Asianet Suvarna News Asianet Suvarna News

ವಿಶ್ವದಲ್ಲಿ ಯಾರೂ ಮಾಡದ ಕೆಲಸ ಮಾಡಿ ದಾಖಲೆ ಬರೆದ ಎರಡು ವರ್ಷದ ಬಾಲಕ

ಅತ್ಯಂತ ಚಿಕ್ಕ ವಯಸ್ಸಿನ ಬಾಲಕನ ಹೆಸರು ವಿಶ್ವದಾಖಲೆಯಲ್ಲಿ ಸೇರಿದೆ. ದೊಡ್ಡವರು ಮಾಡಲಾಗದ ಕೆಲಸವನ್ನು ಈ ಪುಟ್ಟ ಬಾಲಕ ಮಾಡಿದ್ದಾರೆ. ಇದಕ್ಕಾಗಿ ಅವನು ನಡೆಸಿದ ತಯಾರಿ ಕೂಡ ಕಡಿಮೆ ಇರಲಿಲ್ಲ.  
 

Two Year Old Boy Makes World Record by climing mountains  roo
Author
First Published Jan 29, 2024, 11:11 AM IST

ಒಂದೆರಡು ವರ್ಷದ ಮಕ್ಕಳಿಗೆ ಏನೂ ತಿಳಿಯೋದಿಲ್ಲ. ಅವರು ಆಟವಾಡ್ತಾ, ಅಳ್ತಾ ಕಾಲ ಕಳೆಯುವ ಸಮಯ ಇದು. ಆದ್ರೆ ಈಗಿನ ಕಾಲದಲ್ಲಿ ಚಿಕ್ಕ ವಯಸ್ಸಿನ ಮಕ್ಕಳು ತಾವಯ ಯಾರಿಗೂ ಕಡಿಮೆ ಇಲ್ಲ ಎಂಬುದನ್ನು ತೋರಿಸ್ತಿದ್ದಾರೆ. ಅತ್ಯಂತ ಚಿಕ್ಕ ವಯಸ್ಸಿನ ಮಗು ಸುಂದರವಾಗಿ ಹಾಡೋದನ್ನು ಅಥವಾ ಅಧ್ಬುತ ಎನ್ನುವಂತೆ ನಟಿಸೋದನ್ನು ನಾವು ನೋಡಿದ್ದೇವೆ. ಆದ್ರೆ ಈಗ ನಾವು ಹೇಳಲು ಹೊರಟಿರುವ ಮಗು ಗಿನ್ನಿಸ್ ದಾಖಲೆ ಬರೆದಿದೆ. ಅದೂ ತನ್ನ ಎರಡು ವರ್ಷದಲ್ಲಿ. ಆತ ಮಾಡಿದ ಸಾಧನೆಗೆ ಆತನ ಪಾಲಕರ ಪಾಲು ದೊಡ್ಡದಿದೆ. 

ಮಕ್ಕಳಿಗೆ ಎರಡು –ಮೂರು ವರ್ಷಗಳಾಗೋವರೆಗೆ ಅನೇಕ ಪಾಲಕರು ಅವರನ್ನು ಪ್ರವಾಸ (Trip) ಕ್ಕೆ ಇರಲಿ ಮಾರುಕಟ್ಟೆ (Market) ಗೆ ಕರೆದುಕೊಂಡು ಹೋಗೋದಿಲ್ಲ. ಅವರಿಗೆ ನೆಗಡಿ, ಕೆಮ್ಮ, ಜ್ವರದಂತಹ ಸಮಸ್ಯೆ ಕಾಡಿದ್ರೆ ಎನ್ನುವ ಭಯ ಪಾಲಕರದ್ದು. ಆದ್ರೆ ಈ ಮಗು ತನ್ನ ಎರಡನೇ ವಯಸ್ಸಿನಲ್ಲಿ ಪಾಲಕರ ನೆರವಿನಿಂದ ಪರ್ವತ ಹತ್ತಿದೆ. ಎರಡು ವರ್ಷದ ಮಗು ಟಾಟ್ ಕಾರ್ಟರ್ ವಿಶ್ವದ ಅತ್ಯಂತ ಕಿರಿಯ ಪರ್ವತಾರೋಹಿ ಎಂಬ ಪ್ರಶಸ್ತಿಯನ್ನು ಗೆದ್ದಿದ್ದಾನೆ. 

