Asianet Suvarna News Asianet Suvarna News

ಪ್ರಯಾಣಿಕನ ರಕ್ಷಣೆಗಾಗಿ 1 ಕಿ.ಮೀ ಹಿಂದಕ್ಕೆ ಚಲಿಸಿದ ರೈಲು

ಮಹಾರಾಷ್ಟ್ರದ ಜಲ್ಗಾಂವ್‌ ಜಿಲ್ಲೆಯಲ್ಲಿ  ಪ್ರಯಾಣಿಕನೊಬ್ಬನ್ನು ರಕ್ಷಿಸಲು ರೈಲೊಂದು 1 ಕಿ.ಮೀ. ಹಿಮ್ಮುಖವಾಗಿ ಚಲಿಸಿದೆ. 

Train reversed to rescue fallen passenger in Maharashtra
Author
Bengaluru, First Published Feb 8, 2020, 11:11 AM IST

ಮುಂಬೈ [ಫೆ.08]:  ಬಸ್ಸು, ಕಾರಿನಂತೆ ಮುಂದೆ ಹೋದ ರೈಲು ಎಂದಾದರೂ ವಾಪಸ್‌ ಬಂದಿದ್ದು ಉಂಟೇ? ಆದರೆ, ಪ್ರಯಾಣಿಕನೊಬ್ಬನ್ನು ರಕ್ಷಿಸಲು ರೈಲೊಂದು 1 ಕಿ.ಮೀ. ಹಿಮ್ಮುಖವಾಗಿ ಚಲಿಸಿದ ಘಟನೆ ಮಹಾರಾಷ್ಟ್ರದ ಜಲ್ಗಾಂವ್‌ ಜಿಲ್ಲೆಯಲ್ಲಿ ನಡೆದಿದೆ. 

ದೇವಲಾಲಿನಿಂದ ಭೂಸಾವಲ್‌ಗೆ ತರಳುತ್ತಿದ್ದ ರೈಲು ಪರ್ಧಂಡೆ ಮತ್ತು ಮಹೆಜಿ ರೈಲ್ವೆ ನಿಲ್ದಾಣಗಳ ಮಧ್ಯೆ ಮುಂಜಾನೆ 9.30ರ ವೇಳೆಗೆ ಸಂಚರಿಸುತ್ತಿದ್ದ ವೇಳೆ ರಾಹುಲ್‌ ಪಾಟೀಲ್‌ ಎಂಬ ವ್ಯಕ್ತಿ ಕೆಳಕ್ಕೆ ಬಿದ್ದಿದ್ದ. 

ವಿಜಯಪುರ- ಮಂಗಳೂರು: ಸ್ಪೆಷಲ್ ರೈಲು ಸೇವೆ...

ತಕ್ಷಣವೇ ಸ್ನೇಹಿತರು ಅಲರಾಂ ಚೈನ್‌ ಅನ್ನು ಎಳೆದು ರೈಲನ್ನು ನಿಲ್ಲಿಸಿದ್ದರು. ಬಳಿಕ ಚಾಲಕ ಹಿಮ್ಮುಖವಾಗಿ ರೈಲು ಓಡಿಸಿ ಗಾಯಾಳುವನ್ನು ರಕ್ಷಣೆ ಮಾಡಿದ್ದಾರೆ. ಆತನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.

Follow Us:
Download App:
  • android
  • ios