Asianet Suvarna News Asianet Suvarna News

ಮಸ್ಕ್‌ ಕಿತಾಪತಿಗೆ ಟ್ವಿಟ್ಟರ್‌ ಸೆಲೆಬ್ರಿಟಿ ಪಟ್ಟ ಕಳೆದುಕೊಂಡ ಗಣ್ಯರು: ಶಾರೂಖ್‌, ಯೋಗಿ ಸೇರಿ ಹಲವರ ಬ್ಲೂಟಿಕ್ ಮಾಯ

ಟ್ವಿಟ್ಟರ್‌ನ್ನು ಖರೀದಿಸಿದ ಬಳಿಕ ಒಂದಲ್ಲ ಒಂದು ಹೊಸ ಪ್ರಯೋಗ ಮಾಡುತ್ತಿರುವ ಉದ್ಯಮಿ ಎಲಾನ್ ಮಸ್ಕ್‌ ಈಗ ಸೆಲೆಬ್ರಿಟಿಗಳ ಬ್ಲೂಟಿಕ್ ತೆಗೆದು ಹಾಕುವ ಮೂಲಕ ಟ್ವಿಟ್ಟರ್‌ ಬಳಕೆದಾರರಲ್ಲಿ ಗೊಂದಲ ಮೂಡಿಸಿದ್ದಾರೆ.

twitter Owner Elon musk removed blue tick of celebrities in twitter, make netizens confused akb
Author
First Published Apr 21, 2023, 10:05 AM IST | Last Updated Apr 21, 2023, 10:47 AM IST

ನ್ಯೂಯಾರ್ಕ್‌: ಟ್ವಿಟ್ಟರ್‌ನ್ನು ಖರೀದಿಸಿದ ಬಳಿಕ ಒಂದಲ್ಲ ಒಂದು ಹೊಸ ಪ್ರಯೋಗ ಮಾಡುತ್ತಿರುವ ಉದ್ಯಮಿ ಎಲಾನ್ ಮಸ್ಕ್‌ ಈಗ ಸೆಲೆಬ್ರಿಟಿಗಳ ಬ್ಲೂಟಿಕ್ ತೆಗೆದು ಹಾಕುವ ಮೂಲಕ ಟ್ವಿಟ್ಟರ್‌ ಬಳಕೆದಾರರಲ್ಲಿ ಗೊಂದಲ ಮೂಡಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಸೆಲೆಬ್ರಿಟಿಗಳನ್ನು ಗುರುತಿಸಲು ಮಾಡಿದ ಈ ಬ್ಲೂಟಿಕ್‌ ಅನ್ನು ಈಗ ರದ್ದು ಮಾಡಲಾಗಿದ್ದು, ಕೆಲ ಸೆಲೆಬ್ರಿಟಿಗಳಿಗೆ ಬ್ಲೂಟಿಕ್ ಉಳಿಸಿಕೊಳ್ಳುವ ಅವಕಾಶ ನೀಡಲಾಗಿದೆ. 

ಈಗಾಗಲೇ ಪರಿಶೀಲಿಸಲ್ಪಟ್ಟ ಖಾತೆಗಳ ಬ್ಲೂಟಿಕ್ ಅನ್ನು ತೆಗೆದು ಹಾಕಲಾಗಿದ್ದು,  ಹೀಗಾಗಿ 4 ಲಕ್ಷಕ್ಕೂ ಅಧಿಕ ಅಧಿಕೃತ ಸೆಲೆಬ್ರಿಟಿ ಬಳಕೆದಾರರು ತಮ್ಮ ಬ್ಲೂಟಿಕ್ ಅನ್ನು ಕಳೆದುಕೊಂಡಿದ್ದಾರೆ. ಭಾರತದಲ್ಲಿ ಬ್ಲೂಟಿಕ್ ಪರಿಶೀಲಿಸಲ್ಪಟ್ಟ ಸ್ಟೇಟಸ್ ಪಡೆಯಲು ಒಬ್ಬರು ತಿಂಗಳಿಗೆ ರೂ 900 ಅಥವಾ  ವರ್ಷಕ್ಕೆ ರೂ 9,400 ಪಾವತಿ ಮಾಡಬೇಕಿದೆ.  ಆದರೆ ಕೆಲವು ಸೆಲೆಬ್ರಿಟಿಗಳಿಗೆ  ಮಸ್ಕ್ ಪರವಾಗಿ ಕಾಂಪ್ಲಿಮೆಂಟರಿ ಟ್ವಿಟ್ಟರ್ ಚಂದಾದಾರಿಕೆಯನ್ನು ನೀಡಲಾಗಿದೆ. ನಾನು ಕೆಲವರಿಗೆ ವೈಯಕ್ತಿಕವಾಗಿ ಪಾವತಿಸುತ್ತಿದ್ದೇನೆ ಎಂದು ಮಸ್ಕ್ ಹೇಳಿದ್ದಾರೆ. ಕೆನಡಾದ ನಟ ಜಸ್ಟ್ ವಿಲಿಯಂ ಶಾಟ್ನರ್, ಅಮೆರಿಕಾದ ಖ್ಯಾತ ಬಾಸ್ಕೆಟ್ ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್ ಮತ್ತು ಅಮೆರಿಕಾದ ಲೇಖಕ ಹಾಗೂ ಕಾದಂಬರಿಕಾರ ಸ್ಟೀಫನ್ ಕಿಂಗ್ ಸೇರಿದಂತೆ ಕೆಲವರಿಗೆ ನಾನು ಉಚಿತ ಚಂದಾದಾರಿಕೆಯನ್ನು ನೀಡಿದ್ದೇನೆ ಎಂದು ಮಾಸ್ಕ್‌ ಹೇಳಿದ್ದಾರೆ.

