ಬೇಕಿತ್ತಾ ಪ್ರೇಮಿಗಳನ್ನು ಒಂದಾಗಿಸೋ ಕೆಲಸ ಕಳ್ಕೊಂಡಿದ್ದು ಬರೋಬ್ಬರಿ 17 ಲಕ್ಷ

ಪ್ರೇಮಿಗಳಿಗೆ ಸಹಾಯ ಮಾಡಲು ಹೋಗಿ 17 ಲಕ್ಷ ರು. ದಂಡ ಕಟ್ಟುವ ಪರಿಸ್ಥಿತಿಗೆ ಸಹೋದರರಿಬ್ಬರು ಸಿಲುಕಿರುವ ಘಟನೆ ರಾಜಸ್ಥಾನದ ಬಾಢಮೇರ್‌ ಜಿಲ್ಲೆಯಲ್ಲಿ ನಡೆದಿದೆ. ಇಬ್ಬರು ಸಹೋದರು ತಮ್ಮ ಸಂಬಂಧಿಕರೊಬ್ಬರ ಮಗಳು ಪ್ರೀತಿಸುತ್ತಿದ್ದ ವಿಷಯ ತಿಳಿದು ಆಕೆ ಮನೆಯಿಂದ ಓಡಿ ಹೋಗಿ ಮದುವೆಯಾಗಲು ಸಹಾಯ ಮಾಡಿದ್ದರು.

ಈ ಸಹಾಯಕ್ಕೆ ಕೋಪಗೊಂಡ ಗ್ರಾಮದ ಮುಖಂಡರು ಅವರಿಬ್ಬರಿಗೆ ತಲಾ 17 ಲಕ್ಷ ರು. ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲವಾದರೆ ಸಾಮಾಜಿಕವಾಗಿ ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಹಾಕಿದ್ದಾರೆ. ಅವರು ಹೆದರಿ ಪೊಲೀಸ್‌ಗೆ ದೂರು ನೀಡಿದ್ದರಿಂದ ಗ್ರಾಮದ 5 ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಸೆಕ್ಸ್ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ : ಯುವಕ ಆತ್ಮಹತ್ಯೆ

ತಮ್ಮ ಸೋದರ ಸೋದರನ ಮಗಳು ಸ್ವಲ್ಪ ಸಮಯದ ಹಿಂದೆ ಪ್ರೇಮ ವಿವಾಹವಾಗಿ ಹೋದ ನಂತರ ಸಮುದಾಯ ಪಂಚಾಯತ್ ಯುವಕರಿಗೆ ದಂಡ ವಿಧಿಸಿತು. ಪಂಚಾಯಿತಿಯ ಸದಸ್ಯರು ಇಬ್ಬರು ಸಹೋದರರು ಆಕೆಯ ಪ್ರೇಮ ವಿವಾಹಕ್ಕೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದ್ದರು.

ಖಂಗರ್ ಸಿಂಗ್ ರಾಜ್‌ಪುರೋಹಿತ್ ಮತ್ತು ಅವರ ಸಹೋದರ ಗುರುವಾರ ಸಿವಾನಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅವರ ಸಮುದಾಯ ಪಂಚಾಯತ್ ತಲಾ 17 ಲಕ್ಷ ದಂಡ ವಿಧಿಸಿದೆ. ಅವರು ಪಾವತಿಸಲು ಸಾಧ್ಯವಾಗದ ಕಾರಣ ಅವರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದ್ದಾರೆ ಎಂದು ಯುವಕರು ಆರೋಪಿಸಿದ್ದಾರೆ.