ಆಧಾರ್ ಅಪ್‌ಡೇಟ್ ದಿನಾಂಕ ವಿಸ್ತರಿಸಿದ UIDAI; ವಿಳಾಸ ಬದಲಿಸುವ ವಿಧಾನ ಇಲ್ಲಿದೆ ನೋಡಿ
UIDAI ಆಧಾರ್ ಕಾರ್ಡ್ ಅಪ್‌ಡೇಟ್ ದಿನಾಂಕವನ್ನು ಜೂನ್ 14, 2025 ರವರೆಗೆ ವಿಸ್ತರಿಸಿದೆ. ಮೈ ಆಧಾರ್ ಪೋರ್ಟಲ್‌ನಲ್ಲಿ ಉಚಿತವಾಗಿ ಆನ್‌ಲೈನ್‌ನಲ್ಲಿ ವಿವರಗಳನ್ನು ನವೀಕರಿಸಬಹುದು. ಆಫ್‌ಲೈನ್ ನವೀಕರಣಕ್ಕೆ ₹50 ಶುಲ್ಕ ವಿಧಿಸಲಾಗುತ್ತದೆ.
ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (Unique Identification Authority of India) ಆಧಾರ್ ಕಾರ್ಡ್ ಅಪ್‌ಡೇಟ್ ಮಾಡುವ ದಿನಾಂಕವನ್ನು ಜೂನ್ 14, 2025ರವರೆಗೆ ವಿಸ್ತರಣೆ ಮಾಡಿದೆ. ಈ ಸೇವೆಯು ಮೈ ಆಧಾರ್ ಪೋರ್ಟಲ್‌ನಲ್ಲಿ ಪ್ರತ್ಯೇಕವಾಗಿದ್ದು, ಆರಂಭದಲ್ಲಿ ನವೀಕರಣವನ್ನು ಡಿಸೆಂಬರ್ 14, 2024ಕ್ಕೆ ಅಂತ್ಯವೆಂದು ನಿಗಧಿ ಮಾಡಲಾಗಿತ್ತು. ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೇ ಸಾರ್ವಜನಿಕರು ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಿಕೊಳ್ಳಬಹುದಾಗಿದೆ.
15ನೇ ಜೂನ್ 2025ರವರೆಗೆ ಸಮೀಪದ ಆಧಾರ್ ಕೇಂದ್ರಕ್ಕೆ ತೆರಳಿ ಹೆಸುರ, ವಿಳಾಸ ಸೇರಿದಂತೆ ಮತ್ತಿತ್ತರ ವಿಷಯಗಳನ್ನು ಅಪ್‌ಡೇಟ್ ಮಾಡಿಕೊಳ್ಳಬಹುದು. ಆಫ್‌ಲೈನ್ ಸೇವೆಗಾಗಿ ಜನರು 50 ರೂಪಾಯಿ ಪಾವತಿಸಬೇಕಾಗುತ್ತದೆ. ಆಧಾರ್ ಪೋರ್ಟಲ್‌ಗೆ ಲಾಗ್‌ಇನ್ ಆಗುವ ಮೂಲಕ ಆನ್‌ಲೈನ್‌ನಲ್ಲಿಯೂ ವಿಳಾಸ ಬದಲಿಸಿಕೊಳ್ಳಬಹುದು.
ಆನ್‌ಲೈನ್ ಲಾಗಿನ್ ಆಗೋದು ಹೇಗೆ?
- ಆಧಾರ್ ಸಂಖ್ಯೆಗೆ ನೋಂದಾಯಿತ ಮೊಬೈಲ್‌ಗೆ ಬರುವ ಒಟಿಪಿ ಮೂಲಕ ಲಾಗಿನ್ ಮಾಡಿಕೊಳ್ಳಬೇಕು.
- ನಂತರ ಮಾನ್ಯವಾಗಿರುವ PoI ಮತ್ತು PoA ದಾಖಲೆಗಳನ್ನು ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ.
- ಟ್ರ್ಯಾಕಿಂಗ್‌ಗಾಗಿ 14-ಅಂಕಿಯ ನವೀಕರಣ ವಿನಂತಿ ಸಂಖ್ಯೆಯನ್ನು (URN) ಸ್ವೀಕರಿಸಲು ನವೀಕರಣ ವಿನಂತಿಯನ್ನು ಸಲ್ಲಿಸಲಾಗುತ್ತಿದೆ.
ವಿಳಾಸ ನವೀಕರಣ ಮಾಡುವ ವಿಧಾನಗಳು
- ಮೊದಲು ಆಧಾರ್ ಸೆಲ್ಫ್ ಸರ್ವಿಸ್ ಅಪ್‌ಡೇಟ್ ಪೋರ್ಟಲ್‌ಗೆ ಭೇಟಿ ನೀಡಬೇಕು
- ಆಧಾರ್ ನಂಬರ್, ರಿಜಿಸ್ಟರ್ ಮೊಬೈಲ್ ನಂಬರ್ ಹಾಗೂ ಒಟಿಪಿ ಸಂಖ್ಯೆ ಬಳಸಿ ಪೋರ್ಟಲ್ ಲಾಗಿನ್ ಆಗಬೇಕು..
- ನಂತರ ಅಲ್ಲಿರುವ Proceed to Update Address ಮೇಲೆ ಕ್ಲಿಕ್ ಮಾಡಬೇಕು.
- ನಂತರ ಇಲ್ಲಿರುವ ಹೊಸ ಅಡ್ರೆಸ್ ಮತ್ತು ಪ್ರೂಫ್ ದಾಖಲೆಯನ್ನು ಅಪ್ಲೋಡ್ ಮಾಡಬೇಕು.
- ಈಗ ಸಬ್ಮಿಟ್ ಮಾಡಿದ್ರೆ URN ಸಂಖ್ಯೆ ಜನರೇಟ್ ಆಗುತ್ತದೆ. ಈ ಸಂಖ್ಯೆ ಮೂಲಕ ನಿಮ್ಮ ಅಪ್‌ಡೇಟ್ ಸ್ಟೇಟಸ್ ಟ್ರ್ಯಾಕ್ ಮಾಡಬಹುದು. ಒಮ್ಮೆ ಪ್ರಕ್ರಿಯೆಗೊಳಿಸಿದ ನಂತರ ನವೀಕರಿಸಿದ ಆಧಾರ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು.
ಇದನ್ನೂ ಓದಿ: Bride Google Search: ಮದುವೆ ಬಳಿಕ ಯುವತಿಯರು ಗೂಗಲ್‌ನಲ್ಲಿ ಏನು ಸರ್ಚ್ ಮಾಡ್ತಾರೆ?