Uttarakhand Elections 2022: ಮತ್ತೆ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ: ಸಿಎಂ ಪುಷ್ಕರ್ ಸಿಂಗ್ ಧಾಮಿ!

ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗುವುದರಿಂದ ರಾಜ್ಯದಲ್ಲಿ ಎಲ್ಲರಿಗೂ ಸಮಾನ ಹಕ್ಕು ಸಿಗಲಿದೆ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ಹೇಳಿದ್ದಾರೆ

Uniform Civil Code in Uttarakhand if BJP Comes to power says CM Pushkar Singh Dhami mnj

ನವದೆಹಲಿ (ಫೆ. 12): ಫೆಬ್ರವರಿ 14 ರಂದು ಉತ್ತರಾಖಂಡ (Uttarakhand) ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತದಾನಕ್ಕೆ ಕೇವಲ 2 ದಿನ ಬಾಕಿ ಇದೆ. ಈ ಮಧ್ಯೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ( CM Pushkar Singh Dhami) ಏಕರೂಪ ನಾಗರಿಕ ಸಂಹಿತೆ ಕರಡು ತಯಾರಿಸಲು ಸಮಿತಿ ರಚನೆಯ ಬಗ್ಗೆ ಶನಿವಾರ ಮಾಹಿತಿ ನೀಡಿದ್ದಾರೆ. "ಹೊಸ ಬಿಜೆಪಿ ಸರ್ಕಾರವು ರಾಜ್ಯದಲ್ಲಿ  ಪ್ರಮಾಣ ವಚನದ ನಂತರ ಏಕರೂಪ ನಾಗರಿಕ ಸಂಹಿತೆಯ ಕರಡು ತಯಾರಿಸಲು ಸಮಿತಿಯನ್ನು ರಚಿಸುತ್ತದೆ. ಈ ಯುಸಿಸಿ (Uniform Civil Code) ಎಲ್ಲಾ ಜನರಿಗೆ ಅವರ ವೈಯಕ್ತಿಕ ನಂಬಿಕೆ ಹೊರತಾಗಿಯೂ  ಮದುವೆಗಳು, ವಿಚ್ಛೇದನ, ಭೂಮಿ-ಆಸ್ತಿ ಮತ್ತು ಉತ್ತರಾಧಿಕಾರದ ಬಗ್ಗೆ ಒಂದೇ ರೀತಿಯ ಕಾನೂನುಗಳನ್ನು ಒದಗಿಸುತ್ತದೆ. "ಎಂದು ಉತ್ತರಾಖಂಡ ಸಿಎಂ ಹೇಳಿದ್ದಾರೆ. 

ಉತ್ತರಾಖಂಡದ ಎಲ್ಲಾ 70 ವಿಧಾನಸಭಾ ಸ್ಥಾನಗಳಿಗೆ  ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಬಿಜೆಪಿ-ಕಾಂಗ್ರೆಸ್ ಜತೆಗೆ ಆಮ್ ಆದ್ಮಿ ಮತ್ತಿತರ ಪಕ್ಷಗಳೂ ಚುನಾವಣಾ ಪ್ರಚಾರದಲ್ಲಿ ನಿರತವಾಗಿವೆ. ಸಾರ್ವಜನಿಕರನ್ನು ಓಲೈಸಲು ಭರವಸೆ ನೀಡಲಾಗುತ್ತಿದೆ. ಅಭಿವೃದ್ಧಿಯ ಮಾತು ಕೇಳಿ ಬರುತ್ತಿದೆ. ಈ ಮಧ್ಯೆ ಬಿಜೆಪಿ ಅಧಿಕಾರಕ್ಕೆ ಬಂದರೆ  ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಉತ್ತರಾಖಂಡ್‌ ಸಿಎಂ ಮಾತನಾಡಿದ್ದಾರೆ. 

ಇದನ್ನೂ ಓದಿ: Uttarakhand Election ಬಿಜೆಪಿ ಕಾಂಗ್ರೆಸ್ ನಡುವೆ ನೇರಾನೇರ ಸ್ಪರ್ಧೆ, ಕೇಸರಿ ಪಡೆಗೆ ಅಧಿಕಾರ ಗದ್ದುಗೆ, ಸಮೀಕ್ಷಾ ವರದಿ ಸಂಚಲನ!

