ಮುಂಬೈ(ಜ.30):  ಕೊರೋನಾ ಹಿನ್ನೆಲೆಯಲ್ಲಿ ಕಳೆದ ಮಾರ್ಚ್‌ನಲ್ಲಿ ರದ್ದಾಗಿದ್ದ ಮುಂಬೈ ಉಪನಗರ ರೈಲುಗಳ ಸಂಚಾರ ಫೆ.1ರಿಂದ ಪುನಾರಂಭವಾಗಲಿದೆ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ.

ಹೆಚ್ಚು ಜನದಟ್ಟಣೆ ವೇಳೆಯಾದ ಬೆಳಿಗ್ಗೆ 7 ಗಂಟೆಯವರೆಗೆ ಹಾಗೂ ಮಧ್ಯಾಹ್ನ 12ರಿಂದ 4 ಗಂಟೆಯ ವರೆಗೆ ಜನಸಾಮಾನ್ಯರು ಈ ಸ್ಥಳೀಯ ರೈಲುಗಳ ಮೂಲಕ ಸಂಚರಿಸಬಹುದಾಗಿದೆ. ರಾತ್ರಿ 9 ಗಂಟೆ ನಂತರ ರೈಲು ಸೇವೆ ರದ್ದಾಗಲಿದೆ. ಉಳಿದ ವೇಳೆಯಲ್ಲಿ ಅತ್ಯಗತ್ಯ ಸೇವೆಗಳಿಗೆ ಅಂದರೆ ಮುಂಚೂಣಿ ಕಾರ‍್ಯಕರ್ತರು, ಆರೋಗ್ಯ ಸಿಬ್ಬಂದಿ, ಮಹಿಳೆಯರು ಮಾತ್ರ ಈ ರೈಲುಗಳಲ್ಲಿ ಸಂಚರಿಸಬಹುದಾಗಿದೆ.

ಒಟ್ಟು 3141 ಸಬರ್ಬನ್‌ ರೈಲುಗಳ ಪೈಕಿ 2985 ರೈಲುಗಳು ಈಗಾಗಲೇ ಕಾರ‍್ಯ ನಿರ್ವಹಿಸುತ್ತಿವೆ. ಶುಕ್ರವಾರದಿಂದ ಉಳಿದ 204 ರೈಲುಗಳೂ ಸಂಚಾರ ಆರಂಭಿಸಿವೆ.