Asianet Suvarna News Asianet Suvarna News

ಸರ್ಕಾರದಿಂದ ಹೊರಗುಳಿಯುವ ಆಫರ್‌ ನೀಡಿದ ಕಾಂಗ್ರೆಸ್‌, ಇಂಡಿ ಒಕ್ಕೂಟದ ಕೈ ಹಿಡೀತಾರಾ ಟಿಡಿಪಿ, ಜೆಡಿಯು!

ಅತ್ಯಂತ ಮಹತ್ವದ ಬೆಳವಣಿಗೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪದಗ್ರಹಣ ಮಾಡೋದನ್ನ ತಡೆಯಲೇಬೇಕು ಎನ್ನುವ ಗುರಿಯಲ್ಲಿರುವ ಕಾಂಗ್ರೆಸ್‌, ಇಂಡಿ ಒಕ್ಕೂಟದ ಎದುರು ದೊಡ್ಡ ಆಫರ್‌ಅನ್ನು ನೀಡಿದೆ.
 

Top INDIA sources Congress offers to stay out of government JDU TDP san
Author
First Published Jun 5, 2024, 4:02 PM IST

ನವದೆಹಲಿ (ಜೂ.5): ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ಪೂರ್ಣ ಬಹುಮತ ಬಂದಿದ್ದರೂ, ಎನ್‌ಡಿಎ ಮೈತ್ರಿಪಕ್ಷಗಳಾದ ಟಿಡಿಪಿ ಹಾಗೂ ಜೆಡಿಯುವನ್ನು ತನ್ನತ್ತ ಸೆಳೆಯುವ ಇರಾದೆಯಲ್ಲಿರುವ ಇಂಡಿ ಒಕ್ಕೂಟ ಈಗ ಬಿಗ್‌ ಆಫರ್‌ಅನ್ನು ನೀಡಿದೆ. ಹಾಗೇನಾದರೂ ಇಂಡಿ ಒಕ್ಕೂಟಕ್ಕೆ ಸರ್ಕಾರ ರಚನೆ ಸಾಧ್ಯವಾದಲ್ಲಿ ಇಡೀ ಸರ್ಕಾರದಿಂದಲೇ ಹೊರಗುಳಿದು ಕೇವಲ ಬಾಹ್ಯ ಬೆಂಬಲ ಮಾತ್ರವೇ ನೀಡುವ ಆಫರ್‌ಅನ್ನು ಕಾಂಗ್ರೆಸ್‌ ನೀಡಿದೆ. ಇದರರ್ಥ, ಪ್ರಧಾನಿ ಮೋದಿಯನ್ನು ಅಧಿಕಾರದಿಂದ ಕೆಳಗೆ ಇಳಿಸುವ ನಿಟ್ಟಿನಲ್ಲಿ ರಾಹುಲ್‌ ಗಾಂಧಿಗೆ ಪ್ರಧಾನಿ ಪಟ್ಟ ಸಿಗದೇ ಇದ್ದರೂ ಪರವಾಗಿಲ್ಲ ಎನ್ನುವ ಇರಾದೆಯಲ್ಲಿ ಕಾಂಗ್ರೆಸ್ ಇದೆ. ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ, ಭವಿಷ್ಯದ ಕಾರ್ಯತಂತ್ರವನ್ನು ನಿರ್ಧರಿಸಲು ಇಂದು ಸಂಜೆ ಇಂಡಿ ಮೈತ್ರಿಕೂಟ ಸಭೆ ನಡೆಸಲಿದೆ. ಮೈತ್ರಿಕೂಟ ವಿರೋಧ ಪಕ್ಷದಲ್ಲಿ ಕೂರಬೇಕೋ ಅಥವಾ ಸರ್ಕಾರ ರಚಿಸಲು ಪ್ರಯತ್ನಿಸಬೇಕೋ ಎಂಬುದನ್ನು ಸಭೆಯಲ್ಲಿ ನಿರ್ಧಾರ ಮಾಡಲಾಗುತ್ತದೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಇಂಡಿ ಪಕ್ಷಗಳ ಸಭೆ ನಡೆಯಲಿದೆ. ಈ ಸಭೆಯ ಜೊತೆಗೆ ಕಾಂಗ್ರೆಸ್ ಪಕ್ಷದ ಸಭೆಯೂ ನಡೆಯಲಿದೆ. ಇದರಲ್ಲಿ ಮೈತ್ರಿಕೂಟದ ಮುಖಂಡರ ಜತೆಗಿನ ಸಭೆಯಲ್ಲಿ ಯಾವ ನಿಲುವು ತೆಗೆದುಕೊಳ್ಳಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಇನ್ನೊಂದೆಡೆ ಟಿಡಿಪಿ ಹಾಗೂ ಜೆಡಿಯು ನಾಯಕರನ್ನು ಸಂಪರ್ಕಿಸುವ ಕೆಲಸವನ್ನು ಇಂಡಿಯಾ ನಾಯಕರು ಮಾಡುತ್ತಿದ್ದಾರೆ.

