Asianet Suvarna News Asianet Suvarna News

ಬೈಕಿನಲ್ಲಿ ಹೋಗುತ್ತಿದ್ದ ದಂಪತಿಗೆ ಬುದ್ಧಿಮಾತು ಹೇಳಿದ ಟ್ರಾಫಿಕ್ ಪೋಲೀಸ್; ನೀವೂ ಈ ತಪ್ಪು ಮಾಡ್ತೀರಾ?

ಬೈಕಿನಲ್ಲಿ ಗಂಡ ಹೆಂಡತಿ ಮಗು ಹೋಗುತ್ತಿದ್ದಾಗ ಕೈ ಅಡ್ಡ ಹಾಕಿ ಅವರನ್ನು ಟ್ರಾಫಿಕ್ ಪೋಲೀಸ್ ರಸ್ತೆ ಬದಿಗೆ ಕರೆದಿದ್ದಾರೆ. ಇಬ್ಬರೂ ಹೆಲ್ಮೆಟ್ ಧರಿಸಿದ್ದೇವೆಲ್ಲ ಎಂದುಕೊಂಡೇ ರಸ್ತೆ ಬದಿ ಬೈಕ್ ನಿಲ್ಲಿಸಿದ ನಂತರ, ದಂಪತಿಗೆ ಬುದ್ಧಿ ಮಾತು ಹೇಳಿದ್ದಾರೆ ಪೋಲೀಸ್. ಇಷ್ಟಕ್ಕೂ ಹೆಲ್ಮೆಟ್ ಹಾಕಿಕೊಂಡು ಸಾಮಾನ್ಯ ವೇಗದಲ್ಲಿ ಹೋಗುತ್ತಿದ್ದ ದಂಪತಿ ಮಾಡಿದ ತಪ್ಪಾದರೂ ಏನು?

traffic police teaches traffic rules to a couple is getting appreciation from Netizens skr
Author
First Published Feb 13, 2024, 6:29 PM IST

ಬೈಕಿನಲ್ಲಿ ಗಂಡ ಹೆಂಡತಿ ಮಗು ಹೋಗುತ್ತಿದ್ದಾಗ ಕೈ ಅಡ್ಡ ಹಾಕಿ ಅವರನ್ನು ಟ್ರಾಫಿಕ್ ಪೋಲೀಸ್ ರಸ್ತೆ ಬದಿಗೆ ಕರೆದಿದ್ದಾರೆ. ಇಬ್ಬರೂ ಹೆಲ್ಮೆಟ್ ಧರಿಸಿದ್ದೇವೆಲ್ಲ ಎಂದುಕೊಂಡೇ ರಸ್ತೆ ಬದಿ ಬೈಕ್ ನಿಲ್ಲಿಸಿದ ನಂತರ, ದಂಪತಿಗೆ ಬುದ್ಧಿ ಮಾತು ಹೇಳಿದ್ದಾರೆ ಪೋಲೀಸ್. ಟ್ರಾಫಿಕ್ ಪೋಲೀಸ್ ಮಾಡಿದ ಈ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮಲ್ಲಿಕಾರ್ಜುನ್ ಟ್ರಾಫಿಕ್ ಪೋಲೀಸ್ ಎಂಬ ಇನ್ಸ್ಟಾ ಖಾತೆಯಿಂದ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.
ಇಷ್ಟಕ್ಕೂ ಹೆಲ್ಮೆಟ್ ಹಾಕಿಕೊಂಡು ಸಾಮಾನ್ಯ ವೇಗದಲ್ಲಿ ಹೋಗುತ್ತಿದ್ದ ದಂಪತಿ ಮಾಡಿದ ತಪ್ಪಾದರೂ ಏನು?

ರಸ್ತೆಬದಿ ಬೈಕ್ ನಿಲ್ಲಿಸಿದ ದಂಪತಿಯ ಬಳಿ ಸ್ನೇಹದಿಂದ ಮಾತನಾಡಿದ ಹಿರಿಯ ಟ್ರಾಫಿಕ್ ಪೋಲೀಸ್, 'ಸ್ನೇಹಿತರೇ ನೀವೊಂದು ತಪ್ಪು ಮಾಡಿದೀರಿ. ಮಗುವಿನ ವಯಸ್ಸೆಷ್ಟು' ಎಂದು ಕೇಳಿದ್ದಾರೆ.