ಸಂವಿಧಾನದ ಭಾವನೆಗಳಿಗೆ ಸರಿಯಾದ ರೂಪ: ಏಕರೂಪ ನಾಗರಿಕ ಸಂಹಿತೆಯು ಸಂವಿಧಾನ ರಚಿಸಿದವರ ಕನಸ್ಸನ್ನು ನನಸು ಮಾಡುವತ್ತ ಪ್ರಮುಖ ಹೆಜ್ಜೆಯಾಗಲಿದೆ ಎಂದು ಹೇಳಿರುವ ಧಾಮಿ " ಇದು ಸಂವಿಧಾನದ ಭಾವನೆಗಳಿಗೆ ಸರಿಯಾದ ರೂಪ ನೀಡಲಿದೆ. ಇದು ಭಾರತದ ಸಂವಿಧಾನದ ಆರ್ಟಿಕಲ್‌ 44ರ  ಅನ್ವಯ ಒಂದು ಪ್ರಮುಖ ಹೆಜ್ಜೆಯಾಗಲಿದೆ ಎಂದು ಹೇಳಿದ್ದಾರೆ. 

"ಸರ್ವೊಚ್ಛ ನ್ಯಾಯಾಲಯುವೂ ಕಾಲದಿಂದ ಕಾಲಕ್ಕೆ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ತಿಳಿ ಹೇಳಿದೆ. ಅಲ್ಲದೇ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿರುವುದಕ್ಕೂ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದೆ" ಎಂದು ಸಿಎಂ ಪುಷ್ಕರ್ ಹೇಳಿದ್ದಾರೆ. 

 

 

ಉತ್ತರಖಂಡ ಚುನಾವಣೆ 2022: ಉತ್ತರಖಂಡ ವಿಧಾನಸಭಾ ಚುನಾವಣೆ ಫೆಬ್ರವರಿ 14 ರಂದು ನಡೆಯಲಿದೆ. ಒಂದು ಹಂತದಲ್ಲಿ ನಡೆಯಲಿರುವ ಚುನಾವಣೆ ಫಲಿತಾಂಶ ಮಾರ್ಚ್ 10 ರಂದು ಹೊರಬೀಳಲಿದೆ. 70 ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ರಾಜಕೀಯ ಹೋರಾಟಕ್ಕೆ ವೇದಿಕೆಯಾಗಿದೆ. 

2017ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 57 ಸ್ಥಾನಗಳನ್ನು ಗೆದ್ದು ಪೂರ್ಣಬಹುಮತದೊಂದಿಗೆ ಸರ್ಕಾರ ರಚಿಸಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬಿಜೆಪಿ ನಷ್ಟವೇ ಹೆಚ್ಚು. ಕಾರಣ ಸಮೀಕ್ಷೆ ಹೇಳುತ್ತಿರುವುದು 34 ರಿಂದ 39 ಸ್ಥಾನ ಎಂದಿದೆ. ಬಹುಮತವಿದ್ದರೂ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಅಂತರ ಹೆಚ್ಚಿಲ್ಲ.

2017ರಲ್ಲಿ ಫೆಬ್ರವರಿಯಲ್ಲಿ ನಡೆದ  ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಸರ್ಕಾರ ರಚಿಸಿದ ಬಿಜೆಪಿ ಅವದಿ ಮಾರ್ಚ್ 23, 2022ಕ್ಕೆ ಅಂತ್ಯಗೊಳ್ಳಲಿದೆ.  ತ್ರೀವೇಂದ್ರ ಸಿಂಗ್ ರಾವತ್ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರೆ, ಬಳಿಕ ಉತ್ತರಖಂಡ ಒಟ್ಟು 3 ಮುಖ್ಯಮಂತ್ರಿಗಳನ್ನು ಕಂಡಿದೆ. ಮಾರ್ಚ್ 9, 2021ರಂದು ತ್ರೀವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ಬಳಿಕ ತೀರ್ಥ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಜುಲೈ 2, 2021ರಂದು ತೀರ್ಥಸಿಂಗ್ ರಾವತ್ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಸಿಎಂ ಜವಾಬ್ದಾರಿಯನ್ನು ಪುಷ್ಕರ್ ಸಿಂಗ್ ಧಮಿ ವಹಿಸಿಕೊಂಡರು.

Latest Videos
Follow Us:
Download App:
  • android
  • ios