ನವದೆಹಲಿ[ಜ.01]: ಹೊಸ ವರ್ಷದ ಆರಂಭದಲ್ಲೇ ರೈಲ್ವೆ ಇಲಾಖೆ ಗ್ರಾಹಕರಿಗೆ ಶಾಕ್ ನೀಡಿದೆ. ಜ.1ರಿಂದಲೇ ಅನ್ವಯವಾಗುವಂತೆ ಎಲ್ಲಾ ಮಾದರಿ ರೈಲು ಪ್ರಯಾಣ ದರ ಏರಿಸಿ

ಹವಾ ನಿಯಂತ್ರಿತವಲ್ಲದ ಸಾಮಾನ್ಯ ರೈಲುಗಳು ಮತ್ತು ಸಬ್ ಅರ್ಬನ್ ಅಲ್ಲದ ರೈಲುಗಳ ಪ್ರಯಾಣ ದರವನ್ನು ಪ್ರತಿ ಕಿ.ಮೀ.ಗೆ 1 ಪೈಸೆ ಹೆಚ್ಚಳ ಮಾಡಲಾಗಿದೆ. ಹವಾ ನಿಯಂತ್ರಿತವಲ್ಲದ ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣ ದರ ಪ್ರತಿ ಕಿ.ಮೀ.ಗೆ 2 ಪೈಸೆ ಹಾಗೂ ಹವಾನಿಯಂತ್ರಿತ ದರ್ಜೆ (ಎ.ಸಿ.) ಪ್ರಯಾಣ ದರವನ್ನು ಪ್ರತಿ ಕಿ.ಮೀ.ಗೆ 4 ಪೈಸೆ ಹೆಚ್ಚಳ ಮಾಡಲಾಗಿದೆ.

ಶತಾಬ್ದಿ, ರಾಜಧಾನಿ ಮತ್ತು ದುರಂತೊ ರೈಲುಗಳೂ ದರ ಏರಿಕೆಗೆ ಒಳಪಟ್ಟಿವೆ. ಉದಾಹರಣೆಗೆ 1,447 ಕಿ.ಮೀ. ದೂರ ಕ್ರಮಿಸುವ ದೆಹಲಿ- ಕೋಲ್ಕತಾ ರಾಜಧಾನಿ ಎಕ್ಸ್‌ಪ್ರೆಸ್ ರೈಲಿನ ದರ ಪ್ರತಿ ಕಿ.ಮೀಗೆ 4 ಪೈಸೆಯಂತೆ 58 ರು. ಹೆಚ್ಚಳವಾಗಿದೆ. ಇದೇ ವೇಳೆ ಟಿಕೆಟ್ ಕಾಯ್ದಿರಿಸುವ ಶುಲ್ಕ ಮತ್ತು ಸೂಪರ್‌ಫಾಸ್ಟ್ ಶುಲ್ಕದಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ.