ಮಧ್ಯಪ್ರದೇಶದ ಹದಿಹರೆಯದ ಹೆಣ್ಣುಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರು ಮಾಡುತ್ತಿರುವ ಪ್ರಯತ್ನಗಳನ್ನು ಯುನಿಸೆಫ್ ಶ್ಲಾಘಿಸಿದೆ.

ನವದೆಹಲಿ (ಆ.18): ಮಧ್ಯಪ್ರದೇಶದ ಹದಿಹರೆಯದ ಹೆಣ್ಣುಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಅವರು ಮಾಡುತ್ತಿರುವ ಪ್ರಯತ್ನಗಳನ್ನು ಯುನಿಸೆಫ್ ಶ್ಲಾಘಿಸಿದೆ. ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಯುನಿಸೆಫ್‌, 'ಹದಿಹರೆಯದ ಹುಡುಗಿಯರ ಉತ್ತಮ ಆರೋಗ್ಯಕ್ಕಾಗಿ ಮುಖ್ಯಮಂತ್ರಿಗಳ ಸ್ಯಾನಿಟೇಷನ್‌ ಮತ್ತು ಹೈಜಿನ್‌ ಯೋಜನೆಯನ್ನು ಒಂದು ಅನನ್ಯ ಉಪಕ್ರಮವೆಂದು ಶ್ಲಾಘನೆ ಮಾಡಿದೆ. ಮುಖ್ಯಮಂತ್ರಿ ಡಾ.ಯಾದವ್ ಅವರು ಆಗಸ್ಟ್ 11 ರಂದು ಭೋಪಾಲ್‌ನಲ್ಲಿ ಆಯೋಜಿಸಿದ್ದ ವಿದ್ಯಾರ್ಥಿನಿಯರ ಸಂವಾದ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಸಮಗ್ರ ಶಿಕ್ಷಾ ಸ್ಯಾನಿಟೇಷನ್‌ ಮತ್ತು ಹೈಜಿನ್‌ ಯೋಜನೆಯಡಿ 19 ಲಕ್ಷ ವಿದ್ಯಾರ್ಥಿನಿಯರ ಖಾತೆಗಳಿಗೆ 57 ಕೋಟಿ 18 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾರೆ ಎನ್ನುವುದು ವಿಶೇಷವಾಗಿದೆ.

ಸ್ಯಾನಿಟೇಷನ್‌ ಮತ್ತು ನೈರ್ಮಲ್ಯ ಯೋಜನೆಯಡಿ 7 ರಿಂದ 12 ನೇ ತರಗತಿಯ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ಗಾಗಿ ಹಣವನ್ನು ಸರ್ಕಾರದಿಮದ ವರ್ಗಾಯಿಸಲಾಗಿದೆ. ಯೋಜನೆಯಡಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸ್ವಚ್ಛತೆಯ ಮಹತ್ವ ಮತ್ತು ಅದರ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಈ ಯೋಜನೆಯು ಶಾಲಾ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಾ ಅಭಿಯಾನದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

Scroll to load tweet…