Asianet Suvarna News Asianet Suvarna News

ಕೊರೋನಾಗೆ TMC ಅಭ್ಯರ್ಥಿ ಬಲಿ, ಆಯೋಗದ ವಿರುದ್ಧ ಕೊಲೆ ಕೇಸ್ ದಾಖಲಿಸಿದ ಪತ್ನಿ!

ಕೊರೋನಾ ವೈರಸ್‌ ಎಲ್ಲರನ್ನೂ ಕಾಡುತ್ತಿದೆ. ರಾಜಕಾರಣಿಗಳು, ಸೆಲೆಬ್ರೆಟಿಗಳು, ಉದ್ಯಮಿಗಳು ಸೇರಿದಂತೆ ಹಲವರು ಕೊರೋನಾಗೆ ಬಲಿಯಾಗಿದ್ದಾರೆ. ಇದೀಗ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿ ಕೊರೋನಾಗೆ ಬಲಿಯಾಗಿದ್ದಾರೆ. ಇತ್ತ ಅಭ್ಯರ್ಥಿ ಪತ್ನಿ ಚುನಾವಣಾ ಆಯೋಗದ ವಿರುದ್ಧ ಮರ್ಡರ್ ಕೇಸ್ ದಾಖಲಿಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ

TMC candidate died from covid 19 wife filed a murder case against Election Commission ckm
Author
Bengaluru, First Published Apr 28, 2021, 8:45 PM IST

ಕೋಲ್ಕತಾ(ಏ.28): ಕೊರೋನಾ ವರೈಸ್‌ಗೆ ಬಲಿಯಾದ ರಾಜಕಾರಣಿಗಳ ಪೈಕಿ ಇದೀಗ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ನಾಯಕ ಕಾಜಲ್ ಸಿನ್ಹಾ ಸೇರಿಕೊಂಡಿದ್ದಾರೆ. ಖಾರ್ದಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಕಾಜಲ್ ಸಿನ್ಹಾ ಕೊರೋನಾದಿಂದ ನಿಧನರಾಗಿದ್ದಾರೆ. ಕಾಜಲ್ ಸಿನ್ಹಾಗೆ ಕೊರೋನಾ ಅಂಟಿಕೊಳ್ಳಲು ಚುನಾವಣೆ ಕಾರಣ. ಚುನಾವಣಾ ಆಯೋಗ ನಡೆಸಿದ ಕೊಲೆ ಎಂದು ಕಾಜಲ್ ಸಿನ್ಹಾ ಪತ್ನಿ ದೂರು ದಾಖಲಿಸಿದ್ದಾರೆ.

ಕೊರೋನಾ ಸೋಂಕಿನಿಂದ ಸಂಗೀತ ಗಾಯಕ, ಪದ್ಮಭೂಷಣ್ ರಾಜನ್ ಮಿಶ್ರಾ ನಿಧನ!

ಕೊರೋನಾ ವೈರಸ್ ರೋಗಲಕ್ಷಣ ಕಾರಣ ಆಸ್ಪತ್ರೆ ದಾಖಲಾದ ಕಾಜಲ್ ಸಿನ್ಹಾ ಆರೋಗ್ಯ ಕ್ಷೀಣಿಸಿತ್ತು. ಎಪ್ರಿಲ್ 25 ರಂದು ಕಾಜಲ್ ಸಿನ್ಹಾ ನಿಧನರಾಗಿದ್ದಾರೆ. ಇದೀಗ ಎಪ್ರಿಲ್ 28ರಂದು ಕಾಜಲ್ ಸಿನ್ಹಾ ಪತ್ನಿ ನಂದಿತಾ ಸಿನ್ಹಾ ಪೊಲೀಸ್ ಠಾಣೆಯಲ್ಲಿ ದೂರುದಾಖಲಿಸಿದ್ದಾರೆ. ಕೊರೋನಾ ದೇಶದಲ್ಲಿ ತಾಂಡವವಾಡುತ್ತಿರುವಾಗ ಪಶ್ಚಿಮ ಬಂಗಾಳದಲ್ಲಿ 8 ಹಂತದ ಮತದಾನ ನಡೆಸಿದ ಕಾರಣವೇ ಪತಿ ನಿಧನರಾಗಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಇದು ಕೊನೆಯ ಗುಡ್ ಮಾರ್ನಿಂಗ್; ಮನಕಲುಕುತ್ತಿದೆ ಕೊರೋನಾಗೆ ಬಲಿಯಾದ ವೈದ್ಯೆಯ ಪೋಸ್ಟ್!

ಚುನಾವಣಾ ಆಯೋಗವೇ ನನ್ನ ಪತಿಯನ್ನು ಕೊಲೆ ಮಾಡಿದೆ ಎಂದು ದೂರಿನಲ್ಲಿ ಹೇಳಿದ್ದಾರೆ. ಚುನಾವಣಾ ಆಯೋಗ ಉಪಾಧ್ಯಕ್ಷ ಸುದೀಪ್ ಜೈನ್ ಹೆಸರನ್ನು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಚುನಾವಣಾ ಆಯೋಗದ ಅಸಡ್ಡೆ ಮತ್ತು ನಿರ್ಲಕ್ಷ್ಯ ವರ್ತನೆಯಿಂದ ನನ್ನ ಪತಿ ಹಾಗೂ ಹಲವರ ಸಾವಿಗೆ ಕೊರೋನಾ ಕಾರಣವಾಗಿದೆ ಎಂದು ದೂರಿನಲ್ಲಿ ನಂದಿತಾ ಸಿನ್ಹಾ ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ 8 ಹಂತದ ಮತದಾನ ಮಾಡಲಾಗಿದೆ. 8ನೇ ಹಾಗೂ ಅಂತಿಮ ಹಂತದ ಮತದಾನ ನಾಳೆ(ಏ.29)ಕ್ಕೆ ನಡೆಯಲಿದೆ. ಕೊರೋನಾ ಹೆಚ್ಚಾದ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ ಬಾಕಿ ಉಳಿದ ಹಂತದ ಮತದಾನವನ್ನು ಒಂದೇ ಹಂತದಲ್ಲಿ ನಡೆಸಲು ಆಗ್ರಹಿಸಿತ್ತು

Follow Us:
Download App:
  • android
  • ios