ಮೋದಿ ‘ಜಿಡಿಪಿ’ ಹೆಚ್ಚಿಸಿದ್ದಾರೆ: ರಾಹುಲ್‌ ವ್ಯಂಗ್ಯದ ಪ್ರಹಾರ| ಜಿಡಿಪಿ ಎಂದರೆ ‘ಗ್ಯಾಸ್‌, ಡೀಸೆಲ್‌, ಪೆಟ್ರೋಲ್‌’

ನವದೆಹಲಿ(ಜ.25): ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಜನರು ಹಣದುಬ್ಬರದಿಂದ ನಲುಗುತ್ತಿದ್ದರೆ ಕೇಂದ್ರ ಸರ್ಕಾರ ತೆರಿಗೆ ಸಂಗ್ರಹದಲ್ಲಿ ನಿರತವಾಗಿದೆ ಎಂದು ಕಿಡಿಕಾರಿದ್ದಾರೆ.

ಪೆಟ್ರೋಲ್‌, ಡೀಸೆಲ್‌ ಬೆಲೆ ಸಾರ್ವಕಾಲಿಕ ಏರಿಕೆ ಕಂಡ ಕಾರಣ ಟ್ವೀಟ್‌ ಮಾಡಿರುವ ರಾಹುಲ್‌ ಗಾಂಧಿ, ‘ ಮೋದಿಜಿ ಜಿಡಿಪಿ (ಗ್ಯಾಸ್‌, ಡೀಸೆಲ್‌, ಪೆಟ್ರೋಲ್‌)ಯಲ್ಲಿ ಭಾರೀ ಅಭಿವೃದ್ಧಿ ಸಾಧಿಸಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.

ದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 85.70 ರು. ಆಗಿದ್ದರೆ, ಮುಂಬೈನಲ್ಲಿ 92.28 ರು. ನಷ್ಟಾಗಿದೆ. ಇನ್ನು ದೆಹಲಿಯಲ್ಲಿ ಲೀಟರ್‌ ಡೀಸೆಲ್‌ ದರ 75.88 ರು. ಮತ್ತು ಮುಂಬೈನಲ್ಲಿ 82.66 ರು.ಗೆ ಏರಿಕೆಯಾಗಿದೆ.