Asianet Suvarna News Asianet Suvarna News

ದೇಗುಲಗಳ ದೀಪ, ಪಾತ್ರೆ ಮಾರಿ ಹಣ ಸಂಗ್ರಹ!

ದೇಗುಲಗಳ ದೀಪ, ಪಾತ್ರೆ ಮಾರಿ ಹಣ ಸಂಗ್ರಹ!| 1248 ದೇವಸ್ಥಾನದ ಹೆಚ್ಚುವರಿ ವಸ್ತುಗಳ ಮಾರಾಟ| ಕೇರಳ ಸರ್ಕಾರದ ಮತ್ತೊಂದು ವಿವಾದಾಸ್ಪದ ಕ್ರಮ

Travancore Devaswom Board To Sell Unused Lamps, Utensils To Tide Over Financial Crisis
Author
Bangalore, First Published May 24, 2020, 7:40 AM IST

ಕೊಲ್ಲಂ(ಮೇ.24): ಕೊರೋನಾ ಬಿಕ್ಕಟ್ಟಿನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಕೇರಳ ಸರ್ಕಾರ, ರಾಜ್ಯದ ಟ್ರಾವಂಕೂರ್‌ ದೇವಸ್ವಂ ಬೋರ್ಡ್‌ (ಟಿಡಿಬಿ - ಕೇರಳದ ಮುಜರಾಯಿ ಇಲಾಖೆ) ಅಡಿಯಲ್ಲಿ ಬರುವ ಎಲ್ಲಾ ದೇವಸ್ಥಾನಗಳ ಹೆಚ್ಚುವರಿ ದೀಪಗಳು ಹಾಗೂ ಸಾಂಪ್ರದಾಯಿಕ ಪಾತ್ರೆ ಪಗಡೆಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಇದರ ಸಂಬಂಧ ಹರಾಜು ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ಮಲಯಾಳ ಪತ್ರಿಕೆಯೊಂದು ವರದಿ ಮಾಡಿದೆ.

2 ಲಕ್ಷ ಮಂದಿಗೆ ಈದ್ ಫೆಸ್ಟ್ ಮೂಲಕ ಹಬ್ಬದೂಟ ಆಯೋಜಿಸಿದ ವಿಕಾಸ್ ಖನ್ನ!

ಕೊರೋನಾದಿಂದ ಆದ ನಷ್ಟಭರಿಸಲು ದೇವಸ್ಥಾನಗಳ ನಿಧಿಯನ್ನು ಬಳಸಿಕೊಳ್ಳಲು ಕೇರಳ ಸರ್ಕಾರ ಮುಂದಾಗಿರುವುದು ಇತ್ತೀಚೆಗಷ್ಟೇ ವಿವಾದಕ್ಕೆ ಕಾರಣವಾಗಿತ್ತು. ಅದು ಸದ್ಯ ಕೋರ್ಟ್‌ನಲ್ಲಿದೆ. ಅದರ ಬೆನ್ನಲ್ಲೇ ಇನ್ನೊಂದು ಹೆಜ್ಜೆಯಿರಿಸಿರುವ ಸರ್ಕಾರ, ಟಿಡಿಬಿ ಅಡಿ ಬರುವ ಎಲ್ಲಾ 1248 ದೇವಸ್ಥಾನಗಳಲ್ಲಿ ಬಳಕೆಗೆ ಅಗತ್ಯವಿಲ್ಲದ ಹಿತ್ತಾಳೆ ದೀಪಗಳು, ಪಾತ್ರೆಗಳು ಮುಂತಾದವುಗಳನ್ನು ಮಾರಾಟ ಮಾಡಿ ಹಣ ಸಂಗ್ರಹಿಸಲು ನಿರ್ಧರಿಸಿದೆ. ಭಕ್ತರು ನೀಡಿರುವ ಕಾಣಿಕೆಯಿಂದಾಗಿ ಎಟ್ಟುಮನೂರ್‌, ಮಲಯಾಳಪ್ಪುಳ, ಚೆಟ್ಟಿಕುಲಂಗರ, ವಲ್ಲಿಯಂಗವು ಮುಂತಾದ ದೇಗುಲಗಳಲ್ಲಿ ಇಂತಹ ದುಬಾರಿ ಲೋಹದ ಭಾರಿ ಸಂಗ್ರಹವಿದೆ. ಇವುಗಳನ್ನು ರಕ್ಷಿಸುವುದು ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ ಎಂದೂ ಮಂಡಳಿ ಹೇಳಿಕೊಂಡಿದೆ.

'ಇದು ಭಾರತ': ಮುಸ್ಲಿಮರಿಗೆ ಇಫ್ತಾರ್ ನೀಡಿದ ದೇವಾಲಯದ ಬಗ್ಗೆ ಟ್ವಿಟರ್‌ನಲ್ಲಿ ಮೆಚ್ಚುಗೆ

ದೇವಸ್ಥಾನಗಳಲ್ಲಿ ನಿತ್ಯ ಬಳಸುತ್ತಿರುವ ಹಾಗೂ ಉತ್ಸವಗಳಲ್ಲಿ ಬಳಸುವ ದೀಪ ಹಾಗೂ ಪಾತ್ರೆಗಳನ್ನು ಮಾರಾಟ ಮಾಡಲು ಸಂಗ್ರಹಿಸಬಾರದು. ಬಳಸದಿರುವ ವಸ್ತುಗಳನ್ನು ಮಾತ್ರ ಸಂಗ್ರಹಿಸಬೇಕು ಎಂದು ಟಿಡಿಬಿ ತನ್ನ ಅಧಿಕಾರಿಗಳಿಗೆ ಸೂಚಿಸಿದೆ. ಆದರೆ, ದೇವಸ್ಥಾನಗಳ ಸಲಹಾ ಸಮಿತಿ ಸದಸ್ಯರು ಟಿಡಿಬಿಯ ನಿರ್ಧಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 2012ರಲ್ಲೂ ಸರ್ಕಾರ ಒಮ್ಮೆ ಇಂತಹುದೇ ಕ್ರಮಕ್ಕೆ ಮುಂದಾಗಿತ್ತು. ಆದರೆ, ದೇವಸ್ಥಾನಗಳ ಸಲಹಾ ಸಮಿತಿ ಸದಸ್ಯರ ವಿರೋಧದಿಂದಾಗಿ ಕೈಬಿಟ್ಟಿತ್ತು. ಪ್ರಸಿದ್ಧ ಶಬರಿಮಲೆ ದೇವಸ್ಥಾನ ಕೂಡ ಟಡಿಬಿ ಅಡಿಯಲ್ಲಿ ಬರುತ್ತದೆ.

Follow Us:
Download App:
  • android
  • ios