ಎಲಾನ್ ಮಸ್ಕ್, ಮೆಸ್ಸಿಯನ್ನೂ ಹಿಂದಿಕ್ಕಿ 100 ಪ್ರಭಾವಿ ವ್ಯಕ್ತಿಗಳಲ್ಲಿ ನಂ.1 ಆದ ಶಾರುಖ್​ ಖಾನ್ 

ಹೀಗಾಗಿ ದೇಶ ಹಾಗೂ ಪ್ರಪಂಚದಾದ್ಯಂತ ಹಲವು ಸೆಲೆಬ್ರಿಟಿಗಳು ಭಾರತದಲ್ಲಿ ಟ್ವಿಟ್ಟರ್ ಸೆಲೆಬ್ರಿಟಿ ಪಟ್ಟ ಕಳೆದುಕೊಂಡಿದ್ದಾರೆ.  ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಅಮಿತಾಬ್ ಬಚ್ಚನ್, ಅಲಿಯಾ ಭಟ್, ರಾಜಕಾರಣಿಗಳಾದ ಯೋಗಿ ಆದಿತ್ಯನಾಥ್, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕ್ರಿಕೆಟಿಗರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ  ಸೇರಿದಂತೆ ಅನೇಕ ಗಣ್ಯರು ಬ್ಲೂಟಿಕ್ ಕಳೆದುಕೊಂಡಿದ್ದಾರೆ.

ಟ್ವಿಟ್ಟರ್‌ ಬ್ಲೂಟಿಕ್‌ ಸೇವೆ ಜಾರಿ: ಟ್ವೀಟ್‌ ಪದಗಳ ಮಿತಿ 4000ಕ್ಕೆ ಹೆಚ್ಚಳ..!

ಭಾರಿ ವಿರೋಧದ ಹೊರತಾಗಿಯೂ ಟ್ವಿಟ್ಟರ್‌ (Twitter) ತನ್ನ ಚಂದಾದಾರರಿಗೆ (Subscribers) ಮಾಸಿಕ ಚಂದಾ ಆಧರಿತ ಬ್ಲೂಟಿಕ್‌ (Blue Tick) ಸೇವೆ ನೀಡಲು ಇತ್ತೀಚೆಗೆ ಮುಂದಾಗಿತ್ತು. ಹೀಗಾಗಿ ಬ್ಲೂಟಿಕ್‌ ಪಡೆಯಲು ಇನ್ನು ತಿಂಗಳಿಗೆ ಸುಮಾರು 8 ಡಾಲರ್‌ (660 ರು.) ಹಾಗೂ ಐಫೋನ್‌ (iPhone) ಬಳಕೆದಾರರು ತಿಂಗಳಿಗೆ 11 ಡಾಲರ್‌ (908 ರು.) ಪಾವತಿಸಬೇಕಾಗುತ್ತದೆ. ಇದರೊಂದಿಗೆ ಈ ಚಂದಾದಾರಿಗೆ ಕಡಿಮೆ ಜಾಹೀರಾತು ವೀಕ್ಷಣೆ (Less Advertisements), ಹೆಚ್ಚು ಸಮಯದ ವಿಡಿಯೋ (Video) ಪ್ರಸಾರಕ್ಕೆ ಅವಕಾಶ ಮೊದಲಾದ ಇತರೆ ಸೌಲಭ್ಯವನ್ನೂ ನೀಡಲಾಗುತ್ತದೆ ಎಂದು ಕಂಪನಿ ಕೆಲ ದಿನಗಳ ಹಿಂದೆ ತಿಳಿಸಿತ್ತು

