ನವದೆಹಲಿ/ಜೈಪುರ[ಜ.28]: ಲೋಕಸಭೆ ಚುನಾವಣೆ ಸೋಲಿನ ನೈತಿಕ ಹೊಣೆ ಹೊತ್ತು ಆರು ತಿಂಗಳ ಹಿಂದೆ ಪಕ್ಷಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದ ರಾಹುಲ್‌ ಗಾಂಧಿ ಅವರನ್ನು ಹೊಸ ರೂಪದೊಂದಿಗೆ ಮತ್ತೆ ಅದೇ ಪಟ್ಟಕ್ಕೆ ತರುವ ಪ್ರಯತ್ನವೊಂದು ಆರಂಭವಾಗಿದೆ. ಹೊಸ ಇಮೇಜ್‌ನೊಂದಿಗೆ ರಾಹುಲ್‌ ಅವರನ್ನು ಅಧ್ಯಕ್ಷ ಗಾದಿಯಲ್ಲಿ ಕೂರಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೈಪೋಟಿ ನೀಡುವಂತೆ ಮಾಡುವ ಉದ್ದೇಶ ಇದಾಗಿದೆ.

ಇದರ ಭಾಗವಾಗಿ ರಾಹುಲ್‌ ಅವರು ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಸರಣಿ ರಾರ‍ಯಲಿಗಳನ್ನು ನಡೆಸಲಿದ್ದಾರೆ. ಆರ್ಥಿಕ ಹಿಂಜರಿತ, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ) ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್‌) ಪ್ರಸ್ತಾಪಿಸಿ ಮೋದಿ ಸರ್ಕಾರದ ವಿರುದ್ಧ ಹರಿಹಾಯಲಿದ್ದಾರೆ.

ರಾಹುಲ್‌ ವ್ಯಕ್ತಿಯಲ್ಲ ಶಕ್ತಿ, ಲಘು ಮಾತು ಬೇಡ: ಗುಹಾ ಹೇಳಿಕೆಗೆ ಕೈ ನಾಯಕನ ಆಕ್ರೋಶ!

ಇನ್ನು ಕೆಲವೇ ತಿಂಗಳಲ್ಲಿ 50 ವರ್ಷಗಳನ್ನು ಪೂರೈಸಲಿರುವ ರಾಹುಲ್‌ ಗಾಂಧಿ ಅವರ ಹೊಸ ಅವತಾರದ ಮೊದಲ ರಾರ‍ಯಲಿ ರಾಜಸ್ಥಾನದಲ್ಲಿ ಮಂಗಳವಾರ ನಡೆಯಲಿದೆ. ಜ.30ರಂದು ಕೇರಳ, ಬಳಿಕ ಕಾಂಗ್ರೆಸ್‌ ಆಳ್ವಿಕೆಯ ಜಾರ್ಖಂಡ್‌, ತದನಂತರ ಬಿಜೆಪಿ ಆಳ್ವಿಕೆಯ ರಾಜ್ಯಗಳು ಮತ್ತು ಶೀಘ್ರದಲ್ಲೇ ವಿಧಾನಸಭೆ ಚುನಾವಣೆಗಳನ್ನು ಎದುರಿಸಲಿರುವ ರಾಜ್ಯಗಳಲ್ಲಿ ರಾಹುಲ್‌ ಅಬ್ಬರಿಸಲಿದ್ದಾರೆ ಎಂದು ಹೇಳಲಾಗಿದೆ.

ರಾಹುಲ್‌ ಮತ್ತೆ ಏಕೆ?

- ಹಲವು ರಾಜ್ಯಗಳು ಬಿಜೆಪಿ ಕೈತಪ್ಪಿ ಪ್ರತಿಪಕ್ಷಗಳ ಪಾಲಾಗಿವೆ

- ಪಕ್ಷದ ಚಟುವಟಿಕೆ ಬಗ್ಗೆ ರಾಹುಲ್‌ ಮತ್ತೆ ಆಸಕ್ತಿ ತೋರಿದ್ದಾರೆ

- ಅಧ್ಯಕ್ಷೆಯಾಗಿರಲು ಸೋನಿಯಾ ನಿರಾಸಕ್ತಿ ತೋರುತ್ತಿದ್ದಾರೆ

- ಪ್ರಿಯಾಂಕಾ ಉತ್ತರ ಪ್ರದೇಶದಿಂದಾಚೆ ಗಮನ ಹರಿಸುತ್ತಿಲ್ಲ

ಉತ್ತರಪ್ರದೇಶ ಬಿಟ್ಟು ಪ್ರಿಯಾಂಕಾ ಗಾಂಧಿ ಅವರು ಹೊರಗೆ ಕಾಣಿಸುತ್ತಿಲ್ಲ

'ಮೋದಿ ಕಳ್ಳ' ಎಂದ ರಾಹುಲ್‌ ಗಾಂಧಿಗೆ ಸಮನ್ಸ್!