ಇಂದು ಪ್ರಧಾನಿ ಮೋದಿ ಹುಟ್ಟುಹಬ್ಬ : ಸೇವಾ ಪಾಕ್ಷಿಕದಲ್ಲಿ ಭಾಗವಹಿಸಿ ನಿಮ್ಮ ನೆಚ್ಚಿನ ಪ್ರಧಾನಿಗೆ ವಿಶ್ ಮಾಡಿ
ಇಂದು ಪ್ರಧಾನಿ ನರೇಂದ್ರ ಮೋದಿಯರವರ 73ನೇ ಹುಟ್ಟುಹಬ್ಬ ಈ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ವಿಶೇಷ ಸೇವಾ ಪಾಕ್ಷಿಕ ಅಂದೋಲನ ನಡೆಸುತ್ತಿದೆ. ಇದರಂತೆ ನರೇಂದ್ರ ಮೋದಿ ಆಪ್‌ನಲ್ಲಿ ಈ ಸೇವಾ ಪಾಕ್ಷಿಕ ಅಭಿಯಾನದ ಬಗ್ಗೆ ವಿವರಗಳಿವೆ.

ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿಯರವರ 73ನೇ ಹುಟ್ಟುಹಬ್ಬ ಈ ಹಿನ್ನೆಲೆಯಲ್ಲಿ ಬಿಜೆಪಿ ದೇಶಾದ್ಯಂತ ವಿಶೇಷ ಸೇವಾ ಪಾಕ್ಷಿಕ ಅಂದೋಲನ ನಡೆಸುತ್ತಿದೆ. ಇದರಂತೆ ನರೇಂದ್ರ ಮೋದಿ ಆಪ್‌ನಲ್ಲಿ ಈ ಸೇವಾ ಪಾಕ್ಷಿಕ ಅಭಿಯಾನದ ಬಗ್ಗೆ ವಿವರಗಳಿವೆ. ಇದರಲ್ಲಿ ಭಾಗವಹಿಸುವ ಮೂಲಕ ಪ್ರಧಾನಿ ಅಭಿಮಾನಿಗಳು, ದೇಶದ ನಾಗರಿಕರು ಅವರ ಹುಟ್ಟುಹಬ್ಬಕ್ಕೆ ಕೊಡುಗೆ ನೀಡಬಹುದು.
ಭಾಗವಹಿಸುವಿಕೆ ಹೇಗೆ?
ನರೇಂದ್ರ ಮೋದಿ ಆಪ್ (Narendra Modi App) ಅಥವಾ ಮೇರಾ ಸಂಸದ ಪೋರ್ಟಲ್‌ನಲ್ಲಿ (Mera samsad Portal) ನಿಮ್ಮ ಇಮೇಲ್, ಮೊಬೈಲ್ ಐಡಿ ಹಾಕಿ ಲಾಗಿನ್ ಆಗಿ, ನಂತರ ಅಲ್ಲಿರುವ ಸೇವಾ ಪಾಕ್ಷಿಕದ (Seva Pakshika) ಬ್ಯಾನರ್ ಮೇಲೆ ಕ್ಲಿಕ್ ಮಾಡಿ, ಇಂದಿನಿಂದ ಸೆಪ್ಟೆಂಬರ್ ಅಕ್ಟೋಬರ್ 2 ರ ಗಾಂಧಿ ಜಯಂತಿಯವರೆಗೆ ಈ ಸೇವಾ ಪಾಕ್ಷಿಕದಲ್ಲಿ ಭಾಗಿಯಾಗಬಹುದು.