ನಕಲಿ ಖಾತೆಗಳ (Fake Accounts) ಹಾವಳಿ ನಿಯಂತ್ರಿಸಲು ಕಂಪನಿಗಳು, ಸೆಲೆಬ್ರಿಟಿಗಳು, ಸರ್ಕಾರಿ ಮುಖ್ಯಸ್ಥರು, ಪತ್ರಕರ್ತರ ನಿಜವಾದ ಖಾತೆಗಳನ್ನು ಪರಿಶೀಲಿಸಿ ಟ್ವಿಟ್ಟರ್‌ ಅವರಿಗೆ ಬ್ಲೂಟಿಕ್‌ ನೀಡಲು ಟ್ವಿಟ್ಟರ್ ನಿರ್ಧರಿಸಿತ್ತು. ಈ ಬ್ಲೂಟಿಕ್‌ನಿಂದಾಗಿ ನೈಜ ಖಾತೆ ಹಾಗೂ ನಕಲಿ ಖಾತೆ ನಡುವೆ ವ್ಯತ್ಯಾಸ ಗುರುತಿಸಲು ಸಹಾಯವಾಗುತ್ತದೆ. ಆದರೆ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಎಲಾನ್‌ ಮಸ್ಕ್‌ ಟ್ವಿಟ್ಟರ್‌ ಅನ್ನು 3.6 ಲಕ್ಷ ಕೋಟಿ ರೂ.ಗೆ ಖರೀದಿಸಿದ ಬಳಿಕ ಪರಿಶೀಲಿಸಿದ ಖಾತೆಗಳನ್ನು ಹೊಂದಿರುವವರು ಬ್ಲೂಟಿಕ್‌ ಪಡೆಯಲು ಹಣ ಪಾವತಿಸಬೇಕಾಗುತ್ತದೆ ಎಂದಿದ್ದರು. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು..

ಟ್ವೀಟ್‌ ಪದ ಮಿತಿ 280 ರಿಂದ 4000ಕ್ಕೆ ಹೆಚ್ಚಳ
ಟ್ವಿಟ್ಟರ್‌ ಅನ್ನು ತೆಕ್ಕೆಗೆ ಪಡೆದುಕೊಂಡ ಬಳಿಕ ಸಾಕಷ್ಟು ಬದಲಾವಣೆಗೆ ಮುಂದಾಗಿರುವ ಎಲಾನ್‌ ಮಸ್ಕ್‌, ಟ್ವೀಟ್‌ಗೆ ಇರುವ ಪದಗಳ ಮಿತಿಯನ್ನು 280 ರಿಂದ 4000ಕ್ಕೆ ಹೆಚ್ಚಿಸುವ ಬಗ್ಗೆ ಸುಳಿವು ನೀಡಿದ್ದರು. ನೆಟ್ಟಿಗರೊಬ್ಬರು ಈ ಕುರಿತ ವರದಿಗಳ ಬಗ್ಗೆ ಪ್ರಶ್ನಿಸಿದಾಗ ಹೌದು, ನಾವು ಪದಗಳ ಮಿತಿಯನ್ನು 4000ಕ್ಕೆ ಹೆಚ್ಚಿಸಲಿದ್ದೇವೆ ಎಂದು ಎಲಾನ್‌ ಮಸ್ಕ್‌ ಉತ್ತರ ನೀಡಿದ್ದರು. ಆದರೆ ಇದಕ್ಕೆ ನೆಟ್ಟಿಗರು ವಿರೋಧವನ್ನೂ ವ್ಯಕ್ತಪಡಿಸಿದ್ದಾರೆ. ಅಷ್ಟು ಉದ್ದ ಬರೆಯಲು ಅವಕಾಶ ನೀಡಿದರೆ ಅದು ಚುಟುಕು ಜಾಲತಾಣವಾಗದು, ಬದಲಾಗಿ ಪ್ರಬಂಧವಾಗಲಿದೆ ಎಂದು ವ್ಯಂಗ್ಯವಾಡಿದ್ದಾರೆ. ಜೊತೆಗೆ ಅಷ್ಟು ಉದ್ದದ ಟ್ವೀಟ್‌ಗಳಲ್ಲಿ ಮುಖ್ಯ ಅಂಶವೇ ಹುದುಗಿ ಹೋಗಬಹುದು ಎಂದೂ ಆತಂಕ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios