ಕರ್ನಾಟಕದ ಶಾಸಕನ ಸೋಗಿನಲ್ಲಿ ತಿರುಪತಿ ಟಿಕೆಟ್ ವಂಚನೆ: ಒಬ್ಬನ ಬಂಧನ!
ತಾನು ತಿರುಪತಿ ದೇಗುಲದ ಸಮಿತಿ ಸದಸ್ಯ ಮತ್ತು ಕರ್ನಾಟಕದ ಶಾಸಕ ಎಂದು ನಂಬಿಸಿ ಕರ್ನಾಟಕದ ಹಲವು ಭಕ್ತಾದಿಗಳಿಗೆ ತಿರುಪತಿಯಲ್ಲಿ ವಿವಿಧ ಸೇವೆಗಳ ಟಿಕೆಟ್ ಕೊಡುವುದಾಗಿ ಭಾರೀ ಮೊತ್ತದ ಹಣ ಸ್ವೀಕರಿಸಿ ನಕಲಿ ಟಿಕೆಟ್ ನೀಡಿ ವಂಚಿಸುತ್ತಿದ್ದ ವ್ಯಕ್ತಿಯನ್ನು ತಿರುಮಲ ಪೊಲೀಸರು ವಿಜಯವಾಡದಲ್ಲಿ ಬಂಧಿಸಿದ್ದಾರೆ.
ವಿಜಯವಾಡ (ನ.22): ತಾನು ತಿರುಪತಿ ದೇಗುಲದ ಸಮಿತಿ ಸದಸ್ಯ ಮತ್ತು ಕರ್ನಾಟಕದ ಶಾಸಕ ಎಂದು ನಂಬಿಸಿ ಕರ್ನಾಟಕದ ಹಲವು ಭಕ್ತಾದಿಗಳಿಗೆ ತಿರುಪತಿಯಲ್ಲಿ ವಿವಿಧ ಸೇವೆಗಳ ಟಿಕೆಟ್ ಕೊಡುವುದಾಗಿ ಭಾರೀ ಮೊತ್ತದ ಹಣ ಸ್ವೀಕರಿಸಿ ನಕಲಿ ಟಿಕೆಟ್ ನೀಡಿ ವಂಚಿಸುತ್ತಿದ್ದ ವ್ಯಕ್ತಿಯನ್ನು ತಿರುಮಲ ಪೊಲೀಸರು ವಿಜಯವಾಡದಲ್ಲಿ ಬಂಧಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ದೇವರಚಿಕ್ಕನ ಹಳ್ಳಿಯ ದೇವರಾಜೇಗೌಡ ಅವರು ಟಿಟಿಡಿಗೆ ತಾನು ಮಾರುತಿ ಎಂಬ ವ್ಯಕ್ತಿಯಿಂದ ಶ್ರೀವಾಣಿ ದರ್ಶನಕ್ಕೆ ನಕಲಿ ಟಿಕೆಟ್ ಪಡೆದು 42,500 ರು. ವಂಚನೆಗೊಳಗಾಗಿದ್ದೇನೆ ಎಂದು ಇ-ಮೇಲ್ ರವಾನಿಸಿದ್ದರು.
ಈ ಹಿನ್ನೆಲೆಯಲ್ಲಿ ಟಿಟಿಡಿಯ ಭ್ರಷ್ಟಾಚಾರ ನಿಗ್ರಹ ತಪಾಸಕರಾದ ಶಂಕರ್ ಬಾಬು ಅವರು ತಿರುಮಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರಿಂದ ಪೊಲೀಸರು ಮಾರುತಿ ಪತ್ತೆಗೆ ಬಲೆ ಬೀಸಿ ಕೊನೆಗೂ ವಿಜಯವಾಡದಲ್ಲಿ ಈತನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಡೀಪ್‌ಫೇಕ್ ಬಗ್ಗೆ ಪ್ರಧಾನಿ ಮೋದಿ ಕಳವಳ: ಕೃತಕ ಬುದ್ಧಿಮತ್ತೆಯ ದುರ್ಬಳಕೆ ಬಗ್ಗೆ ಅತಂಕ
ಯಾರು ಈ ಮಾರುತಿ?
ಮೂಲತ: ಬೆಂಗಳೂರಿನಲ್ಲಿ ಟಿಟಿಡಿಯ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದ ಮಾರುತಿ, ತಾನು ಟಿಟಿಡಿಯ ಸದಸ್ಯ ಹಾಗೂ ಕರ್ನಾಟಕದ ಶಾಸಕ ಎಂದು ಜನರನ್ನು ನಂಬಿಸಿ ವಂಚಿಸುತ್ತಿದ್ದ. ಒಮ್ಮೆ ಬೆಂಗಳೂರಿನ ವಕೀಲರೊಬ್ಬರಿಗೆ ತಿರುಪತಿಯಲ್ಲಿ ಶ್ರೀವಾಣಿ ದರ್ಶನಕ್ಕೆ ‘ಆಜೀವ ದಾನಿ’ ನಕಲಿ ಟಿಕೆಟ್ ಕೊಟ್ಟು 28.03 ಲಕ್ಷ ರು. ಪಡೆದು ವಂಚಿಸಿದ್ದ. ಇದಕ್ಕೂ ಮೊದಲು ಈತನು ಟಿಟಿಡಿ ಸದಸ್ಯರಾಗಿದ್ದ ಒಬ್ಬ ಶಾಸಕರಿಗೆ ಆಪ್ತ ಸಹಾಯಕನಾಗಿಯೂ ಕೆಲಸ ಮಾಡಿದ್ದು ಬೆಂಗಳೂರಿನ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣವೊಂದು ದಾಖಲಾಗಿತ್ತು.
ಕೆನಡಾ, ಇಸ್ರೇಲ್‌ನಿಂದ ನಿಮಗೂ ಕಾಲ್ ಬರ್ತಿದ್ಯಾ? ಲಕ್ಷಾಂತರ ರೂ. ಹಣ ಕಳ್ಕೋಬೋದು ಹುಷಾರ್!