ಸಭೆಯ ನಂತರವೇ ಭವಿಷ್ಯದ ಕಾರ್ಯತಂತ್ರವನ್ನು ಹೇಳುತ್ತೇವೆ ಎಂದು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಫಲಿತಾಂಶದ ನಂತರ ಮಂಗಳವಾರ ಹೇಳಿದ್ದರು. ಸಂಪೂರ್ಣ ತಂತ್ರವನ್ನು ಈಗ ಹೇಳಿದರೆ, ಆಗ ಮೋದಿ ಜೀ ಅಲರ್ಟ್ ಆಗುತ್ತಾರೆ. ಅದೇ ವೇಳೆ, ಪ್ರತಿಪಕ್ಷದಲ್ಲಿ ಕುಳಿತುಕೊಳ್ಳುವುದು ಅಥವಾ ಸರ್ಕಾರ ರಚಿಸುವುದು ಸಭೆಯಲ್ಲಿ ಮಾತ್ರ ನಿರ್ಧಾರವಾಗಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಫಲಿತಾಂಶದಲ್ಲಿ ಮೈತ್ರಿಕೂಟಕ್ಕೆ ಒಟ್ಟು 204 ಸ್ಥಾನಗಳು ಲಭಿಸಿವೆ. ಸರ್ಕಾರ ರಚಿಸಲು ಮೈತ್ರಿಕೂಟಕ್ಕೆ 272 ಸಂಸದರ ಬೆಂಬಲ ಬೇಕು. ಅಂತಹ ಪರಿಸ್ಥಿತಿಯಲ್ಲಿ, ಬಹುಮತವನ್ನು ಪಡೆಯಲು, ಅದು ಪ್ರಸ್ತುತ ಸೀಟು ಹಂಚಿಕೆಯ ಹೊರಗಿನ ಪಾಲುದಾರರನ್ನು ಹುಡುಕಬೇಕಾಗುತ್ತದೆ. ಮಮತಾ ಬ್ಯಾನರ್ಜಿ ಅವರ ಟಿಎಂಸಿಯ 29 ಸಂಸದರ ಹೊರತಾಗಿ, ಮೈತ್ರಿಕೂಟಕ್ಕೆ ಟಿಡಿಪಿ ಮತ್ತು ಜೆಡಿಯು ಬೆಂಬಲವೂ ಬೇಕಾಗುತ್ತದೆ. ವರದಿಗಳ ಪ್ರಕಾರ, ಈ ಪಕ್ಷಗಳನ್ನು ಮೈತ್ರಿಕೂಟಕ್ಕೆ ಸೇರಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆ ನಡೆಯಲಿದೆ.

India General Election Results 2024: ವಾಟ್ಸ್‌ ಆ್ಯಪ್‌‌ನಲ್ಲಿ ಅತಿ ಹೆಚ್ಚು ಶೇರ್ ಆದ ಮೆಸೇಜ್, ನಿಮಗೂ ಬಂತಾ?

ಮೋದಿ ವಿಫಲವಾಗಿದ್ದಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹೇಳಿದ್ದಾರೆ. ಮೋದಿ ಗ್ಯಾರಂಟಿಯನ್ನು ಜನ ತಿರಸ್ಕರಿಸಿದ್ದಾರೆ. ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಈ ಹಿಂದೆ ಬಿಜೆಪಿಯವರು ಪಕ್ಷದ ಹೆಸರಿನಲ್ಲಿ ಮತ ಕೇಳಿದ್ದರು, ಈ ಬಾರಿ ಮೋದಿಯವರ ಭರವಸೆಯ ಮೇರೆಗೆ ಮತ ಕೇಳಿದ್ದರು, ಅದನ್ನು ಜನ ತಿರಸ್ಕರಿಸಿದ್ದಾರೆ ಎಂದಿದ್ದಾರೆ.

ಲೋಕ ಸಮರ ಫಲಿತಾಂಶ ಎಫೆಕ್ಟ್; ಮಹಾರಾಷ್ಟ್ರ ಬಿಜೆಪಿ ರಾಜಕೀಯದಲ್ಲಿ ಭಾರೀ ಬೆಳವಣಿಗೆ

ಅಖಿಲೇಶ್ ಯಾದವ್ ಲಕ್ನೋದಿಂದ ದೆಹಲಿಗೆ ತೆರಳಿದ್ದಾರೆ. ಸಾರ್ವಜನಿಕರು ಪಿಡಿಎ ಮತ್ತು ಇಂಡಿಯಾ ಬ್ಲಾಕ್‌ನ ಕಾರ್ಯತಂತ್ರವನ್ನು ಬೆಂಬಲಿಸಿದ್ದಾರೆ. ಈಗ ಮಾತುಕತೆ ಮತ್ತು ಮುಂದಿನ ಕಾರ್ಯತಂತ್ರದ ಕುರಿತು ದೆಹಲಿಯಲ್ಲಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.
 

Latest Videos
Follow Us:
Download App:
  • android
  • ios