ಭೋಪಾಲ್ (ನ. 05) ಚೀನಾ ಪಟಾಕಿಗಳ ಮಾರಾಟ  ಮತ್ತು ಬಳಕೆ ಮಾಡಿದರೆ ಎರಡು ವರ್ಷ ಕಾಲ ಜೈಲು ಶೀಕ್ಷೆ ಅನುಭವಿಸಬೇಕಾಗುತ್ತದೆ. ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಖಡ್ ಆದೇಶ ನೀಡಿದ್ದು ಚೀನಾ ಪಟಾಕಿ ಮಾರಾಟಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸ್ಫೋಟಕ ನಿಯಂತ್ರಣ ಕಾಯ್ದೆಯಲ್ಲಿ ಇದು ಅಪರಾಧವಾಗಲಿದೆ.  ಗೃಹ ಸಚಿವ ನರೋತ್ತಮ್ ಮಿಶ್ರಾ ಪಾಲ್ಗೊಂಡಿದ್ದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 

ಕರ್ನಾಟಕದಲ್ಲಿ ಪಟಾಕಿ ಮಾರಾಟ; ಈ ಎಲ್ಲ ಷರತ್ತುಗಳು ಅನ್ವಯಿಸುತ್ತವೆ

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೇಶ್ ರಾಜೋರಾ ಈ ಬಗ್ಗೆ ಮಾಹಿತಿ ನೀಡಿ , ಸ್ಫೋಟಕ ನಿಷೇಧ ಕಾಯಿದೆಯ  9ಬಿ   ಜೈಲು ಶೀಕ್ಷೆಯ ಬಗ್ಗೆ ಹೇಳುತ್ತದೆ. ಚೀನಾ ಮಾದರಿ ಪಟಾಕಿ ಮಾರಿದರೆ ಸೀದಾ ಜೈಲಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಗೃಹ ಇಲಾಖೆ ಜಿಲ್ಲಾ ಆಡಳಿತಗಳಿಗೆ ನಿರ್ದೇಶನ ನೀಡಿದ್ದು ಚೀನಾ ಮಾದರಿ ಪಟಾಕಿ ಮಾರಾಟಕ್ಕೆ ಲೈಸನ್ಸ್ ನೀಡದಂತೆ ತಿಳಿಸಿದೆ.  ಕೊರೋನಾ ಕಾರಣಕ್ಕೆ ಈ ಸಾರಿ ದೀಪಾವಳಿಗೆ ಪಟಾಕಿ ನಿಷೇಧ ಮಾಡಬೇಕು ಎಂಬ ಮಾತು ರಾಜ್ಯದಲ್ಲಿಯೂ ಕೇಳಿಬಂದಿದ್ದು  ರಾಜ್ಯ ಸರ್ಕಾರ ಇನ್ನುವರೆಗೆ ಯಾವುದೆ ಕ್ರಮ ತೆಗೆದುಕೊಂಡಿಲ್ಲ.