ಸದ್ಗುರುಗಳಿಂದ ದೀಕ್ಷೆ ಪಡೆದ ನಟಿ ತಮನ್ನಾ ಭಾಟಿಯಾ ಈಗೇನ್ ಮಾಡ್ತಿದಾರೆ, ಅವ್ರೇ ಹೇಳ್ತಾರೆ ಕೇಳಿ!

ಎವರೆಸ್ಟ್ (Everest) ಬೇಸ್ ಕ್ಯಾಂಪ್ ತಲುಪಿದ ಅತ್ಯಂತ ಕಿರಿಯ ಮಗು ಟಾಟಾ ಕಾರ್ಟರ್. ಇದಕ್ಕಿಂತ ಮೊದಲು ಜೆಕ್ ರಿಪಬ್ಲಿಕ್ ಎಂಬ 4 ವರ್ಷದ ಮಗು ಎವರೆಸ್ಟ್ ನ ಬೇಸ್ ಕ್ಯಾಂಪ್ ತಲುಪಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತ್ತು. ಟಾಟ್ ಕಾರ್ಟರ್ ಬ್ರಿಟನ್ ಮೂಲದವನು. ಅಕ್ಟೋಬರ್ 25, 2023 ರಂದು ನೇಪಾಳದ ದಕ್ಷಿಣ ಸೈಟ್‌ ನ ನೆಲದಿಂದ 17598 ಅಡಿ ಎತ್ತರದಲ್ಲಿರುವ ಬೇಸ್ ಕ್ಯಾಂಪ್‌ಗೆ ಟಾಟಾ ಕಾರ್ಟರ್ ಪಾಲಕರ ಜೊತೆ ತಲುಪಿದ್ದಾನೆ.  31 ವರ್ಷದ ತಂದೆ ರಾಸ್‌ ಹಾಗೂ 31 ವರ್ಷದ ತಾಯಿ ಜೇಡ್ ಈ ಪರ್ವತಾರೋಹಣದಲ್ಲಿ ಟಾಟಾ ಕಾರ್ಟರ್ ಜೊತೆಗಿದ್ದರು. ಟಾಟಾ ಕಾರ್ಟರ್, ತಂದೆ ಬೆನ್ನಿನ ಮೇಲೆ ಕುಳಿತು ಟ್ರ್ಯಾಕ್ ಅನ್ನು ಪೂರ್ಣಗೊಳಿಸಿದ್ದಾನೆ.

ರಾಸ್ ಕುಟುಂಬ ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ವಾಸವಾಗಿದ್ದಾರೆ.  ಇಡೀ ಕುಟುಂಬ ಒಂದು ವರ್ಷದ ಏಷ್ಯಾ ಪ್ರವಾಸದಲ್ಲಿದೆ. ರಾಸ್, ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ವ್ಯವಸ್ಥಾಪಕರಾಗಿ ಕೆಲಸ ಮಾಡ್ತಿದ್ದಾರೆ. ಅವರು ಪ್ರವಾಸದ ವೇಳೆ ಶ್ರೀಲಂಕಾ, ನೇಪಾಳ ಮತ್ತು ಮಾಲ್ಡೀವ್ಸ್ ಮತ್ತು ಇತರ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದರು. ಪರ್ವತಾರೋಹಣ ಮಾಡಲು ಅವರು ತಜ್ಞರಿಂದ ಸಂಪೂರ್ಣ ತರಬೇತಿ ಪಡೆದಿದ್ದರು. ಟಾಟಾ ಕಾರ್ಟರ್ ಗೂ ತರಬೇತಿ ನೀಡಿದ್ದರು. ಅಲ್ಲದೆ ಟಾಟಾನ  ಆರೋಗ್ಯವನ್ನು ತಜ್ಞರು ಪರಿಶೀಲನೆ ನಡೆಸುತ್ತಿದ್ದರು. ಮಕ್ಕಳ ತಜ್ಞರಿಂದ ವಿಶೇಷ ತಪಾಸಣೆ ಮಾಡಲಾಗ್ತಿತ್ತು. ಅಲ್ಲದೆ ರಕ್ತ ಪರೀಕ್ಷೆ ಕೂಡ ನಡೆಯುತ್ತಿತ್ತು. ಮೇಲಿರುವ ಗ್ರಾಮವೊಂದಕ್ಕೆ ತಲುಪಿದ ತಕ್ಷಣ ಆತನ ಆರೋಗ್ಯ ಪರೀಕ್ಷೆ ನಡೆದಿತ್ತು. ಟಾಟಾನ ಆರೋಗ್ಯದಲ್ಲಿ ವಿಶೇಷ ಬದಲಾವಣೆ ಕಂಡು ಬಂದಿರಲಿಲ್ಲ. ಉಸಿರಾಡಲು ಸ್ವಲ್ಪ ಕಷ್ಟವಾಗಿತ್ತು, ನಂತ್ರ ಸರಿಹೋಯ್ತು ಎಂದು ರಾಸ್ ಹೇಳಿದ್ದಾರೆ.

