* ಗಸ್ತು ಕಾರ್ಯಾಚರಣೆಯಲ್ಲಿದ್ದ ಸೈನಿಕರ ಬಲಿದಾನ* ಜಮ್ಮು ಮತ್ತು ಕಾಶ್ಂಇರದಲ್ಲಿ ನಿಗೂಢ ಸ್ಫೋಟ* ಸೇನಾ ಅಧಿಕಾರಿ ಮತ್ತು ಯೋಧ ಪ್ರಾಣ ತ್ಯಾಗ* ಉಗ್ರರ ಒಳನುಸುಳುವಿಕೆ ಅನುಮಾನ

ಶ್ರೀನಗರ (ಅ. 31) ಜಮ್ಮು ಮತ್ತು ಕಾಶ್ಮೀರದಲ್ಲಿ(Jammu And Kashmir) ಇಬ್ಬರು ಸೈನಿಕರು (Indian Army personnel)ಹುತಾತ್ಮರಾಗಿದ್ದಾರೆ. ನಿಗೂಢ ಸ್ಫೋಟದಲ್ಲಿ (explosion) ಭಾರತೀಯ ಸೇನೆಯ ಇಬ್ಬರು ಸೈನಿಕರು ಪ್ರಾಣ ತ್ಯಾಗ ಮಾಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (LOC) ಬಳಿ ಶನಿವಾರ ನಿಗೂಢ ಸ್ಫೋಟವೊಂದು ಸಂಭವಿಸಿದೆ. ಸ್ಫೋಟದಲ್ಲಿ ಸೇನಾ ಅಧಿಕಾರಿ ಮತ್ತು ಯೋಧ ಹುತಾತ್ಮರಾಗಿದ್ದಾರೆ.

ಚೀನಾ ಏಕಪಕ್ಷೀಯ ನಿರ್ಧಾರಕ್ಕೆ ವಿರೋಧ

ನೌಶೇರಾ ಸೆಕ್ಟರ್‌ನ ಕಲಾಲ್ ಪ್ರದೇಶದಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಶಂಕೆ ಈ ಮೊದಲಿನಿಂದಲೂ ಇತ್ತು.ಸೇನಾಪಡೆಯು ಗಸ್ತು ಕರ್ತವ್ಯದಲ್ಲಿದ್ದಾಗ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಲೆಫ್ಟಿನೆಂಟ್ ಸೇರಿದಂತೆ ಇಬ್ಬರು ಸೇನಾ ಸಿಬ್ಬಂದಿ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಹತ್ತಿರದ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಿದರೂ ಪ್ರಯೋಜನವಾಗಲಿಲ್ಲ.

ಲೆಫ್ಟಿನೆಂಟ್ ರಿಷಿ ಕುಮಾರ್ ಮತ್ತು ಸೆಪೆಯೋ ಮಂಜಿತ್ ಸಿಂಗ್ ಪ್ರಾಣ ತ್ಯಾಗ ಮಾಡಿದ್ದಾರೆ. ಗಸ್ತು ತಂಡವನ್ನು ಗುರಿಯಾಗಿಸಲು ಭಯೋತ್ಪಾದಕರು ಸುಧಾರಿತ ಸ್ಫೋಟಕ ಸಾಧನ ಬಳಸಿರಬಹುದು ಎಂದು ಹೇಳಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಒಂದು ಹಂತದ ಕಂಟ್ರೋಲ್ ಗೆ ಬಂದಿತ್ತು. ಈ ನಡುವೆ ಸ್ಫೋಟ ಸಂಭವಿಸಿದ್ದು ಸೇನಾ ಕಾರ್ಯಾಚರಣೆ ನಡೆಯುತ್ತಲೇ ಇದೆ. 

Scroll to load tweet…