Asianet Suvarna News Asianet Suvarna News

20 ವರ್ಷದ ಹಿಂದೆ 'ಕೃಷ್ಣ ನಗರಿ'ಗೆ ಬಂದ ಇಬ್ಬರು ಬಾಂಗ್ಲಾದೇಶಿಗರು ಅರೆಸ್ಟ್!

ಪೌರತ್ವ ಕಾಯ್ದೆ ಜಾರಿ| ಕಷ್ಣನ ಊರಿನಲ್ಲಿ ಇಬ್ಬರು ಬಾಂಗ್ಲಾ ನಿವಾಸಿಗರ ಬಂಧನ| ಸಾಧುಗಳಾಗಿ ಕೀರ್ತನೆ, ಭಜನೆ ಮಾಡಿಕೊಂಡಿದ್ದ ಅಕ್ರಮ ನಿವಾಸಿಗರು

Two Bangladeshi Nationals Arrested From Mathura
Author
Bangalore, First Published Jan 26, 2020, 1:24 PM IST
  • Facebook
  • Twitter
  • Whatsapp

ಮಥುರಾ[ಜ.26]: ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ಪೊಲೀಸರು ವೃಂದಾವನದಲ್ಲಿ ಕಳೆದ ಹಲವಾರು ವರ್ಷಗಳಿಂದ ಇಬ್ಬರು ಬಾಂಗ್ಲಾ ನಿವಾಸಿಗರನ್ನು ಅರೆಸ್ಟ್ ಮಾಡಿದ್ದಾರೆ. ಇವರು ಕೃಷ್ಣ ನಗರಿಯಲ್ಲಿ ಸಾಧುಗಳಾಗಿ ಕೀರ್ತನೆ, ಭಜನೆ ಹಾಡಿಕೊಂಡಿದ್ದರು.ಇನ್ನು ಇವರಲ್ಲಿ ಒಬ್ಬನ ಬಳಿ ಇದ್ದ ಪಾಸ್ ಪೋರ್ಟ್ ಕೂಡಾ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಅನ್ವಯ ಅರೆಸ್ಟ್ ಮಾಡಲಾದ ವಿದೇಶೀ ನಾಗರಿಕರಲ್ಲಿ ಒಬ್ಬನ ಹೆಸರು ಮಾನವ್ ಆಗಿದ್ದು, ಈತ ಮಥುರಾದಲ್ಲಿ ಕಳೆದ 8 ವರ್ಷಗಳಿಂದ ವಾಸಿಸುತ್ತಿದ್ದಾನೆನ್ನಲಾಗಿದೆ. ಇನ್ನು ಎರಡನೆಯವನಾತನ ಹೆಸರು ಕೇಶವ್ ಆಗಿದ್ದು, ಆತ ಕಳೆದ 7 ವರ್ಷಗಳಿಂದ ಇಲ್ಲೇ ಇದ್ದಾನೆ. 

ಇದಕ್ಕೂ ಮುನ್ನ ಅವರು ಬಾಲ್ಯದಲ್ಲಿ 20 ವರ್ಷದ ಹಿಂದೆ ಮಥುರಾಗೆ ಬಂದಿದ್ದರು. ಆದರೆ 7 ವರ್ಷದಿಂದ ವರು ತಮ್ಮ ದೇಶಕ್ಕೆ ತೆರಳದೇ ಇಕಲ್ಲೇ ಸಾಧುಗಳಾಗಿ ಉಳಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರನ್ನೂ ಗೌಪ್ಯ ಮಾಹಿತಿ ಮೇರೆಗೆ ಬಂಧಿಸಿದ್ದು, ಈಗಾಗಲೇ ಇವರು ಗುರುತು ಇಲ್ಲಿ ಉಳಿದುಕೊಳ್ಳಲು ಬೇಕಾಗಿರುವ ಆಧಾರ್ ಕಾರ್ಡ್ ಮೊದಲಾದ ದಾಖಲೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. 

ಇಬ್ಬರನ್ನೂ ನ್ಯಾಯಾಲಯಕ್ಕೆ ಪ್ರಸ್ತುತಪಡಿಸಿದ ಬಳಿಕ ಜೈಲಿಗೆ ಕಳುಹಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Follow Us:
Download App:
  • android
  • ios