ಜಲಗಾಂವ್‌ನಲ್ಲಿ ರೈಲು ಅವಘಡದಲ್ಲಿ 13 ಮಂದಿ ಮತಪಟ್ಟ ಎರಡೇ ದಿನದಲ್ಲಿ ಇದೀಗ ತಿರುಪತಿ ಶಾಲಿಮಾರ್ ಎಕ್ಸ್‌ಪ್ರೆಸ್ ರೈಲು ಹಾಗೂ ಪಾರ್ಸೆಲ್ ರೈಲು ಮುಖಾಮುಖಿ ಡಿಕ್ಕಿಯಾಗಿದೆ. 

ಹೌರ(ಜ.26) ಭಾರತೀಯ ರೈಲ್ವೇ ಅಪಘಾತಗಳ ಪಟ್ಟಿಗೆ ಮತ್ತೊಂದು ಸೇರಿಕೊಂಡಿದೆ. ಜಲಗಾಂವ್‌ನಲ್ಲಿ ರೈಲಿಗೆ ಬೆಂಕಿ ಹೊತ್ತಿಕೊಂಡಿದೆ ಅನ್ನೋ ವದಂತಿಯಿಂದ ರೈಲಿನಿಂದ ಹಾರಿದ ಪ್ರಯಾಣಿಕರ ಮೇಲೆ ಮತ್ತೊಂದು ರೈಲು ಹರಿದ ಘಟನೆಯಲ್ಲಿ13 ಮಂದಿ ಮೃತಪಟ್ಟಿದ್ದಾರೆ. ಈ ಘಟನೆ ನಡೆದ ಎರಡೇ ದಿನಕ್ಕೆ ಇದೀಗ ತಿರುಪತಿ-ಶಾಲಿಮಾರ್ ಎಕ್ಸ್‌ಪ್ರೆಸ್ ಪ್ರಯಾಣಿಕರ ರೈಲು ಹಾಗೂ ಪಾರ್ಸೆಲ್ ರೈಲು ಮುಖಾಮುಖಿ ಡಕ್ಕಿಯಾಗಿದೆ. ಅದೃಷ್ಠವಶಾತ್ ಎರಡೂ ರೈಲುಗಳು ಖಾಲಿಯಾಗಿತ್ತು. ಹೀಗಾಗಿ ಯಾವುದೇ ದುರಂತ ಸಂಭವಸಿಲ್ಲ. ಪಶ್ಚಿಮ ಬಂಗಾಳದ ಹೌರದಲ್ಲಿ ಈ ಅಪಘಾತ ಸಂಭವಿಸಿದೆ.

ಪದ್ಮಾಪುಕುರ್ ರೈಲು ನಿಲ್ದಾಣ ಸನಿಹದಲ್ಲಿ ಈ ಘಟನೆ ನಡೆದಿದೆ. ಸಾಂತಾಗ್ರಚಿ ರೈಲು ನಿಲ್ಣಾದಿಂದ ಶಾಲಿಮಾರ್ ರೈಲು ನಿಲ್ದಾಣಕ್ಕೆ ಪ್ರಯಾಣಿಕರ ರೈಲು ತೆರಳುತ್ತಿತ್ತು. ಇದೇ ತಿರುಪತಿ-ಶಾಲಿಮಾರ್ ಎಕ್ಸ್‌ಪ್ರೆಸ್ ರೈಲು ಶಾಲಿಮಾರ್ ನಿಲ್ದಾಣದಿಂದ ಹೊರಡಬೇಕಿತ್ತು.ಹೀಗಾಗಿ ಪ್ರಯಾಣಿಕರ ರೈಲಿನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ. ರೈಲು ಸಂಪೂರ್ಣ ಖಾಲಿಯಾಗಿತ್ತು. ಪ್ಯಾರಲಲ್ ಹಳಿ ಮೂಲಕ ಸಾಗುತ್ತಿದ್ದ ಶಾಲಿಮಾರ್ ತಿರುಪತಿ ಎಕ್ಸ್‌ಪ್ರೆಸ್ ರೈಲಿನ ಅದೇ ಹಳಿ ಮೂಲಕ ವಿರುದ್ದ ದಿಕ್ಕಿನಿಂದ ಪಾರ್ಸೆಲ್ ರೈಲೊಂದು ಆಗಮಿಸಿದೆ. 