ಕಷ್ಟದಲ್ಲಿದ್ದ ಆನೆಗಳ ನಡುವೆ ಅರಳಿದ ಸ್ನೇಹ: ಇಂತ ಮೂಕ ಪ್ರೀತಿಗೆ ಏನೆಂದು ಹೆಸರಿಡಬಹುದು?

ಕಠ್ಮಂಡು ತಲುಪಿದ 24 ಗಂಟೆಗಳಲ್ಲಿ, ಅವರು ಪರ್ವತ ಏರಲು ಶುರು ಮಾಡಿದ್ದರು. ಈ ಬಗ್ಗೆ ಯಾವುದೇ ಹೆಚ್ಚಿನ ಆಲೋಚನೆ ಮಾಡಲಿಲ್ಲ. ಯಾಕೆಂದ್ರೆ ನಾವು ಪರ್ವತ (Mountain) ಏರಲು ಎಲ್ಲ ಸಿದ್ಧತೆ ಮಾಡಿಕೊಂಡಿದ್ದೆವು.  ಪ್ರತಿಯೊಬ್ಬರೂ ಉಸಿರಾಟದ ವ್ಯಾಯಾಮವನ್ನು (Breathing Exercie) ನಿಯಮಿತವಾಗಿ ಮಾಡ್ತಿದ್ದೆವು. ಕಾರ್ಟರ್ ಸೇರಿದಂತೆ ಎಲ್ಲರೂ ಐಸ್ ಬಾತ್ (Ice Bath) ಮಾಡ್ತಾ ಇದ್ವಿ. ಮಂಜುಗಡ್ಡೆ (Burf) ನೀರಿನಲ್ಲಿ ಸ್ನಾನ ಮಾಡುವುದನ್ನೂ ನಾವು ಅಭ್ಯಾಸ ಮಾಡಿಕೊಂಡಿದ್ದರಿಂದ ನಮಗೆ ಇದು ಕಷ್ಟವಾಗಲಿಲ್ಲ. ಅಲ್ಲದೆ ನಮ್ಮ ಜೊತೆ ಜಾಕೆಟ್ (Jocket) ಹಾಗೂ ಟೆಂಟ್ (tent) ತೆಗೆದುಕೊಂಡು ಹೋಗಿದ್ದೆವು. ಹಾಗಾಗಿ ಚಳಿಯಿಂದ ಸಂಪೂರ್ಣ ರಕ್ಷಣೆ ನಮಗೆ ಸಿಕ್ಕಿತ್ತು. ವಿಶ್ರಾಂತಿ ಪಡೆಯಲು ಬೆಚ್ಚನೆಯ ವ್ಯವಸ್ಥೆ ಆಗಿತ್ತು ಎಂದು ರಾಸ್ ಹೇಳಿದ್ದಾರೆ. 
 

Follow Us:
Download App:
  • android
  • ios