ಅಹಮದಾಬಾದ್‌[ಫೆ.25]: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಆಹ್ವಾನಿಸಿಕೊಳ್ಳುವ ಮೂಲಕ ತಮ್ಮ ಅಧಿಕಾರಾವಧಿಯಲ್ಲಿ ಇಬ್ಬರು ಅಮೆರಿಕದ ಅಧ್ಯಕ್ಷರನ್ನು ಭಾರತಕ್ಕೆ ಆಹ್ವಾನಿಸಿದ 2ನೇ ಪ್ರಧಾನಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಇದಕ್ಕೂ ಮುನ್ನ ಮಾಜಿ ಪ್ರಧಾನಿ ಡಾ. ಮನಮೋಹನ್‌ ಸಿಂಗ್‌ ಅವರು ತಮ್ಮ ಅಧಿಕಾರವಧಿಯಲ್ಲಿ 2006ರಲ್ಲಿ ಆಗಿನ ಅಮೆರಿಕ ಅಧ್ಯಕ್ಷರಾಗಿದ್ದ ಜಾಜ್‌ರ್‍ ಡಬ್ಲ್ಯು. ಬುಷ್‌ ಹಾಗೂ 2010ರಲ್ಲಿ ಬರಾಕ್‌ ಒಬಾಮರನ್ನು ಭಾರತಕ್ಕೆ ಆಹ್ವಾನಿಸಿಕೊಂಡಿದ್ದರು.

2014ರ ಲೋಕಸಭಾ ಚುನಾವಣೆ ಮೂಲಕ ಅಧಿಕಾರದ ಗದ್ದುಗೆಗೇರಿದ ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಒಬಾಮರನ್ನು ದೇಶಕ್ಕೆ ಆಹ್ವಾನಿಸಿದ್ದರು. ಇದೀಗ ಟ್ರಂಪ್‌ ಅವರನ್ನು ಬರ ಮಾಡಿಕೊಂಡಿದ್ದಾರೆ