ಇದರಲ್ಲಿ ನೀವು ವಿವಿಧ ರೀತಿಯಲ್ಲಿ ಪ್ರಧಾನಿ ಮೋದಿಗೆ ಶುಭ ಹಾರೈಸಬಹುದಾಗಿದೆ. ಆನ್‌ಲೈನ್ ವಸ್ತುಪ್ರದರ್ಶನ ಕೈಗೊಳ್ಳಬಹುದು. ವೀಡಿಯೋ ಮೂಲಕ ಶುಭ ಹಾರೈಸಬಹುದು. ಫ್ಯಾಮಿಲಿ ಇ ಕಾರ್ಡ್, ಸೇವಾ ಚಟುವಟಿಕೆಗಳು, ಪ್ರಗತಿ ಪಥದಲ್ಲಿ ಭಾರತ, ಭಾರತ ಪ್ರಧಾನಿಯನ್ನು ಬೆಂಬಲಿಸುತ್ತದೆ ಈ ಇಷ್ಟು ವಿಚಾರಗಳಲ್ಲಿ ನೀವು ಭಾಗಿಯಾಗಬಹುದು, ಇದಕ್ಕೆ ಬೇಕಾದ ಎಲ್ಲಾ ವಿವರಗಳನ್ನು ಪೋರ್ಟಲ್‌ನಲ್ಲಿ ನೀಡಲಾಗಿದೆ.
ಕೋಲಾರ: ಕುರುಡುಮಲೆಯಲ್ಲಿಂದು ಮೋದಿ ಜನ್ಮದಿನ ನಿಮಿತ್ತ ಯಡಿಯೂರಪ್ಪ ಪೂಜೆ
ಪಿಎಂ ವಿಶ್ವಕರ್ಮ ಯೋಜನೆಗೆ ಇಂದು ಮೋದಿ ಚಾಲನೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಭಾನುವಾರದಂದು 73ನೇ ವಸಂತಕ್ಕೆ ಕಾಲಿಡಲಿದ್ದಾರೆ. ಮೋದಿ ಜನ್ಮದಿನದ ಹಿನ್ನೆಲೆಯಲ್ಲಿ ಬಿಜೆಪಿಯು ರಾಷ್ಟ್ರಾದ್ಯಂತ ಇಂದಿನಿಂದ ರಿಂದ ಅ.2ರ ಗಾಂಧಿ ಜಯಂತಿವರೆಗೆ ‘ಸೇವಾ ಸಪ್ತಾಹ’ ಅಭಿಯಾನವನ್ನು ಹಮ್ಮಿಕೊಂಡಿದೆ. ತಮ್ಮ ಹುಟ್ಟುಹಬ್ಬ ಮತ್ತು ವಿಶ್ವಕರ್ಮ ಜಯಂತಿ ದಿನವೂ ಆಗಿರುವ ಇಂದು ಪ್ರಧಾನಿ ಮೋದಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇದು 13,000 ಕೋಟಿ ರು.ಗಳ ಬೃಹತ್ ಯೋಜನೆಯಾಗಿದ್ದು ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿ ಇದನ್ನು ಘೋಷಿಸಿದ್ದರು. ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ತರಬೇತಿ ಮತ್ತು ಆರ್ಥಿಕ ನೆರವು ನೀಡುವ ಯೋಜನೆ ಇದಾಗಿದ್ದು ಭಾನುವಾರದಂದು ವಿಶ್ವಕರ್ಮ ಜಯಂತಿಯೂ ಇದೆ.
ಹುಟ್ಟುಹಬ್ಬದ ಭಾಗವಾಗಿ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿರುವ ಬಿಜೆಪಿ ಬಡವರು, ರೋಗಿಗಳು ಮತ್ತು ವಿದ್ಯಾರ್ಥಿಗಳಿಗೆ ನೆರವಾಗುವ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಕಳೆದ ಹಲವು ವರ್ಷಗಳಿಂದ ಬಿಜೆಪಿಯು ಮೋದಿ ಹುಟ್ಟುಹಬ್ಬದ ಪ್ರಯುಕ್ತ ಇದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ.
ಹುಟ್ಟುಹಬ್ಬದಂದು ಏನು ಮಾಡಲಿದ್ದಾರೆ ಮೋದಿ?
