ಜನರ ದಾರಿ ತಪ್ಪಿಸುವ ತಂತ್ರ:
ವಿಪಕ್ಷಗಳು ಕಿಡಿ ನವದೆಹಲಿ: ಕೇಂದ್ರ ಸರ್ಕಾರದ 'ಒಂದು ದೇಶ ಒಂದು ಚುನಾವಣೆ' ಪ್ರಸ್ತಾಪ ಆಪ್ರಾಯೋಗಿಕ ಮತ್ತು ಚೀಪ್ ಗಿಮಿಕ್ ಎಂದು ವಿರೋಧ ಪಕಗಳು ಸರ್ಕಾರ ವನ್ನು ಕಟುವಾಗಿ ಟೀಕಿಸಿವೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 'ಈ ಪರಿಕಲ್ಪನೆ – ಅಪ್ರಾಯೋಗಿಕವಾಗಿದ್ದು, ಚುನಾವಣೆಗಳು ಸಮೀಪಿದ್ದಾಗ ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನು ತಿರುಗಿಸಲು ಬಿಜೆಪಿ ಇಂತಹ ತಂತ್ರ ಹೂಡುತ್ತದೆ' ಎಂದು ಟೀಕಿಸಿದ್ದಾರೆ.