ಅವಿದ್ಯಾವಂತರು ಭಾರತಕ್ಕೆ ಹೊರೆ, ಉತ್ತಮ ನಾಗರಿಕರಾಗಲು ಸಾಧ್ಯವಿಲ್ಲ: ಅಮಿತ್ ಶಾ

* ಸಂಸತ್ ಟಿವಿಯಲ್ಲಿ ಅಮಿತ್ ಶಾ ವಿವಾದಾತ್ಮಕ ಹೇಳಿಕೆ

* ಅವಿದ್ಯಾವಂತರು ದೇಶಕ್ಕೆ ಹೊರೆ ಎಂದ ಕೇಂದ್ರ ಸಚಿವ

* ಅಶಿಕ್ಷಿತರು ಎಂದಿಗೂ ಉತ್ತಮ ನಾಗರಿಕರಾಗಲು ಸಾಧ್ಯವಿಲ್ಲ

Uneducated People A Burden On India Can not Be Good Citizens Says Home Minister Amit Shah pod

ನವದೆಹಲಿ(ಅ.11): ಸಂದರ್ಶನವೊಂದರಲ್ಲಿ(Interview) ಕೆಂದ್ರ ಗೃಹಸ ಚಿವ ಅಮಿತ್ ಶಾ(Union Home Minister Amit Shah) ನೀಡಿರುವ ಹೆಳಿಕೆ ಸದ್ಯ ಭಾರೀ ವಿವಾದ ಸೃಷ್ಟಿಸಿದ್ದು, ಸಚಿವರ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಹೌದು ಸಂಸತ್ ಟಿವಿಯಲ್ಲಿ(Sansad TV) ಮಾತನಾಡಿದ ಅಮಿತ್ ಶಾ(Amit Shah) ಅವಿದ್ಯಾವಂತರು(Uneducated) ಭಾರತಕ್ಕೆ ಹೊರೆ. ಸಂವಿಧಾನ ನೀಡಿರುವ  ಹಕ್ಕುಗಳು ಹಾಗೂ  ಕರ್ತವ್ಯಗಳ ಬಗ್ಗೆ ಅವರಿಗೆ ತಿಳಿಯುವುದಿಲ್ಲ. ಹೀಗಾಗಿ ಎಂದಿಗೂ ಅವರು ಉತ್ತಮ ನಾಗರಿಕರಾಗಲು(Citizens) ಸಾಧ್ಯವಿಲ್ಲ ಎಂದಿದ್ದಾರೆ. ಇದೇ ವೇಳೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ಸೇರುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ ಎಂದೂ ವಿವರಿಸಿದ್ದಾರೆ.

ಮೋದಿ ಸರ್ವಾಧಿಕಾರಿಯಲ್ಲ

ಸಿಎಂನಿಂದ ಪಿಎಂವರೆಗೆ, ಪ್ರಧಾನಿ ನರೇಂದ್ರ ಮೋದಿ(narendra Modi) ಅಧಿಕಾರಕ್ಕೇರಿ ಇಪ್ಪತ್ತು ವರ್ಷಗಳು ಪೂರೈಸಿದ್ದಾರೆ. ಹೀಗಿರುವಾಗ ಸಂಸತ್ ಟಿವಿ ಕೇಂದ್ರ ಸಚಿವ ಅಮಿತ್ ಶಾರ ಸಂದರ್ಶನ ನಡೆಸಿದ್ದು, ಈ ಸಂದರ್ಭದಲ್ಲಿ ಅವರು ಇಂತಹ ಹೇಳಿಕೆ ನೀಡಿದ್ದಾರೆಂಬುವುದು ಉಲ್ಲೇಖನೀಯ. ಇನ್ನು ಪ್ರಧಾನಿ ಮೋದಿ ಬಗ್ಗೆ ಮಾತನಾಡಿರುವ ಅಮಿತ್ ಶಾ ಮೋದಿ ಸರ್ವಾಧಿಕಾರಿಯಲ್ಲ,   ಅತ್ಯಂತ ಪ್ರಜಾ ಸತ್ತಾತ್ಮಕ  ಮೌಲ್ಯ   ರೂಡಿಸಿಕೊಂಡಿರುವ  ನಾಯಕರಲ್ಲಿ ಒಬ್ಬರು. ಹೀಗಾಗಿ ಪ್ರತಿ ಪಕ್ಷಗಳ  ನಾಯಕರು ಮಾಡಿರುವ ಆರೋಪಗಳು ಆಧಾರ ರಹಿತ. ಮೋದಿ ಜೊತೆ ನಾನು  ಸುದೀರ್ಘ ಸಮಯದಿಂದ  ಕಾರ್ಯ ನಿರ್ವಹಿಸುತ್ತಿದ್ದೇನೆ.  ಯಾವುದೇ  ವಿಷಯ ಕುರಿತು  ಸಭೆ  ನಡೆದರೂ,   ಅವರು  ಅತ್ಯಂತ  ಕಡಿಮೆ ಮಾತನಾಡುತ್ತಾರೆ ಎಂದಿದ್ದಾರೆ.

ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಲು ಕ್ರಮ

 ಇನ್ನು ಶಾಲೆಗಳಲ್ಲಿ ದಾಖಲಾತಿ ಹೆಚ್ಚಿಸಲು ಹಾಲಿ ಸರಕಾರ ಹೇಗೆ ಶ್ರಮಿಸುತ್ತಿದೆ ಎಂದು ವಿವರಿಸುವ ಸಂದರ್ಭದಲ್ಲಿ ಅಮಿತ್ ಶಾ ವಿವಾದಾತ್ಮಕ ಹೇಳಿಕೆ ನೀಡಿದ್ದು, ಒಬ್ಬ ಅಶಿಕ್ಷಿತ ವ್ಯಕ್ತಿ ದೇಶಕ್ಕೆ ಹೊರೆ. ಆತನಿಗೆ ಸಂವಿಧಾನ ಹಕ್ಕುಗಳು ಹಾಗೂ ಕರ್ತವ್ಯದ ಬಗ್ಗೆ ಅರ್ಥವಾಗುವುದಿಲ್ಲ. ಇಂತಹ ವ್ಯಕ್ತಿ ಹೇಗೆ ಉತ್ತಮ ನಾಗರಿಕನಾಗಲು ಸಾಧ್ಯ,? ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಮೋದಿ ಸಿಎಂ ಆಗಿದ್ದ ಸಂದರ್ಭದಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಉಲ್ಲೇಖಿಸಿದ ಅಮಿತ್ ಶಾ 'ಆ ಸಮಯದಲ್ಲಿ ಶಿಕ್ಷಣವನ್ನು ಅರ್ಧದಲ್ಲಿಯೇ ಕೈಬಿಡುವ ಸಮಸ್ಯೆ ದೊಡ್ಡದಿತ್ತು ಹೀಗಾಗಿ ಅವರು ದಾಖಲಾತಿ ಅಭಿಯಾನವನ್ನು ಹಬ್ಬದಂತೆ ಮಾಡಿ, ಇದನ್ನು ಶೇ100ರಷ್ಟು ಸಾಧಿಸಿದರು. ಹೀಗಾಘಿ ಅವರೊಬ್ಬ ಪ್ರಜಾಪ್ರಭುತ್ವವಾದಿ ನಾಯಕ" ಎಂದು ಬಣ್ಣಿಸಿದ್ದಾರೆ.

Latest Videos
Follow Us:
Download App:
  • android
  • ios