Asianet Suvarna News Asianet Suvarna News

ಕೊರೋನಾ ಅಪಾಯ: ಇನ್ನೂ 40 ಕೋಟಿ ಜನ ಸೋಂಕಿನ ಅಪಾಯದಲ್ಲಿ!

* ದೇಶದ ಶೇ.68ರಷ್ಟು ಜನರಲ್ಲಿ ಕೊರೋನಾ ಪ್ರತಿಕಾಯ ಪತ್ತೆ

* ಇನ್ನೂ 40 ಕೋಟಿ ಆತಂಕ

* ಹೀಗಾಗಿ ಇನ್ನೂ 40 ಕೋಟಿ ಜನ ಸೋಂಕಿನ ಅಪಾಯದಲ್ಲಿ

Two thirds of Indians have Covid antibodies 40 crore still at risk ICMR pod
Author
Bangalore, First Published Jul 21, 2021, 9:27 AM IST

ನವದೆಹಲಿ(ಜು.21): ದೇಶಾದ್ಯಂತ ಸೋಂಕಿನ ಪ್ರಮಾಣ ದಾಖಲೆಯ ಪ್ರಮಾಣದಲ್ಲಿ ಇಳಿದಿರುವ ಹೊತ್ತಿನಲ್ಲೇ, ದೇಶದಲ್ಲಿನ 6 ವರ್ಷ ಮೇಲ್ಪಟ್ಟಶೇ.67.6ರಷ್ಟುಜನರಲ್ಲಿ ಕೋವಿಡ್‌ ಪ್ರತಿಕಾಯಗಳು ಕಂಡುಬಂದಿವೆ. ಆದರೆ ಇನ್ನೂ 40 ಕೋಟಿ ಜನರು ಇದರ ವ್ಯಾಪ್ತಿಯಿಂದ ಹೊರಗಿರುವ ಕಾರಣ, ಅವರ ಎಚ್ಚರವಾಗಿರಬೇಕಾದ ಅಗತ್ಯವಿದೆ. ಈ ಹಂತದಲ್ಲಿ ಕೋವಿಡ್‌ ಮಾರ್ಗಸೂಚಿ ಉಲ್ಲಂಘನೆಯ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶವಿಲ್ಲ ಐಸಿಎಂಆರ್‌ ಸಮೀಕ್ಷೆ ಹೇಳಿದೆ.

ಜೂನ್‌ ಮತ್ತು ಜುಲೈ ತಿಂಗಳಲ್ಲಿ ಐಸಿಎಂಆರ್‌ ದೇಶದ 21 ರಾಜ್ಯಗಳ 70 ಜಿಲ್ಲೆಗಳ 28975 ಜನರನ್ನು ಸೆರೋಸರ್ವೇ (ರಕ್ತದಲ್ಲಿನ ಸೋಂಕಿನ ಅಂಶ ಪತ್ತೆ)ಗೆ ಒಳಪಡಿಸಿತ್ತು. ಇದನ್ನು ದೇಶವ್ಯಾಪಿ ಆಧರಿಸಿ ನೋಡಿದಾಗ, ಒಟ್ಟು ಜನಸಂಖ್ಯೆಯ ಶೇ.67.6ರಷ್ಟುಜನರಲ್ಲಿ ಸೋಂಕು ನಿರೋಧಕ ಶಕ್ತಿ ಉತ್ಪತ್ತಿಯಾಗಿರುವುದು ಕಂಡುಬಂದಿದೆ. ಆದರೆ ಈ ವ್ಯಾಪ್ತಿಯಿಂದ ಹೊರಗಿರುವ 40 ಕೋಟಿ ಜನರಿಗೆ ಸೋಂಕಿನ ಅಪಾಯ ಇದ್ದೇ ಇದೆ. ಹೀಗಾಗಿ ಅವರೆಲ್ಲಾ ಎಚ್ಚರದಿಂದ ಇರಬೇಕು. ಕೋವಿಡ್‌ ಇನ್ನೂ ಹೋಗದಿರುವುದರಿಂದ ಯಾವುದೇ ಸಾಮಾಜಿಕ, ಧಾರ್ಮಿಕ, ರಾಜಕೀಯ ಸಮಾರಂಭಗಳು ಹಾಗೂ ಅನಗತ್ಯ ಪ್ರಯಾಣಗಳನ್ನು ಸ್ಥಗಿತಗೊಳಿಸಬೇಕು. ಸಂಪೂರ್ಣ ಲಸಿಕೆ ಪಡೆದಿದ್ದರೆ ಮಾತ್ರ ಪ್ರಯಾಣ ಮಾಡಿ ಎಂದು ಸಮೀಕ್ಷಾ ವರದಿ ಹೇಳಿದೆ.

ಇದೇ ವೇಳೆ ಈ ಪೈಕಿ 85 ಶೇ. ಆರೋಗ್ಯ ಕಾರ್ಯಕರ್ತರಲ್ಲಿ ಕೋವಿಡ್‌ ಪ್ರತಿಕಾಯಗಳು ಪತ್ತೆಯಾಗಿದೆ. ಜೊತೆಗೆ ಆರೋಗ್ಯ ಕಾರ್ಯಕರ್ತರಲ್ಲಿ ಮೂರನೇ ಒಂದರಷ್ಟುಮಂದಿ ಇನ್ನೂ ಲಸಿಕೆ ಪಡೆದುಕೊಂಡಿಲ್ಲ ಎಂದು ವರದಿ ಹೇಳಿದೆ.

Follow Us:
Download App:
  • android
  • ios