ಗುಜರಾತ್(ಜ.20):  ಗುಜರಾತ್ ಸರ್ಕಾರ ದಿಢೀರನೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ. ಮುಖ್ಯಮಂತ್ರಿ ವಿಜಯ್ ರೂಪಾನಿ, ಡ್ರ್ಯಾಗನ್ ಹಣ್ಣ ಹಾಗೂ ಬಾಳೆ ಹಣ್ಣು ಕೂಡ ಟ್ರೆಂಡ್ ಆಗುತ್ತಿದೆ. ಇದಕ್ಕೆ ಕಾರಣ ಗುಜರಾತ್ ಸರ್ಕಾರದ ನಿರ್ಧಾರ.  ಡ್ರ್ಯಾಗನ್ ಹಣ್ಣಿನ ಹೆಸರನ್ನು ಕಮಲಂ ಎಂದು ಮರುನಾಮಕರಣ ಮಾಡಲಾಗಿದೆ. ಇದೇ ನಿರ್ಧಾರ ಟ್ರೋಲ್ ಆಗಿದೆ.

ನಗರ ಆಯ್ತು ಇದೀಗ ಡ್ರ್ಯಾಗನ್ ಫ್ರೂಟ್ ಹೆಸರು ಬದಲಿಸಿದ ಗುಜರಾತ್ ಸರ್ಕಾರ!

ಡ್ರ್ಯಾಗನ್ ಹೆಸರು ಚೀನಾ ದೇಶವನ್ನು ಕರೆಯುವ ಹೆಸರಾಗಿದೆ. ಚೀನಾದೊಂದಿಗೆ ಡ್ರ್ಯಾಗನ್ ಹೆಸರು ಥಳಕು ಹಾಕಿಕೊಂಡಿದೆ. ಇನ್ನು ಡ್ರ್ಯಾಗನ್ ಹಣ್ಣಿನ ಆಕೃತಿ ಕಮಲದ ರೀತಿ ಇದೆ. ಹೀಗಾಗಿ ಇದಕ್ಕೆ ಕಮಲಂ ಹಣ್ಣು ಎಂದು ಹೆಸರಿಡುವುದಾಗಿ ವಿಜಯ್ ರೂಪಾನಿ ಹೇಳಿದ್ದಾರೆ. ಆಕೃತಿ ನೋಡಿ ಹೆಸರಿಡುವುದಾದರೆ, ಬಾಳೆ ಹಣ್ಣಿಗೆ ಯಾವ ಹೆಸರಿಡುತ್ತೀರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಡ್ರ್ಯಾಗನ್ ಹೆಸರಿನಲ್ಲಿ ಬಂದಿರುವ ಹಾಲಿವುಡ್ ಸೇರಿದಂತೆ ಇತರ ಸಿನಿಮಾಗಳ ಹೆಸರನ್ನು ಇದೀಗ ಕಮಲಂ ಎಂದು ಮರುನಾಮಕರ ಮಾಡಿ ಮೇಮ್ಸ್ ಮಾಡಲಾಗಿದೆ.