ಕೋಲ್ಕತ್ತಾ[ಮಾ.15]: ದೇಶಕ್ಕೆ ಕೊಡುಗೆ ನೀಡಿದ ಮಹಾನ್‌ ನಾಯ​ಕ​ರನ್ನು ಸ್ಮರಿ​ಸಲು ಅಂಥ​ವ​ರ ಪ್ರತಿ​ಮೆ​ಗ​ಳನ್ನು ನಿರ್ಮಿಸುತ್ತೇವೆ. ಆದರೆ, ಪಶ್ಚಿಮ ಬಂಗಾ​ಳ​ದಲ್ಲಿ ಟಿಎಂಸಿ ಶಾಸ​ಕ​ನೊಬ್ಬ ತನ್ನ ಪ್ರತಿ​ಮೆ​ಯನ್ನು ತಾನೇ ನಿರ್ಮಿ​ಸಿ​ಕೊಂಡಿ​ದ್ದಾನೆ.

ಒಂದು ವೇಳೆ ತಾನು ಸಾವ​ನ್ನ​ಪ್ಪಿ​ದ​ರೆ ಮುಂದಿನ ಪೀಳಿ​ಗೆ​ಯ​ವರೂ ತನ್ನನ್ನು ನೆನ​ಪಿ​ನಲ್ಲಿ ಇಟ್ಟು​ಕೊ​ಳ್ಳ​ಬೇಕು ಎಂಬುದು 71 ವರ್ಷದ ದಕ್ಷಿಣ 24 ಪರ​ಗಣ ಜಿಲ್ಲೆಯ ಶಾಸ​ಕ ಜಯಂತ್‌ ನಾಸ್ಕರ್‌ ಅವರ ಮಹ​ದಾಸೆ. ಹೀಗಾಗಿ ಕೋಲ್ಕ​ತಾ​ದಿಂದ ಶಿಲ್ಪಿ​ಗ​ಳನ್ನು ಕರೆ​ತಂದು ತನ್ನಷ್ಟೇ ಗಾತ್ರದ ಎರಡು ಪ್ರತಿ​ಮೆ​ಗ​ಳನ್ನು ನಿರ್ಮಿ​ಸಿಕೊಂಡಿ​ದ್ದಾನೆ.

ತನಗೆ ಹಲವು ವೈರಿ​ಗ​ಳಿ​ದ್ದಾರೆ. ಟಿಎಂಸಿ​ಯಲ್ಲೂ ತನ​ಗೆ ವೈರಿ​ಗ​ಳಿ​ದ್ದಾರೆ. ಒಂದು ವೇಳೆ ನನ್ನನ್ನು ಕೊಲೆ ಮಾಡಿ​ದ​ರೆ ಮುಂದಿ​ನ ಪೀಳಿ​ಗೆ​ಯ​ವರು ಈ ಮೂರ್ತಿ​ಗ​ಳ ಮೂಲಕ ತನ್ನನ್ನು ನೆನ​ಪಿ​ನಲ್ಲಿ ಇಟ್ಟು​ಕೊ​ಳ್ಳು​ತ್ತಾರೆ. ಹೀಗಾಗಿ ಮೂರ್ತಿ​ಗ​ಳನ್ನು ನಿರ್ಮಿ​ಸಿ​ದ್ದೇನೆ ಎಂದು ಜಯಂತ್‌ ಹೇಳಿ​ದ್ದಾರೆ.