ಬೆಂಗಳೂರಿನ ನಂತರ ಚೆನ್ನೈಗೆ ಕಾಲಿಟ್ಟ TRAI ಮತ್ತು FedEx ಹೆಸರಲ್ಲಿ ಆನ್‌ಲೈನ್ ವಂಚನೆ!
ಈವರೆಗೆ ಬೆಂಗಳೂರಿನಲ್ಲಿ ಮುಂಬೈ ಪೊಲೀಸರ ವೇಷದಲ್ಲಿ ಕರೆ ಮಾಡಿ ವಂಚಿಸುತ್ತಿದ್ದ ಗ್ಯಾಂಗ್ ಈಗ ಚೆನ್ನೈನಲ್ಲೂ ಸಕ್ರಿಯವಾಗಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ಚೆನ್ನೈ ಪೊಲೀಸರು ನಟ ಯೋಗಿ ಬಾಬು ಅವರನ್ನು ಬಳಸಿಕೊಂಡಿದ್ದಾರೆ.
ಬೆಂಗಳೂರು (ಅ.09): ಕಳೆದ ಆರೇಳು ತಿಂಗಳಿಂದ ಬೆಂಗಳೂರು, ಹುಬ್ಬಳ್ಳಿ ಧಾರವಾಡ ಸೇರದಂತೆ ಕೆಲವು ನಗರ ಪ್ರದೇಶಗಳಲ್ಲಿ ದಾಖಲಾಗಿದ್ದ ಮುಂಬೈ ಪೊಲೀಸರ ಹೆರೇಳಿಕೊಂಡು ವಿಡಿಯೋ ಕರೆ ಮಾಡಿ ವಂಚಿಸುವ ಗ್ಯಾಂಗ್ ಚೆನ್ನೈ ಜನರನ್ನೂ ವಂಚಿಸಲು ಮುಂದಾಗಿದೆ. ಇದನ್ನು ತಡೆಗಟ್ಟಲು ಚೆನ್ನೈ ಪೊಲೀಸರು ನಟ ಯೋಗಿ ಬಾಬು ಅವರ ಮೊರೆ ಹೋಗಿದ್ದಾರೆ.
ದೇಶದ ಮೆಟ್ರೋ ಪಾಲಿಟಿನ್ ಸಿಟಿಗಳಾದ ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ ಹಾಗೂ ಕೋಲ್ಕತ್ತಾ ಸೇರಿದಂತೆ ಸಣ್ಣ ಪುಟ್ಟ ನಗರ ಪ್ರದೇಶಗಳಲ್ಲಿ ಫೋನ್‌ಗೆ ಕರೆ ಮಾಡಿ ವಂಚನೆ ಮಾಡುವ ಪ್ರಕರಣ ಹೆಚ್ಚಾಗುತ್ತಿವೆ. ನಗರಗಳ ಹಿರಿಯ ನಾಗರಿಕರ ಮೊಬೈಲ್‌ಗೆ ಮುಂಬೈ ಪೊಲೀಸರ ವೇಷದಲ್ಲಿ ಕರೆ ಮಾಡುವ ವಂಚಕರು ನಿಮಗೆ ವಿದೇಶಗಳಿಂದ ಟ್ರಾಯ್ ಹಾಗೂ ಫೆಡ್‌ಎಕ್ಸ್ ಮೂಲಕ ಕೋರಿಯರ್ ಬಂದಿದೆ ತಿಳಿಸಿ ಮಾತನಾಡುತ್ತಾರೆ. ನಂತರ, ಅವರ ಹೇಳಿದ ಎಲ್ಲ ಸೂಚನೆಗಳನ್ನು ಪಾಲಿಸುತ್ತಾ ಹೋದಂತೆ ನಿಮ್ಮ ಖಾತೆಯಲ್ಲಿರುವ ಎಲ್ಲ ಹಣ ಲಪಟಾಯಿಸುತ್ತಾರೆ. ಇಂತಹ ಪ್ರಕರಣಗಳು ಕಳೆದ ಆರೇಳು ತಿಂಗಳ ಹಿಂದೆ ಕರ್ನಾಟಕದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ನಡೆದಿದ್ದವು. ಇದೀಗ ತಮಿಳುನಾಡು ರಾಜಧಾನಿ ಚೆನ್ನೈಗೂ ಕಾಲಿಟ್ಟಿದೆ. ಇದೀಗ ಚೆನ್ನೈ ಜನರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾಸ್ಯನಟ ಯೋಗಿ ಬಾಬು ಅವರಿಂದ ವಿಡಿಯೋ ಮಾಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರಾಡಕ್ಟ್ ಕೊರಿಯರ್ ಹೆಸರಲ್ಲಿ ಟೆಕ್ಕಿಗೆ ವಂಚನೆ, ನಿಮಗೂ ಕಾಲ್ ಮಾಡಬಹುದು ಖದೀಮರು!
ಚೆನ್ನೈ ನಗರ ಪೊಲೀಸರು ಬಿಡುಗಡೆ ಮಾಡಿರುವ ನಟ ಯೋಗಿ ಬಾಬು ಅವರ ವಿಡಿಯೋದಲ್ಲಿ, 'ಎಲ್ಲರಿಗೂ ನಮಸ್ಕಾರ. ನಾನು ನಿಮ್ಮ ಹಾಸ್ಯ ನಟ ಯೋಗಿ ಬಾಬು ಮಾತಾಡ್ತಾ ಇದ್ದೀನಿ. ಈ ಸಂದೇಶ ಚೆನ್ನೈ ನಗರ ಪೊಲೀಸ್ ಇಲಾಖೆಗೆ ಸಂಬಂಧಿಸಿದ್ದಾಗಿದೆ. ಕಳೆದ ಕೆಲವು ದಿನಗಳಿಂದ ಹಿರಿಯ ನಾಗರಿಕರು ಸೇರಿದಂತೆ ಹಲವರಿಗೆ ಅಪರಿಚಿತ ಸಂಖ್ಯೆಯಿಂದ ಕರೆ ಬರುತ್ತಿದೆ. ಅದರಲ್ಲಿ ಮಾತನಾಡುವ ವ್ಯಕ್ತಿಗಳು ತಾವು ಕೊರಿಯರ್ ಕಂಪನಿಯವರು ಎಂದು ಪರಿಚಯಿಸಿಕೊಳ್ಳುತ್ತಿದ್ದಾರೆ. ಮುಂದುವರೆದು ಮುಂಬೈನಿಂದ ಚೀನಾಕ್ಕೆ ಹೋದ ಪಾರ್ಸೆಲ್‌ನಲ್ಲಿ 5 ಕೆ.ಜಿ. ಚಿನ್ನ, ಮಾದಕ ವಸ್ತುಗಳು, ಹುಲಿ ಚರ್ಮ, ಹಣ, ಡಾಲರ್, ಕರೆನ್ಸಿ ಇತ್ಯಾದಿಗಳು ಸಿಕ್ಕಿವೆ. ಆ ಪಾರ್ಸೆಲ್‌ಗೂ ನಿಮಗೂ ಸಂಬಂಧ ಇದೆ ಅಂತ ಹೇಳುತ್ತಾರಂತೆ.
ಇನ್ನು ಹೀಗೆ ಮಾತಾಡುವಾಗ ಫೋನ್ ಕರೆ ಕಟ್ ಮಾಡಿದರೆ ಮುಂಬೈ ಪೊಲೀಸರು ನಿಮ್ಮನ್ನು ಬಂಧಿಸುತ್ತಾರೆ. ಹಾಗಾಗಿ ನಾವು ಹೇಳುವುದನ್ನು ಪೂರ್ತಿ ಕೇಳಬೇಕು. ನಿಮ್ಮ ಬಗ್ಗೆ ಮಾಹಿತಿಯನ್ನು ನಮಗೆ ಕಳುಹಿಸಬೇಕು. ಜೊತೆಗೆ, ನಿಮ್ಮ ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನೆಲ್ಲಾ ನಮಗೆ ಟ್ರಾನ್ಸ್‌ಫರ್ ಮಾಡಬೇಕು. ಈ ಹಣ ನಿಮ್ಮದೇ ಎಂಬುದು ಬ್ಯಾಂಕ್ ಹಾಗೂ ಪ್ಯಾನ್ ಕಾರ್ಡ್ ಪರಿಶೀಲನೆಯ ವೇಳೆ ನಿಮ್ಮದೇ ಎಂದು ಖಚಿತಪಡಿಸಿಕೊಂಡ ನಂತರ ಎಲ್ಲ ಹಣವನ್ಉ ಹಿಂದಿರುಗಿಸುತ್ತೇವೆ ಎಂದು ಹೇಳುತ್ತಾರೆ.
ಇದನ್ನೂ ಓದಿ: ಮುಂಬೈ ಕ್ರೈಂ ಬ್ರ್ಯಾಂಚ್ ಪೊಲೀಸರ ಹೆಸರಲ್ಲಿ ಕರೆ ಮಾಡಿ ಮೋಸ: ಶಿಕ್ಷಕನಿಗೆ 32 ಲಕ್ಷ ವಂಚನೆ
ಇದರ ಜೊತೆಗೆ ವಿಟಿಯೋ ಕಾಲ್ ಕೂಡ ಮಾಡುವ ವಂಚಕರು, ವಿಡಿಯೋ ಕಾಲ್‌ನಲ್ಲಿ ಪೊಲೀಸರು ಮಾತನಾಡುತ್ತಾರೆ ಅವರೊಂದಿಗೆ ಮಾತನಾಡಿ ಎಂದು ಹೇಳುತ್ತಾರೆ. ಆದರೆ, ಈವರೆಗೆ ಯಾವುದೇ ಪೊಲೀಸರು ವಿಡಿಯೋ ಕಾಲ್ ಮಾಡುವುದಿಲ್ಲ. ಈ ರೀತಿ ನಿಮಗೆ ಫೋನ್ ಕರೆ ಬಂದರೆ 1930ಕ್ಕೆ ಕರೆ ಮಾಡಿ ದೂರು ನೀಡಿ. ಚೆನ್ನೈ ನಗರ ಪೊಲೀಸರಿಗೆ ದೂರು ನೀಡಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು. ನಿಮ್ಮ ಹಣವನ್ನು ಸಹ ನೀವು ಉಳಿಸಿಕೊಳ್ಳಬಹುದು. ಯಾರೂ ಮೋಸ ಹೋಗಬೇಡಿ. ಎಂದು ಆ ವಿಡಿಯೋದಲ್ಲಿ ಯೋಗಿ ಬಾಬು ತಿಳಿಸಿದ್ದಾರೆ.
ಇನ್ನು ಚೆನ್ನೈ ನಗರ ಒಂದರಲ್ಲೇ ಈವರೆಗೆ ಇಂತಹ ದೂರುಗಳನ್ನು ಸ್ವೀಕರಿಸಿದ ಚೆನ್ನೈ ಪೊಲೀಸರು 10 ಕೋಟಿ ರೂ.ವರೆಗೆ ಹಣವನ್ನು ವಂಚಕರಿಂದ ವಸೂಲಿ ಮಾಡಲಾಗಿದೆ ಎಂದು ಸೈಬರ್ ಕ್ರೈಂ ಪೊಲೀಸರು ತಿಳಿಸಿದ್ದಾರೆ.