ಇದಕ್ಕೆ ದಂಪತಿ 3 ವರ್ಷ ಎಂದಿದ್ದಾರೆ.

'9 ತಿಂಗಳಿಂದ 4 ವರ್ಷದ ಮಕ್ಕಳನ್ನು ಬೈಕ್‌ನಲ್ಲಿ ಮುಂದೆ ಕೂರಿಸುವಂತಿಲ್ಲ. ಕೂರಿಸಿದರೆ ತಪ್ಪಾಗುತ್ತೆ. ಅವರನ್ನು ಹಿಂದೆ ಕುಳಿತವರು ಹಿಡಿದುಕೊಳ್ಳಬೇಕು. ಇಲ್ಲದಿದ್ದಲ್ಲಿ ಸೇಫ್ಟಿ ಬ್ಯಾಗ್ ಹಾಕಿಕೊಳ್ಳಬೇಕು. ನೋಡಿ, ಮಗು ದೇವರು. ಅದಕ್ಕೆ ಗೊತ್ತಿಲ್ಲ, ನೀವು ಈ ನಿಯಮ ತಿಳಿದಿರಬೇಕು' ಎಂದಿದ್ದಾರೆ ಪೋಲೀಸ್.

'ಹೆಣ್ಮಕ್ಕಳ ದೇಹದ್ ಬಗ್ಗೆ ಕಾಮೆಂಟ್ ಮಾಡೋ..' ಬಾಡಿ ಶೇಮ್ ಮಾಡಿದವ್ನಿಗೆ ...
 

'ಇಷ್ಟಕ್ಕೂ ಬೈಕ್‌ನಲ್ಲಿ ನಿಯಮ ಪ್ರಕಾರ ಇಬ್ಬರೇ ಹೋಗಲು ಅವಕಾಶವಿರುವುದು. ದಯವಿಟ್ಟು ಸೇಫ್ಟಿ ಮಾಡಿ. ಇಲ್ಲದಿದ್ದಲ್ಲಿ ನೀವು ಬ್ರೇಕ್ ಹಾಕಿದಾಗ ಮಗು ಪಲ್ಟಿಯಾಗುವ ಸಂಭವ ಇರುತ್ತದೆ' ಎಂದು ತಿಳಿ ಹೇಳಿದ್ದಾರೆ.

ಅಚ್ಚಕನ್ನಡದಲ್ಲಿ ಸ್ವಚ್ಛವಾಗಿ, ಗೌರವಯುತವಾಗಿ ತಿಳಿ ಹೇಳಿದ ಪೋಲೀಸ್ ಅಧಿಕಾರಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. 
ಒಬ್ಬ ಬಳಕೆದಾರರು ಕಾಮೆಂಟ್ ಮಾಡಿ, 'ನಿಮ್ ತರ ಟ್ರಾಫಿಕ್ ಪೊಲೀಸ್ ಇದ್ರೆ ಇಂತಹ ಸಣ್ಣ ಪುಟ್ಟ ತಪ್ಪುಗಳಿಂದ ಪ್ರಾಣ ಹೋಗೋದು ಉಳಿಯುತ್ತೆ ' ಎಂದು ಶ್ಲಾಘಿಸಿದ್ದಾರೆ.
ಮತ್ತೊಬ್ಬರು, 'ನಿಮ್ಮಂಥವರಿಂದ ಪೋಲೀಸ್ ಬಗ್ಗೆ ಗೌರವ ಹೆಚ್ಚಾಯಿತು' ಎಂದಿದ್ದಾರೆ.

ಒಂದು ತಿಂಗಳು ಡೈರಿ ಉತ್ಪನ್ನ ತ್ಯಜಿಸಿದ್ರೆ ಏನಾಗುತ್ತೆ? ಪ್ರಯೋಜನ ಕೇಳಿ ...
 

'ಮಂಗಳೂರಿನ ಬೆಸ್ಟ್ ಟ್ರಾಫಿಕ್ ಪೋಲೀಸ್' ಎಂದು ಇನ್ನೊಬ್ಬ ಬಳಕೆದಾರರು ಹೊಗಳಿದ್ದಾರೆ.

 

Follow Us:
Download App:
  • android
  • ios