ಬೆಂಗಳೂರು(ಏ. 13)  ಕೊರೋನಾ ಲಾಕ್ ಡೌನ್ ಮಧ್ಯೆ ಇಲ್ಲೊಂದು ಟ್ವಿಟರ್ ವಾರ್ ನಡೆದಿದೆ. ರಾಹುಲ್ ಗಾಂಧಿ ಮತ್ತು ಸಂಸದ ತೇಜಸ್ವಿ ಸೂರ್ಯ ನಡುವೆ ಟ್ವಿಟರ್ ವಾರ್ ನಡೆದಿದೆ. 

ಆರ್ಥಿಕ ವ್ಯವಸ್ಥೆಯ ಕುಸಿತ ಭಾರತದ ಕಾರ್ಫೊರೇಟ್ ವಲಯದ ಮೇಲೆ ಪರಿಣಾಮ ಬೀರುತ್ತಿದೆ. ದೇಶವೇ ಸಂಕಷ್ಟದಲ್ಲಿದ್ದು ಇಂಥ ಸಂದರ್ಭದಲ್ಲಿ ಯಾವುದೇ ವಿದೇಶಿ ದೈತ್ಯರು ನಮ್ಮ ದೇಶದ ಕಂಪನಿಗಳ ಮೇಲೆ, ಅಥವಾ ವಲಯದ ಮೇಲೆ ಹಿಡಿತ ಸಾಧಿಸಲು ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬಾರದು ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು.

ವಿದ್ಯಾರ್ಥಿಗಳಿಗೆ ಮನೆಯಲ್ಲೇ ಪಾಠ!

ಇದಕ್ಕೆ ಕೌಂಟರ್ ಕೊಟ್ಟಿರುವ ಸಂಸದ ತೇಜಸ್ವಿ ಸೂರ್ಯ, ನಾನು ರಾಹುಲ್ ಗಾಂಧಿಯವರ ಮಾತಿಗೆ ಒಪ್ಪಿಗೆ ಸೂಚಿಸುತ್ತೇನೆ. ನಮ್ಮ ವಲಯಗಳ ಮೇಲೆ ವಿದೇಶಿ ಪ್ರಭಾವ ನಿಜಕ್ಕೂ ಅಪಾಯಕಾರಿ. ಕಾಂಗ್ರೆಸ್ ಪಕ್ಷ ಫಾರಿನ್ ಟೇಕ್ ಓವರ್ ಆಗಿದ್ದಕ್ಕೆ ದೇಶ ಹೇಗೆ ಕೆಟ್ಟ ಪರಿಣಾಮ ಎದುರಿಸುತ್ತಿದೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿಲ್ಲ ಎಂದಿದ್ದಾರೆ.

ಒಟ್ಟಿನಲ್ಲಿ ಒಂದು ಕಡೆ ದೇಶ ಮತ್ತು ಇಡೀ ಪ್ರಪಂಚ ಕೊರೋನಾ ಎಂಬ ಮಹಾಮಾರಿಯ ವಿರುದ್ಧ ನಿರಂತರ ಹೋರಾಟ ಮಾಡುತ್ತಿದ್ದರೆ ಈ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿಯೂ ಸಹ ಇಂಥ ಸದ್ದುಗಳು ಆಗಾಗ ಕಂಡುಬರುತ್ತವೆ.