ವಾಷಿಂಗ್ಟನ್‌(ಮೇ.12): ಕೊರೋನಾ ವೈರಸ್‌ನ 2ನೇ ಅಲೆಯ ವಿರುದ್ಧ ಸೆಣಸುತ್ತಿರುವ ಭಾರತಕ್ಕೆ, ಸಾಮಾಜಿಕ ಜಾಲತಾಣ ಟ್ವೀಟರ್‌ ಸಂಸ್ಥೆ 110 ಕೋಟಿ ರು.(15 ಮಿಲಿಯನ್‌ ಡಾಲರ್‌) ನೆರವಿನ ಹಸ್ತ ಚಾಚಿದೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಟ್ವೀಟರ್‌ ಸಿಇಒ ಜಾಕ್‌ ಪ್ಯಾಟ್ರಿಕ್‌ ಡೋರ್ಸಿ, ‘ಭಾರತದ ಕೊರೋನಾ ವಿರುದ್ಧದ ಹೋರಾಟಕ್ಕಾಗಿ ಕೇರ್‌, ಏಡ್‌ ಇಂಡಿಯಾ ಮತ್ತು ಸೇವಾ ಇಂಟರ್‌ ನ್ಯಾಷನಲ್‌ ಯುಎಸ್‌ಎ ಎಂಬ 3 ಸರ್ಕಾರೇತರ ಸಂಸ್ಥೆ(ಎನ್‌ಜಿಒ)ಗಳಿಗೆ ಹಣಕಾಸಿನ ನೆರವು ನೀಡಲಾಗಿದೆ’ ಎಂದು ಹೇಳಿದ್ದಾರೆ.

ಈ ಹಣಕಾಸಿನ ನೆರವಿನ ಮೂಲಕ ಕೊರೋನಾ ಸೋಂಕಿತರ ರಕ್ಷಣೆಗೆ ಅಗತ್ಯವಿರುವ ತಾತ್ಕಾಲಿಕ ಕೋವಿಡ್‌ ಆರೈಕೆ ಕೇಂದ್ರಗಳ ಸ್ಥಾಪನೆ, ಆಮ್ಲಜನಕ ಕಾನ್ಸೆಂಟ್ರೇಟರ್‌ಗಳು, ವೆಂಟಿಲೇಟರ್‌ಗಳು, ಬಿಐಪಿಎಪಿ, ಪಿಪಿಇ ಕಿಟ್‌ಗಳು, ಸಿಪಿಎಪಿ ಸೇರಿದಂತೆ ಇನ್ನಿತರ ಉಪಕರಣಗಳನ್ನು ಸರ್ಕಾರಿ ಆಸ್ಪತ್ರೆಗಳು ಮತ್ತು ಕೋವಿಡ್‌ ಆರೈಕೆ ಕೇಂದ್ರಗಳಿಗೆ ಒದಗಿಸಿಕೊಡಲಾಗುತ್ತದೆ ಎಂದು ಎನ್‌ಜಿಒಗಳು ತಿಳಿಸಿವೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona