ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋದ ಬೆಂಗಳೂರು ಮಹಿಳೆ ಮೇಲೆ ಬಿದ್ದ ಮರದ ಕೊಂಬೆ; ಗಂಭೀರ ಗಾಯ
ತಿರುಪತಿ ತಿಮ್ಮಪ್ಪನ ದರ್ಶನಕ್ಕೆಂದು ಬೆಂಗಳೂರಿನಿಂದ ಹೋದ ಮಹಿಳೆಯ ತಲೆ ಮೇಲೆ ಮರದ ಕೊಂಬೆಯೊಂದು ಮುರಿದು ಬಿದ್ದು, ಅಲ್ಲಿಯೇ ಮೂರ್ಛೆ ಹೋಗಿ ಬಿದ್ದಿದ್ದಾಳೆ.
ಬೆಂಗಳೂರು (ಜು.13): ಕಳೆದ ಮೂರು ದಿನಗಳ ಹಿಂದೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆಂದು ಬೆಂಗಳೂರಿನಿಂದ ಹೋದ ಮಹಿಳೆಯ ತಲೆ ಮೇಲೆ ಮರದ ಕೊಂಬೆಯೊಂದು ಮುರಿದು ಬಿದ್ದು, ಅಲ್ಲಿಯೇ ಮೂರ್ಛೆ ಹೋಗಿ ಬಿದ್ದಿದ್ದಾಳೆ. ಕೂಡಲೇ ಗಂಭೀರ ಗಾಯಗೊಂಡ ಮಹಿಳೆಯರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ತಿರುಪತಿ ದರ್ಶನಕ್ಕೆ ಹೋದ ಮಹಿಳೆ ತಲೆ ಮೇಲೆ ಕೊಂಬೆ ಬಿದ್ದು ಗಂಭೀರ ಗಾಯಗೊಂಡಿದ್ದಾಳೆ. ಮರದ ಕೊಂಬೆ ಬಿದ್ದ ದೃಶ್ಯ ಏಷಿಯಾನೆಟ್ ಸುವರ್ಣ ನ್ಯೂಸ್ ಗೆ ಲಭ್ಯವಾಗಿದೆ. ಬೆಂಗಳೂರು ಗ್ರಾಮಾಂತರ ಆನೆಕಲ್ ಬಳಿಯ ಹಾರಗದ್ದೆ ನಿವಾಸಿ ಉಮಾರಾಣಿ (54) ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡ ಮಹಿಳೆ ಆಗಿದ್ದಾರೆ. ಈ ಘಟನೆ ಕಳೆದ ಮೂರು ದಿನಗಳ ಹಿಂದೆ ಅಂದರೆ ಜು.10ರ ಸಂಜೆ ವೇಳೆ ನಡೆದಿದೆ. ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ, ಆಂಜನೇಯಸ್ವಾಮಿ ದರ್ಶನಕ್ಕೆ ತೆರುಳುತ್ತಿದ್ದ ಉಮಾರಾಣಿಯ ತಲೆ ಮೇಲೆ ಭಾರಿ ಎತ್ತರಕ್ಕೆ ಬೆಳೆದಿದ್ದ ಬೃಹತ್ ಮರದ ಕೊಂಬೆಯೊಂದು ಮುರಿದು ಬಿದ್ದಿದೆ.
ಅಪರ್ಣಾ ನಿಧನದ ಬೆನ್ನಲ್ಲಿಯೇ ಬೆಂಗಳೂರು ನಮ್ಮ ಮೆಟ್ರೋ ಮಾರ್ಗದಲ್ಲಿ ಹೊಸ ಮಹಿಳೆಯ ಧ್ವನಿ!
ಇನ್ನು ಮರದ ಕೊಂಬೆ ತಲೆಯ ಮೇಲೆ ಬೀಳುತ್ತಿದ್ದಂತೆ ಮಹಿಳೆ ಸ್ಥಳದಲ್ಲಿಯೇ ರಕ್ತಸ್ರಾವಗೊಂಡು ಕುಸಿದು ಬಿದ್ದಿದ್ದಾಳೆ. ದೇವಸ್ಥಾನಕ್ಕೆ ಬಂದಿದ್ದ ಇತರೆ ಭಕ್ತಾದಿಗಳು ದೇವ ಸ್ಥಾನದ ಆಡಳಿತ ಮಂಡಳಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಮಹಿಳೆಯನ್ನು ಟಿಟಿಡಿ ಮಂಡಳಿಯ ಸಿಬ್ಬಂದಿ ಸ್ಥಳೀಯ ಟಿಟಿಡಿ ಪದ್ಮಾವತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈಗ ಉಮಾರಾಣಿ ಅವರು ಚೇತರಿಸಿಕೊಂಡಿಲ್ಲ.
ತೂಕ ಇಳಿಸಿಕೊಳ್ಳಲು ಹೋಗಿ ಜೀವಂತ ಅಸ್ಥಿಪಂಜರವಾದ ಸುಂದರಿ; ಈಕೆ ದೇಹದಲ್ಲಿ ಹುಡುಕಿದರೂ ಪಾವ್ ಕೆಜಿ ಮಾಂಸವಿಲ್ಲ!
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋದವರು ವಾಪಸ್ ಬೆಂಗಳೂರಿಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಗಾಬರಿಯಾಗಿದ್ದರು. ಆದರೆ, ಅಲ್ಲಿ ಮರದ ಕೊಂಬೆ ಬಿದ್ದು, ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಬರುವುದು ತಡವಾಗಿದೆ. ಚಿಕಿತ್ಸೆ ಪಡೆದು ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡ ನಂತರ ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡುವುದಾಗಿ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.