Asianet Suvarna News Asianet Suvarna News

ಸಚಿವೆಯನ್ನು 'ಐಟಂ' ಎಂದು ಕಮಲ್‌ನಾಥ್ ಕರೆದಿದ್ದು ದುರದೃಷ್ಟಕರ

ತಮ್ಮ ಪಕ್ಷದವರ ವಿರುದ್ಧವೇ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ/ ಕಮಲ್ ನಾಥ್ ಹೇಳಿಕೆ ಸರಿ ಇಲ್ಲ/ ಮಹಿಳೆಯರ ಬಗ್ಗೆ ಹೀಗೆ ಮಾತನಾಡಬಾರದಿತ್ತು/ ಇಮಥ ಹೇಳಿಕೆ ದುರದೃಷ್ಟಕರ

Unfortunate Rahul Gandhi On Kamal Nath Comment For BJP Leader mah
Author
Bengaluru, First Published Oct 20, 2020, 10:28 PM IST

ವಯನಾಡು(ಅ. 20)  ಇದೆ ಮೊದಲ ಸಾರಿ ಎಂಬಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ಮಧ್ಯಪ್ರದೇಶದಲ್ಲಿ ಭಾರೀ ವಿವಾದ ಸೃಷ್ಟಿಸಿರುವ ಮಾಜಿ ಸಿಎಂ ಕಮಲ್‌ನಾಥ್‌ ಅವರು ಕ್ಯಾಬಿನೆಟ್‌ ಸಚಿವೆ ಇಮಾರ್ತಿ ದೇವಿ ಅವರನ್ನು ‘ಐಟಂ’ ಎಂದು ಕರೆದಿದ್ದನ್ನು ಖಂಡಿಸಿದ್ದಾರೆ. ಕಮಲ್ ನಾಥ್ ಹೇಳಿಕೆ ದುರದೃಷ್ಟಕರ ಎಂದಿದ್ದಾರೆ.

ವಯನಾಡಲ್ಲಿ ಮಾತನಾಡಿದ ರಾಹುಲ್, ಕಮಲ್‌ನಾಥ್ ನನ್ನ ಪಕ್ಷದವರಾಗಿದ್ದರೂ, ಅವರು ಒರ್ವ ಮಹಿಳೆಗೆ ಬಳಸಿದ ಭಾಷೆ ನನಗೆ ಇಷ್ಟವಾಗಿಲ್ಲ. ಅವರು ಯಾರೇ ಆಗಿದ್ದರೂ ಇಂಥ ಹೇಳಿಕೆ ಸಮರ್ಥನೆ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.

ಬಿಜೆಪಿ ಸಚಿವೆಗೆ ಐಟಂ ಎಂದ ಕಮಲ್ ನಾಥ್

ಈ ಬಗ್ಗೆ ಟ್ವೀಟ್ ಸಹ ಮಾಡಿರುವ ರಾಹುಲ್, ಗ್ವಾಲಿಯರ್‌ನ ದಬ್ರಾ ಕ್ಷೇತ್ರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡುತ್ತ ಕಮಲ್ ನಾಥ್‌  ಕ್ಯಾಬಿನೆಟ್ ಸಚಿವೆ ಇಮಾರ್ತಿ ದೇವಿ ಅವರ ಹೆಸರನ್ನು ಉಲ್ಲೇಖಿಸದೆ 'ಐಟಂ' ಎಂದು ಕರೆದಿದ್ದರು.  ಕಾಂಗ್ರೆಸ್‌ನಲ್ಲಿದ್ದ ಇಮಾರ್ತಿ ದೇವಿ ಜ್ಯೋತಿರಾಧಿತ್ಯ ಸಿಂಧಿಯಾ ಬಳಿಕ ಬಿಜೆಪಿ ಸೇರಿದ್ದರು. ಈಗ ಶಿವರಾಜ್ ಸಿಂಗ್ ಚೌಹಾಣ್‌ ನೇತೃತ್ವದ ಮಧ್ಯಪ್ರದೇಶ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ.

ನಾನು ಈ ಬಗ್ಗೆ ಮೊದಲೇ ಸ್ಷಷ್ಟನೆ ನೀಡಿದ್ದೇನೆ. ಕ್ಷಮೆ ಕೇಳುವ ಪ್ರಮೆಯವೇ ಬರುವುದಿಲ್ಲ ಎಂದು ಕಮಲ್ ನಾಥ್ ಹೇಳಿದ್ದರು. ಇನ್ನೊಂದು ಕಡೆ ಹೇಳಿಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಇಮಾರ್ತಿ ದೇವಿ  ಸೋನಿಯಾ ಗಾಂಧಿ ಅವರ ಮಗಳನ್ನು ಹೀಗೆ ಕರೆದರೆ ಅವರು ಸುಮ್ಮನಿರುತ್ತಾರೆಯೇ ಎಂದು ಪ್ರಶ್ನೆ ಮಾಡಿದ್ದರು .

ಕಮಲ್‌ ನಾಥ್‌ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿತ್ತು. ಕಮಲ್‌ನಾಥ್‌ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಆಗ್ರಹಿಸಿತ್ತು. ಮಾಜಿ ಸಿಎಂ ಹೇಳಿಕೆ ವಿರುದ್ಧ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‌ ಭೋಪಾಲ್‌ನಲ್ಲಿ ಎರಡು ಗಂಟೆಗಳ ಕಾಲ ಮೌನ ಪ್ರತಿಭಟನೆಯನ್ನು ಸಹ ನಡೆಸಿದ್ದರು.

 

Follow Us:
Download App:
  • android
  • ios