ಪ್ರಧಾನಿ ಮೋದಿಯವರು ಕಳೆದ ವರ್ಷ ತಮ್ಮ ಜನ್ಮದಿನದಂದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ತರಲಾಗಿದ್ದ ಚೀತಾಗಳನ್ನು ಬಿಡುಗಡೆ ಮಾಡಿದ್ದರು. ಈ ಬಾರಿ ಅವರು ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟನೆ ಮಾಡಲಿದ್ದಾರೆ. ಇಂದು ಮುಂಜಾನೆ 11 ಗಂಟೆಗೆ ದೆಹಲಿಯ ದ್ವಾರಕಾದಲ್ಲಿ ನಿರ್ಮಿಸಲಾಗಿರುವ ‘ಯಶೋಭೂಮಿ’ ಎಂಬ ಹೆಸರಿನ ಇಂಡಿಯಾ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಹಾಲ್ ಮತ್ತು ಎಕ್ಸ್‌ಪೋ ಸೆಂಟರ್ (ಐಐಸಿಸಿ)ಯ ಮೊದಲ ಹಂತವನ್ನು ಉದ್ಘಾಟಿಸಲಿದ್ದಾರೆ. ಅಲ್ಲದೇ ದ್ವಾರಕಾದ ಸೆಕ್ಟರ್ 21ರಿಂದ ಸೆ.25ರವರೆಗಿನ ಹೊಸ ಮೆಟ್ರೋ ನಿಲ್ದಾಣದವರೆಗೆ ದೆಹಲಿ ವಿಮಾನ ನಿಲ್ದಾಣ ಮೆಟ್ರೋ ಎಕ್ಸ್‌ಪ್ರೆಸ್ ಮಾರ್ಗದ ವಿಸ್ತರಣೆಯನ್ನು ಉದ್ಘಾಟನೆ ಮಾಡಲಿದ್ದಾರೆ.
ಹಿಂದಿನ ವರ್ಷ ಹೇಗೆ ಆಚರಣೆ?
- 2014: ಗುಜರಾತ್‌ನ ವಿವಿಧ 11 ಕಲ್ಯಾಣ ಕಾರ್ಯಕ್ರಮಗಳಿಗೆ ಚಾಲನೆ
- 2015: ಶೌರ್ಯಾಂಜಲಿ ಮಿಲಿಟರಿ ಪ್ರದರ್ಶನಕ್ಕೆ ಭೇಟಿ.
- 2016: ವಿಕಲಚೇತನರಿಗೆ ಸಹಾಯಕರನ್ನು ವಿತರಿಸುವ ಸಮಾರಂಭದಲ್ಲಿ ಭಾಗಿ.
- 2017: 2017ರಲ್ಲಿ ಸರ್ದಾರ್ ಸರೋವರ ಅಣೆಕಟ್ಟು ಉದ್ಘಾಟನೆ.
- 2018: ವಾರಾಣಸಿಯ ಶಾಲೆಯಲ್ಲಿ ಮಕ್ಕಳೊಂದಿಗೆ ಭಾಗಿ, ಸಂವಾದ
- 2019: ನಮಾಮಿ ನರ್ಮದಾ ಉತ್ಸವ ಸೇರಿ ಹಲವು ಕಾರ್ಯಕ್ರಮದಲ್ಲಿ ಭಾಗಿ
- 2020: ಕೋವಿಡ್ ಕಾರಣ ಹುಟ್ಟುಹಬ್ಬವನ್ನು ಹೊರಗೆಲ್ಲೂ ಆಚರಿಸಿಕೊಂಡಿರಲಿಲ್ಲ
- 2021: ಒಂದೇ ದಿನ ದೇಶದಲ್ಲಿ 2.26 ಕೋಟಿ ಕೋವಿಡ್ ಲಸಿಕೆಗಳ ವಿತರಣೆ.
- 2022: ಮಧ್ಯಪ್ರದೇಶದ ಕುನೋ ಅರಣ್ಯಕ್ಕೆ ಆಫ್ರಿಕಾ ಚೀತಾಗಳ ಬಿಡುಗಡೆ