ನವ​ದೆ​ಹ​ಲಿ(ಮಾ.03): ಆರಂಭದಲ್ಲಿ ಕೊರೋನಾ ಸೋಂಕು ವ್ಯಾಪಕವಾದರೂ, ಅದನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರ್ಧಾರಗಳು ಸಹಜವಾಗಿಯೇ ಜಾಗತಿಕ ಮಟ್ಟದಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿತ್ತು. ಜನಸಂಖ್ಯೆಯಲ್ಲಿ ವಿಶ್ವದಲ್ಲೇ 2ನ ಸ್ಥಾನದಲ್ಲಿರುವ, ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ ವಿಭಿನ್ನವಾಗಿರುವ ದೇಶವೊಂದರಲ್ಲಿ ಇಂಥದ್ದೊಂದು ದೊಡ್ಡ ಸಾಂಕ್ರಾಮಿಕ ರೋಗ ನಿಯಂತ್ರಣ ತಂದ ಭಾರತ ಸರ್ಕಾರ ಸಾಧನೆ ಸಹಜವಾಗಿಯೇ ವಿಶ್ವದ ಹಲವು ದೊಡ್ಡ ದೇಶಗಳ ಪ್ರಶಸಂಗೆ ಪಾತ್ರವಾಗಿತ್ತು.

ಹಾಗಿದ್ದರೆ, ಅಷ್ಟಕ್ಕೂ ಸೋಂಕು ನಿಯಂತ್ರಣಕ್ಕೆ ಭಾರತ ಸರ್ಕಾರ ಮಾಡಿದ ಯಾವೆಲ್ಲಾ ನಿರ್ಧಾರಗಳು ಫಲಕೊಟ್ಟವು ಎಂಬುದರ ಬಗ್ಗೆ ಅಮೆರಿಕದ ವಿಜ್ಞಾನಿಯೊಬ್ಬರು ವಿಶ್ಲೇಷಣೆ ಮಾಡಿ ಮಾಹಿತಿ ನೀಡಿದ್ದಾರೆ. ಅಮೆ​ರಿ​ಕದ ಸಾಂಕ್ರ​ಮಿಕ ರೋಗ​ಗಳ ವಿಶ್ಲೇ​ಷಕ ಹಾಗೂ ವಿಜ್ಞಾನಿ ಯನೀರ್‌ ಬಾರ್‌ ಯಮ್‌ ಅವರು ಕೆಲ​ವೊಂದಿಷ್ಟುಕಾರ​ಣ​ಗ​ಳನ್ನು ನೀಡಿ​ದ್ದಾರೆ. ಅವು ಇಂತಿವೆ...

- ಕೊರೋನಾ ಸೋಂಕು ಆರಂಭ​ವಾದ ಬೆನ್ನಲ್ಲೇ ನಗ​ರ​ಗ​ಳತ್ತ ವಲ​ಸೆಗೆ ಬ್ರೇಕ್‌

- ಲಾಕ್ಡೌನ್‌ ಘೋಷಿಸಿ ಶಾಲೆ-ಕಾಲೇ​ಜು​ಗಳ ಬಂದ್‌, ಗುಂಪು ಸೇರು​ವಿ​ಕೆಗೆ ಕಡಿ​ವಾ​ಣ

- ಆಗ್ಗಾಗ್ಗೆ ಜನ​ರೊಂದಿಗೆ ಸಂವಾದ, ಸೋಂಕಿ​ತರ ತ್ವರಿತ ಪತ್ತೆ, ಅವ​ರಿಗೆ ಚಿಕಿತ್ಸೆ ವ್ಯವ​ಸ್ಥೆ

- ಜನ​ರಿಗೆ ಅಗ​ತ್ಯ​ವಿ​ರುವ ಮಾಸ್ಕ್‌​ಗಳು, ಆರೋಗ್ಯ ಸಿಬ್ಬಂದಿಗೆ ಪಿಪಿಇ ಕಿಟ್‌ ಉತ್ಪಾ​ದ​ನೆ

- ದೇಶ​ದಲ್ಲಿ ಒಂದೇ ಇದ್ದ ಆರ್‌​ಟಿ​ಪಿ​ಸಿ​ಆರ್‌ ಪರೀಕ್ಷಾ ಕೇಂದ್ರ ಇದೀಗ 2300ಕ್ಕೆ ಏರಿ​ಕೆ

- ಸೋಂಕಿಗೆ ತುತ್ತಾ​ದ​ವ​ರನ್ನು ತ್ವರಿ​ತ​ವಾಗಿ ಪತ್ತೆ ಹಚ್ಚಿ, ಅವ​ರಿಗೆ ಕ್ವಾರಂಟೈನ್‌ನಲ್ಲಿ​ಡು​ವಿ​ಕೆ

-ಮಾಸ್ಕ್‌ ಧರಿ​ಸು​ವಂತೆ ಕಾಲ​ರ್‌​ಟ್ಯೂನ್‌ ಮೂಲಕ ಅರಿವು ಮತ್ತು ಎಚ್ಚ​ರಿ​ಕೆಯ ಸಂದೇ​ಶ

- ಜನರ ಸಂಚಾ​ರಕ್ಕೆ ಹೇರ​ಲಾದ ನಿರ್ಬಂಧ​ದಿಂದ ಸಮು​ದಾ​ಯಕ್ಕೆ ಹಬ್ಬ​ದ ಸೋಂಕು

- ವಿಶ್ವದ ಅತಿ ದೊಡ್ಡ ಲಸಿಕೆ ಅಭಿ​ಯಾ​ನವೂ ಸೋಂಕು ನಿಯಂತ್ರ​ಣಕ್ಕೆ ಕೊಡು​ಗೆ