ಬೆಂಕಿ ವದಂತಿ: ರೈಲಿಂದ ಜಿಗಿದವರ ಮೇಲೆ ಬೇರೆ ರೈಲು ಹರಿದು 12 ಬಲಿ!

ಪಾರ್ಸೆಲ್ ರೈಲು ಹಳಿ ಬದಲಿಸಿ ಸಂಚರಿಸಬೇಕಿತ್ತು. ಆದರೆ ಒಂದು ರೈಲು ಸಮಯಕ್ಕಿಂತ ಕೊಂಚ ಬೇಗ ಬಂದ ಕಾರಣ ಇನ್ನೇನು ಹಳಿ ಬದಲಿಸುವ ಮುನ್ನವೇ ಮುಖಾಮುಖಿ ಡಿಕ್ಕಿಯಾಗಿದೆ. ಆದರೆ ಪ್ಯಾರಲಲ್ ಟ್ರಾಕ್ ಮೂಲಕ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ತೆರಳುತ್ತಿದ್ದ ಪ್ರಯಾಣಿಕರ ರೈಲು ನಿಧನವಾಗಿ ಚಲಿಸುತ್ತಿತ್ತು. ಅತ್ತ ಪಾರ್ಸೆಲ್ ರೈಲು ಕೂಡ ಇನ್ನು ವೇಗ ಪಡೆದುಕೊಂಡಿರಲಿಲ್ಲ. ಹೀಗಾಗಿ ಅಪಘಾತದ ತೀವ್ರತೆ ಕಡಿಮೆಯಾಗಿದೆ. 

ಮುಖಾಮುಖಿ ಡಿಕ್ಕಿಯಿಂದ ಮೂರು ಬೋಗಿಗಳು ಹಳಿ ತಪ್ಪಿದೆ. ಅದೃಷ್ಠವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಧಿಕಾರಿಗಲು ಭೇಟಿ ನೀಡಿದ್ದಾರೆ. ಇತ್ತ ರೈಲ್ವೇ ವಿಭಾಗ ತನಿಖೆಗೆ ಆದೇಶಿಸಿದೆ. ರೈಲು ಅಪಘಾತ ಪ್ರಕರಣಗಳು ಹೆಚ್ಚಾಗಿರುವ ಸಂದರ್ಭದಲ್ಲಿ ಈ ಘಟನೆ ಆತಂಕ ಹೆಚ್ಚಿಸಿರುವುದು ಸುಳ್ಳಲ್ಲ. ಇತ್ತ ರೈಲು ಅಪಘಾತದಿಂದ ಹಲವು ರೆಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ. ಹಲವು ರೈಲುಗಳ ಸಂಚಾರ ಸಮಯ ಬದಲಾಗಿದೆ. ಕೆಲ ರೈಲುಗಳು ಭಾರಿ ವಿಳಂಭವಾಗಿದೆ.

ರೈಲು ಅಪಘಾತಕ್ಕೆ ಕಾರಣಗಳ ಕುರಿತು ತನಿಖೆ ನಡೆಯುತ್ತಿದೆ. ರೈಲು ಹೊರಟ ಸಮಯ ಸೇರಿದಂತೆ ಹಲವು ಮಾಹಿತಿಗಳನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ.

ದೇಶ ಎಂದೂ ಮರೆಯದ ರೈಲು ದುರಂತವಿದು, ಬಿಹಾರದಲ್ಲಿ ಟ್ರೇನ್‌ ಉರುಳಿಬಿದ್ದಾಗ ಸಾವು ಕಂಡಿದ್ದು 800 ಮಂದಿ!