ಚೆನ್ನೈ(ಜೂ.15): ಕೊರೋನಾ ವೈರಸ್ ಪ್ರಕರಣಗಳು ಗಣನೀಯವಾಗಿ ಹೇರುತ್ತಿರುವ ಹಿನ್ನೆಲೆ ತಮಿಳುನಾಡು ಸಿಎಂ ಪಳನಿಸ್ವಾಮಿ ರಾಜಧಾನಿ ಚೆನ್ನೈ ಸೇರಿ ಒಟ್ಟು ನಾಲ್ಕು ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ್ದಾರೆ.

"

ಹೌದು ಕೊರೋನಾ ಹಾವಳಿ ಮಿತಿ ಮೀರುತ್ತಿದ್ದು ಸದ್ಯ ಅದನ್ನು ನಿಯಂತ್ರಿಸಲು ಸರ್ಕಾರ ಭಾರೀ ಯತ್ನ ನಡೆಸುತ್ತಿದೆ. ಈ ಹಿನ್ನೆಲೆ ಜೂನ್ 19 ರಿಂದ 30 ರ ತನವರೆಗೆ ತಮಿಳುನಾಡಿನ ಚೆನ್ನೈ, ಕಂಚೀಪುರಂ, ಚಂಗಲ್ ಪಟ್ಟು, ತಿರುವಳ್ಳೂರು ಜಿಲ್ಲೆಗಳಲ್ಲಿ ಸಿರೆಂ ಲಾಕ್‌ಡೌನ್ ಘೋಷಿಸಿದ್ದಾರೆ. ಗರಿಷ್ಠ ಷರತ್ತುಗಳು ವಿಧಿಸಿ ಈ ಲಾಕ್‌ಡೌನ್ ಘೋಷಿಸಲಾಗಿದೆ.

ಅನ್‌ಲಾಕ್‌ ಆಗಿ ವಾರ ಕಳೆದರೂ, ಜನರ ಲಾಕ್‌ಡೌನ್‌ ಇನ್ನೂ ಮುಗಿದಿಲ್ಲ.!

ಸೋಮವಾರ ಬೆಳಗ್ಗೆ ಸಿಎಂ, ಆರೋಗ್ಯ ತಜ್ಞರ ಸಮಿತಿ ಜೊತೆ ಚರ್ಚೆ ನಡೆಸಿದ್ದರು. ಈ ವೇಳೆ ಕೊರೋನಾ ನಿಯಂತ್ರಿಸಲು ಚೆನ್ನೈ ಸೇರಿದಂತೆ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಪ್ರದೇಶಗಳಲ್ಲಿ ಸಡಿಲಿಕೆ ಕೊಡದೆ ಮತ್ತೆ ಲಾಕ್‌ಡೌನ್ ಘೋಷಿಸಬೇಕೆಂಬ ಸಲಹೆ ನೀಡಲಾಗಿದೆ ಎಂದು AIADMK ತಿಳಿಸಿದೆ.

ತಮಿಳುನಾಡಿನಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ

ಇನ್ನು ಭಾನುವಾರ ತಮಿಳುನಾಡಿನಲ್ಲಿ ಒಟ್ಟು 1,974 ಪ್ರಕರಣಗಳು ದಾಖಲಾಗಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 44,661 ಏರಿಕೆಯಾಗಿದೆ. ಇನ್ನು 435 ಮಂದಿ ಮೃತಪಟ್ಟಿದ್ದಾರೆ. ಅಲ್ಲದೇ ಒಟ್ಟು 24,547 ಮಂದಿ ಗುಣಮುಖರಾಗಿದ್ದು, ಸದ್ಯ 19,676 ಸಕ್ರಿಯ ಪ್ರಕರಣಗಳಿವೆ.

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"